ಕೂಡ್ಲಿಗಿ: ‘ಶ್ರೀರಾಮುಲು ಎಲ್ಲಾ ಕಡೆ ಪಕ್ಷ ಸಂಘಟನೆ ಮಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ’ ಎಂದು ಬಿಜೆಪಿ ಮುಖಂಡ ರಾಮದುರ್ಗದ ಸೂರ್ಯಪಾಪಣ್ಣ ಹೇಳಿದರು.

ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದ ಅವರು, ‘2018ರಿಂದಲೂ ನಾವು ಸ್ಥಳೀಯರು ಎಂದು ಪ್ರತಿಪಾದಾಸುತ್ತಾ ಬಂದಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಲಾಗುವುದು ಎಂದು ಈ ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರೇ ಹೇಳಿದ್ದರು. ಆ ಮಾತಿನಂತೆ ನಡೆದುಕೊಳ್ಳಬೇಕು’ ಎಂದರು.

‘ಕೊಟ್ಟೂರು ರಥೋತ್ಸವದ ಪಾದಯಾತ್ರೆಯಲ್ಲಿ ರಾಜಕೀಯ ಇಲ್ಲ. ಇದರಲ್ಲಿ ಯಾವ ಬಣಗಳೂ ಇಲ್ಲ. ಮೊದಲೇ ನಿರ್ಧರಿಸಿದಂತೆ ಬೆಂಬಲಿಗರೊಂದಿಗೆ ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಆರಂಭಿಸಿದೆವು. ಆದರೆ, ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಶ್ರೀರಾಮುಲು ನಮ್ಮ ಪಕ್ಷದ ಹಿರಿಯ ಮುಖಂಡರು. ಅವರ ಬಗ್ಗೆ ಗೌರವ ಇದೆ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಸ್ಥಗಿಗೊಂಡಿವೆ. ಇನ್ನು ಸ್ವಲ್ಪ ದಿನ ಕಾದು ಹೋರಾಟ ರೂಪಿಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷ ಬಂಗಾರು ಹನುಮಂತು, ಮಂಡಲ ಅಧ್ಯಕ್ಷ ಕೆ.ನಾಗರಾಜ, ಪ್ರಧಾನ ಕಾರ್ಯದರ್ಶಿ ಪಿ. ಮಂಜುನಾಥ ನಾಯಕ, ಮುಖಂಡರಾದ ಕೆ.ಎಚ್. ವೀರನಗೌಡ, ಗುಳಿಗಿ ವೀರೇಂದ್ರ, ಜೋಗಿಹಳ್ಳಿ ನಾಗಣ್ಣ, ಸಿ.ಬಿ. ಗುರು, ರಾಘವೇಂದ್ರ, ಬಾಣದ ಶಂಕರ, ಕೊಟ್ರೇಶ, ಶಂಭಯ್ಯ, ಶರಣಗೌಡ, ಪತ್ರೆಪ್ಪ, ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.