ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಧರ್ಮಸ್ಥಳ ಷಡ್ಯಂತ್ರದ ಕೇಂದ್ರ ಬಿಂದುವೇ ಕಾಂಗ್ರೆಸ್‌: ಸಿ.ಟಿ.ರವಿ ಆರೋಪ

ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ಎಸ್ಐಟಿ ತನಿಖೆಗೆ ಆಗ್ರಹ
Published : 4 ಸೆಪ್ಟೆಂಬರ್ 2025, 13:07 IST
Last Updated : 4 ಸೆಪ್ಟೆಂಬರ್ 2025, 13:07 IST
ಫಾಲೋ ಮಾಡಿ
Comments
ದೇಶಪಾಂಡೆ ಕ್ಷಮೆ ಕೇಳಲಿ
‘ಆರ್.ವಿ.ದೇಶಪಾಂಡೆ ಅವರು ಹಿರಿಯ ರಾಜಕಾರಣಿ, ಹಿರಿಯ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಅವರು ಅವಮಾನ ಆಗುವ ರೀತಿಯಲ್ಲಿ ಉತ್ತರ ನೀಡಬಾರದಿತ್ತು. ಇದಕ್ಕಾಗಿ ಅವರು ಕ್ಷಮೆ ಕೇಳಬೇಕು’ ಎಂದು ಹೇಳಿದ ಸಿ.ಟಿ.ರವಿ, ‘ದಾವಣಗೆರೆ ಎಸ್‌ಪಿ ಕುರಿತು ಶಾಸಕರು ಆಡಿದ ಮಾತಿನ ಮಾಹಿತಿ ನನಗಿಲ್ಲ, ಆದರೆ ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಅಧಿಕಾರಿಗಳು ಸಂವಿಧಾನಕ್ಕೆ ನಿಷ್ಠರಾಗಿರಬೇಕು, ಅಧಿಕಾರದಲ್ಲಿರುವವರ ಮನೆ ಬಾಗಿಲು ಕಾಯವಂತಾಗಬಾರದು’ ಎಂದರು.
ಜಿಎಸ್‌ಟಿ ಸರಳ
‘ಕೇಂದ್ರ ಸರ್ಕಾರ ಜಿಎಸ್‌ಟಿ ಸರಳಗೊಳಿಸಿದ್ದರಿಂದ ಇಡೀ ದೇಶದ ಜನ ಖುಷಿಪಟ್ಟಿದ್ದಾರೆ, ಆದರೆ ಕಾಂಗ್ರೆಸ್‌ಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಪಂಚ ಗ್ಯಾರಂಟಿ ಹೆಸರಲ್ಲಿ ರಾಜ್ಯ ಸರ್ಕಾರ ವಿಧಿಸದ ತೆರಿಗೆಯೇ ಇಲ್ಲ. ಹೊಟ್ಟೆಯಲ್ಲಿರುವ ಮಗುವಿನ ಮೇಲೆ ತೆರಿಗೆ ಹಾಕುವುದೊಂದೇ ಬಾಕಿ’ ಎಂದು ಸಿ.ಟಿ.ರವಿ ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT