ಗುರುವಾರ , ಅಕ್ಟೋಬರ್ 21, 2021
24 °C

ಹೊಸಪೇಟೆ ‌| ಮತ್ತೆ ತೈಲ ದರದಲ್ಲಿ ಭಾರಿ ಏರಿಕೆ: ಪೆಟ್ರೋಲ್‌ ₹109, ಡೀಸೆಲ್‌ ₹99

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಒಂದು ವಾರದ ಅಂತರದಲ್ಲಿ ಪೆಟ್ರೋಲ್‌, ಡೀಸೆಲ್‌ ಸರಾಸರಿ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿದೆ.

ಪೆಟ್ರೋಲ್‌ ಈಗಾಗಲೇ ನೂರರ ಗಡಿ ದಾಟಿದ್ದು, ಸತತವಾಗಿ ಏರಿಕೆಯಾಗುತ್ತಲೇ ಮುನ್ನಡೆದಿದೆ. ಈಗ ಡೀಸೆಲ್‌ ಸರದಿ. ಪ್ರತಿ ಲೀಟರ್‌ ಡೀಸೆಲ್‌ ದರ ನೂರರ ಸನಿಹಕ್ಕೆ ಬಂದಿದ್ದು, ಒಂದೆರಡು ದಿನಗಳಲ್ಲಿ ಶತಕ ಬಾರಿಸುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಹೋದ ವಾರ (ಅ.3) ಪ್ರತಿ ಲೀಟರ್‌ ಪೆಟ್ರೋಲ್‌ ಸರಾಸರಿ ಬೆಲೆ ₹107.26 ಇತ್ತು. ಈ ವಾರ ₹109.07ಕ್ಕೆ ಏರಿಕೆಯಾಗಿದ್ದು, ₹1.74 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್‌ ದರ ₹97.56 ಇತ್ತು. ಈ ವಾರ ₹99.74 ಆಗಿದ್ದು, ₹2.18 ಪೈಸೆ ಏರಿಕೆ ಕಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು