ಹೊಸಪೇಟೆ (ವಿಜಯನಗರ): ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದ ಬಾಕಿ ಉಳಿದಿರುವ ಎಂ.ಸಿ.ಟಿ.ಎಸ್. ಪ್ರೋತ್ಸಾಹಧನ ಬಿಡುಗಡೆ ಮಾಡುವುದು ಸಹಿತ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೋಮವಾರ ಇಲ್ಲಿ ಎಐಯುಟಿಯುಸಿ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಡಿಎಚ್ಒ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, ಆಶಾ ಕಾರ್ಯಕರ್ತೆಯರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಎ.ಎನ್.ಸಿ., ಪಿ.ಎನ್.ಸಿ, ಎಂ.ಆರ್1, ಎಂ.ಆರ್2 ಇನ್ನಿತರ ಅನೇಕ ಕಾಂಪೋನೆಂಟ್ಗಳನ್ನು ಪೋರ್ಟಲ್ ಮೂಲಕ ತುಂಬಿದ್ದರೂ, ವೆರಿಫಿಕೇಷನ್ಗೆ ತೋರಿಸುತ್ತಿಲ್ಲ. ಇದರಿಂದಾಗಿ ಕಾರ್ಯಕರ್ತರಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷೆ ಎ.ಶಾಂತಾ, ಕಾರ್ಯದರ್ಶಿ ಗೌರಮ್ಮ ಕೆ.ಎಸ್.ಮಾತನಾಡಿದರು.

ಮನವಿ ಸ್ವೀಕರಿಸಿದ ಡಿಎಚ್ಒ ಡಾ.ಶಂಕರ್ ನಾಯಕ್, ತಾಂತ್ರಿಕ ಸಮಸ್ಯೆಗಳಿಂದಾಗಿ ಎಂ.ಸಿ.ಟಿ.ಎಸ್ ಪ್ರೋತ್ಸಾಹ ಧನ ಬಂದಿಲ್ಲ. ಒಂದು ವಾರದಲ್ಲಿ ಸೂಕ್ತವಾಗಿ ಈ ಸಮಸ್ಯೆಗೆ ಪರಿಹಾರ ನೀಡಲಾಗುವುದು, ತಾಂತ್ರಿಕ ಸಮಸ್ಯೆಯಿಂದ ಟಿ ಸಿ ಸಂಬಂಧಿತ ಪ್ರೋತ್ಸಾಹ ಧನ 3 ವರ್ಷಗಳಿಂದ ಬಂದಿಲ್ಲ. ಅದನ್ನು ಬಗೆಹರಿಸುವ ಪ್ರಕ್ರಿಯೆ ನಡೆಯುತ್ತಿದೆ ಹಾಗೂ ಇನ್ನಿತರ ಬೇಡಿಕೆಗಳ ಕುರಿತು ಪರೀಶೀಲನೆ ಮಾಡಲಾಗುವುದು ಎಂದರು.

ಸಂಘದ ಉಪಾಧ್ಯಕ್ಷೆ ಗೌರಮ್ಮ, ಮುಖಂಡರಾದ ಮಹೇಶ್ವರಿ, ಮಂಗಳಾ, ನಾಗಮ್ಮ, ಸ್ಪೂರ್ತಿ, ಚೆನ್ನಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.