ಹೂವಿನಹಡಗಲಿ: ಪಟ್ಟಣದ ಹರಪನಹಳ್ಳಿ ರಸ್ತೆಯ ಸೇವಾಲಾಲ್ ಸಮುದಾಯ ಭವನ ಹಿಂಭಾಗದ ಸಾಥಿಯಾಡಿ ದೇವಿ ಗದ್ದುಗೆ ಬಳಿ ಬಂಜಾರ ಸಮುದಾಯದವರು ಮಂಗಳವಾರ ಸೀತ್ಲಾ ಹಬ್ಬ ಆಚರಿಸಿದರು.
ಗದ್ದುಗೆಯಲ್ಲಿ ಏಳು ಮಕ್ಕಳ ತಾಯಿ ಪ್ರತಿಬಿಂಬಿಸುವ ಏಳು ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಪಟ್ಟಣದಲ್ಲಿರುವ ಬಂಜಾರ ಸಮುದಾಯದವರು ದೇವಿ ಸನ್ನಿಧಾನದಲ್ಲಿ ಸಾಮೂಹಿಕ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
‘ದಡಾರ (ಅಮ್ಮ), ಪ್ಲೇಗ್, ಕಣ್ಣುಬೇನೆ ಇನ್ನಿತರೆ ಸಾಂಕ್ರಾಮಿಕ ರೋಗಗಳು ಮಕ್ಕಳಿಗೆ ಬಾರದಿರಲಿ ಎಂದು ಪ್ರಾರ್ಥಿಸಿ ದೇವಿಯನ್ನು ಸಂತುಷ್ಟಗೊಳಿಸಲು ಲಂಬಾಣಿಗರು ಪ್ರತಿವರ್ಷ ಸೀತ್ಲಾ ಹಬ್ಬ ಆಚರಿಸುತ್ತೇವೆ’ ಎಂದು ಜಯನಾಯ್ಕ ತಿಳಿಸಿದರು.
ತಾಲ್ಲೂಕು ಬಂಜಾರ ಕ್ಷೇಮಾಭಿವೃದ್ಧಿ ಸಂಘ, ಬಂಜಾರ ನೌಕರರ ಸಂಘದವರು ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.