ಹೊಸಪೇಟೆ (ವಿಜಯನಗರ): ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಕೊನೆಯ ಹಂತಕ್ಕೆ ತಲುಪಿದ್ದರೂ, ಅದು ನಿಧಾನವಾಗತೊಡಗಿದೆ. ಬುಧವಾರ ಸಂಜೆಯ ವೇಳೆಗೆ ಶೇ 86.79ರಷ್ಟು ಮನೆಗಳಲ್ಲಿ ಸಮೀಕ್ಷೆ ಕೊನೆಗೊಂಡಿದೆ.

ಜಿಲ್ಲೆಯಲ್ಲಿ ಇನ್ನೂ 57,806 ಮನೆಗಳಲ್ಲಿ ಸಮೀಕ್ಷೆ ನಡೆಸುವುದು ಬಾಕಿ ಇದೆ. ಇದರಲ್ಲಿ ಎಪಿಎಲ್ ಕಾರ್ಡ್ದಾರರ ಸಂಖ್ಯೆ 9,325 ಮತ್ತು ಬಿಪಿಎಲ್ ಕಾರ್ಡ್ದಾರರ ಸಂಖ್ಯೆ 48,481 ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಶಶಿಕಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಾಯವಾಣಿ ಆರಂಭ: ಹೊಸಪೇಟೆ ತಾಲ್ಲೂಕಿನಲ್ಲಿ ಬಹುತೇಕ ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು. ಬಾಕಿ ಉಳಿದ ಮನೆಗಳ ಸಮೀಕ್ಷೆಗಾಗಿ ಹತ್ತಿರದ ಸರ್ಕಾರಿ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ಶಶಿಕಲಾ ತಿಳಿಸಿದರು.

ಕೆಲವು ಮನೆಗಳ ಸಮೀಕ್ಷೆ ಆಗದೇ ಬಾಕಿ ಉಳಿದ ಅಂತಹ ಕುಟುಂಬದ ಮನೆಗಳ ಮಾಲೀಕರು ಕಚೇರಿಗಳನ್ನು ಸಂಪರ್ಕಿಸಬಹುದು. ಸದರಿ ಕಚೇರಿಗಳ ಸಹಾಯವಾಣಿ, ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಲ್ಲಿ ಅಂತಹ ಮನೆಗಳಿಗೆ ಸಮೀಕ್ಷಕರು ಖುದ್ದಾಗಿ ಬಂದು ತಮ್ಮ ಮನೆಗಳ ಸಮೀಕ್ಷೆಯನ್ನು ಮಾಡಿಕೊಂಡು ಹೋಗಲಿದ್ದಾರೆ

ಹೊಸಪೇಟೆಯ ಕಚೇರಿಗಳು ಮತ್ತು ಸಹಾಯವಾಣಿ ಸಂಖ್ಯೆ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಚೇರಿ, ಮಾರುತಿ ನಿಲಯ, ಪುಣ್ಯಾನಂದಪುರಿ ನಗರ, 35ನೇ ವಾರ್ಡ್, ಆಕಾಶವಾಣಿ ಹೊಸಪೇಟೆ. ಸಹಾಯವಾಣಿ ಸಂಖ್ಯೆ 97429 04615, 94486 97679, 81471 35283, ದೂ.08394-796292. ತಾಲ್ಲೂಕು ಕಚೇರಿ, ತಹಶೀಲ್ದಾರರ ಕಾರ್ಯಾಲಯ ಹೊಸಪೇಟೆ. ಸಹಾಯವಾಣಿ ದೂ.0839 4224208, ಮೊ.90353 63608. ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಸರ್ವಮಂಗಳ ನಿಲಯ, 6ನೇ ಅಡ್ಡ ರಸ್ತೆ ನೆಹರು ಕಾಲೊನಿ, ಸಹಾಯವಾಣಿ 95908 77292, 99861 08388.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.