ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆ ಸ್ಥಾಪನೆಯಾಗಿ ನಾಲ್ಕು ವರ್ಷವಾಗುತ್ತಲೇ ಪ್ರಥಮ ಮಹಿಳಾ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರ ನಿಯೋಜನೆ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನಡುವೆ ಸಮನ್ವಯ ಸಾಧಿಸುವ ಸವಾಲು ಗೆದ್ದರೆ ಜಿಲ್ಲಾಧಿಕಾರಿ ಆಗಿ ಯಶಸ್ವಿಯಾಗುವುದು ನಿಶ್ಚಿತ ಎಂಬಂತಹ ಸ್ಥಿತಿ ಇದೆ.

ಹೊಸ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಶ್ರವಣ್ ಅವರನ್ನು ಜನರು ಇನ್ನೂ ನೆನಪಿಟ್ಟುಕೊಂಡಿದ್ದಾರೆ. ಅದೇ ತರಹ ದಕ್ಷತೆ, ನಿಷ್ಠೆ, ಪ್ರಾಮಾಣಿಕತೆಯ ಜಿಲ್ಲಾಧಿಕಾರಿಯನ್ನು ಜಿಲ್ಲೆಯ ಜನತೆ ನಿರೀಕ್ಷಿಸುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಕವಿತಾ ಅವರಿಂದಲೂ ದಕ್ಷ ಕಾರ್ಯಭಾರ ಸಾಧ್ಯವಾದೀತು ಎಂಬ ನಂಬಿಕೆ ಇಟ್ಟುಕೊಳ್ಳಲಾಗಿದೆ.

ನೂತನ ಜಿಲ್ಲೆಯಲ್ಲಿ 38 ಜಿಲ್ಲಾಮಟ್ಟದ ಇಲಾಖಾ ಕಚೇರಿಗಳು ಮಾತ್ರ ಸೃಜನೆಯಾಗಿದ್ದು, ಇನ್ನೂ 37 ಕಚೇರಿಗಳನ್ನು ಸೃಜಿಸುವುದು ಬಾಕಿ ಇದೆ. ನೂತನ ಜಿಲ್ಲಾಡಳಿತ ಭವನಕ್ಕೆ ಸ್ಥಳ ತೆಗೆದಿರಿಸಲಾಗಿದೆ. ಆದರೆ ಕಟ್ಟಡ ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ತಾಲ್ಲೂಕು ಕೇಂದ್ರಗಳಲ್ಲಿ ಸಹ ಆಡಳಿತ ಸೌಧ ನಿರ್ಮಾಣ ಸಹಿತ ಹಲವು ಕೆಲಸಗಳು ಬಾಕಿ ಇವೆ.

ಸಮನ್ವಯ ಕೊರತೆ: ಮಾಜಿ ಸಚಿವ ಆನಂದ್ ಸಿಂಗ್ ಅವರ ಕನಸಿನ ಕೂಸು ವಿಜಯನಗರ ಜಿಲ್ಲೆ. ಆದರೆ ಜಿಲ್ಲೆ ರಚನೆಯಾದ ಬಳಿಕ ಅವರ ಪುತ್ರ ಸೋಲು ಅನುಭವಿಸಿದರು. ಸಹಜವಾಗಿಯೇ ಅವರು ಪರೋಕ್ಷವಾಗಿ ನೇಪಥ್ಯಕ್ಕೆ ಸರಿದುಬಿಟ್ಟರು. ನೂತನ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ವೇಗ ಸಿಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನಡುವಿನ ಸಮನ್ವಯ ಕೊರತೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಜಿಲ್ಲಾಡಳಿತ ಭವನ, ವೈದ್ಯಕೀಯ ಕಾಲೇಜು, ಕಾನೂನು ಕಾಲೇಜು ಸ್ಥಾಪನೆಗೆ ಅನುದಾನದ ಕೊರತೆ ಪ್ರತಿ ಹಂತದಲ್ಲಿ ಕಾಡಿತು. ಕೆಕೆಆರ್ಡಿಬಿ ಅನುದಾನದಲ್ಲಿ ತಾರತಮ್ಯ ಆಗುತ್ತಿದೆ ಎಂಬ ಹೊಸಪೇಟೆ ಜನರ ಕೂಗು ಅರಣ್ಯ ರೋದನವಾಗಿದೆ.

ಮನೆ ನಿರ್ಮಾಣ ಇಲ್ಲ: ಕೆಎಂಇಆರ್ಸಿ ಅನುದಾನದಲ್ಲಿ ಕಾಮಗಾರಿಗಳು ಸಮರ್ಪಕವಾಗಿ ಸಾಗಿವೆಯೇ ಎಂದು ಕೇಳಿದರೆ ಅದೂ ಇಲ್ಲ. ಗಣಿಬಾಧಿತ 19 ಕ್ಯಾಂಪ್ಗಳು ಹೊಸಪೇಟೆ ಸುತ್ತಮುತ್ತಲಲ್ಲೇ ಇದ್ದು, ಸಂತ್ರಸ್ತರಿಗೆ ಅಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಕೆಲಸ ಆರಂಭವಾಗಿಯೇ ಇಲ್ಲ. ದುಡ್ಡಿದ್ದರೂ ಅದು ಬಳಕೆಯಾಗದ ಸ್ಥಿತಿ ಜಿಲ್ಲೆಯದು. ಇಲ್ಲಿ ಸಹ ಸಮನ್ವಯದ ಕೊರತೆಯೇ ಇದ್ದು, ಇದನ್ನು ಜಿಲ್ಲಾಧಿಕಾರಿ ಬಗೆಹರಿಸುವ ರೀತಿ ಹೇಗಿರುತ್ತದೆ ಎಂಬುದರ ಮೇಲೆ ಅವರ ಯಶಸ್ಸು ಸಾಧ್ಯ ಎಂದೇ ಹೇಳಲಾಗುತ್ತಿದೆ.

ಸಚಿವರಿಗೆ ಆಪ್ತರು ನಿರೀಕ್ಷೆ

ಅಪಾರ ಕವಿತಾ ಎಸ್.ಮನ್ನಿಕೇರಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರ ವಸತಿ ಇಲಾಖೆಯಲ್ಲೇ ಕೆಲಸ ಮಾಡಿದವರು. ಕರ್ನಾಟಕ ಗೃಹ ಮಂಡಳಿಯ ಆಯುಕ್ತರಾಗಿ 2.7 ವರ್ಷ ಕೆಲಸ ಮಾಡಿದ ಅವರು ಸಹಜವಾಗಿಯೇ ಸಚಿವರ ನಿಕಟಸಂಪರ್ಕ ಸಾಧಿಸಿದವರು. ಹೀಗಾಗಿ ಜಿಲ್ಲೆಯ ವಸತಿ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ದಟ್ಟವಾಗಿದೆ. ಕೆಎಎಸ್ ಅಧಿಕಾರಿಯಾದ ಕವಿತಾ ಪ್ರೊಬೆಷನರಿಯಾಗಿ ಮಂಡ್ಯದಲ್ಲಿ ಸೇವೆ ಆರಂಭಿಸಿ 2007ರಲ್ಲಿ ಸೇಡಂನ ಉಪವಿಭಾಗಾಧಿಕಾರಿಯಾದರು. ಬಳಿಕ ಯಾದಗಿರಿಯಲ್ಲಿ ಉಪವಿಭಾಗಾಧಿಕಾರಿಯಾದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರಾಗಿ ಕೆಲಸ ಮಾಡಿದ ಕವಿತಾ 2012ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದರು. ಬಳಿಕ ವಿಜಯಪುರ ಎಡಿಸಿ ಆದರು. ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅವರು ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಕೆಎಸ್ಆರ್ಟಿಸಿ ನಿರ್ದೇಶಕಿಯಾಗಿ ಕೆಲಸ ಮಾಡಿದರು. ಬಳಿಕ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ 2 ವರ್ಷ ಕೆಲಸ ಮಾಡಿದ ನಂತರ ಕೆಎಚ್ಬಿ ಆಯುಕ್ತರಾದರು.

‘ಕೆಲಸ ತೃಪ್ತಿ ತಂದಿದೆ’

‘ಹೊಸ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ತೃಪ್ತಿ ಇದೆ. ಎರಡು ಹಂಪಿ ಉತ್ಸವಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಮನೆ ಬಾಗಿಲಿಗೆ ಹಕ್ಕುಪತ್ರ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಯಾವುದೇ ಒತ್ತಡ ಇದ್ದರೂ ಅದನ್ನು ಸಾರ್ವಜನಿಕವಾಗಿ ತೋರ್ಪಡಿಸದೆ ಖುಷಿಯಿಂದ ಕೆಲಸ ಮಾಡುವ ಅವಕಾಶ ಆಗಿದೆ’ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಂಗಳವಾರ ಹೇಳಿದರು. ‘ಅಭಿವೃದ್ಧಿ ಕೆಲಸಗಳನ್ನು ಸಾಕಷ್ಟು ಆರಂಭಿಸಲಾಗಿದೆ. ಹೊಸ ಜಿಲ್ಲಾಡಳಿತ ಕಟ್ಟಡ ಸಮುಚ್ಛಯಕ್ಕೂ ಪ್ರಸ್ತಾವ ಸಲ್ಲಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಅದೂ ಕೈಗೂಡುತ್ತದೆ. 2 ವರ್ಷ 2 ತಿಂಗಳ ಕಾಲ ಇಲ್ಲಿ ಮಾಡಿದ ಕೆಲಸ ಸದಾ ನೆನಪಲ್ಲಿ ಉಳಿಯುತ್ತದೆ’ ಎಂದರು.

ಅಧಿಕಾರ ಸ್ವೀಕಾರ ಇಂದು

ಹುದ್ದೆಯ ನಿರೀಕ್ಷೆಯಲ್ಲಿದ್ದ ಕವಿತಾ ಎಸ್.ಮನ್ನಿಕೇರಿ ಅವರು ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬುಧವಾರ ಬೆಳಿಗ್ಗೆ 11ಕ್ಕೆ ನಿರ್ಗಮಿತ ಡಿ.ಸಿ ಎಂ.ಎಸ್.ದಿವಾಕರ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವರ್ಗಾವಣೆಯಾಗಿರುವ ದಿವಾಕರ್ ಅವರಿಗೆ ಸದ್ಯ ಸ್ಥಳ ತೋರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.