ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾರಥಾನ್‌: ಇಥಿಯೋಪಿಯಾ ಓಟಗಾರ್ತಿ ಅಸ್ಸೇಫಾ ವಿಶ್ವದಾಖಲೆ

Published 24 ಸೆಪ್ಟೆಂಬರ್ 2023, 19:02 IST
Last Updated 24 ಸೆಪ್ಟೆಂಬರ್ 2023, 19:02 IST
ಅಕ್ಷರ ಗಾತ್ರ

ಬರ್ಲಿನ್ (ಎಎಫ್‌ಪಿ): ಇಥಿಯೋ ಪಿಯಾದ ಟಿಗಿಸ್ಟ್‌ ಅಸ್ಸೇಫಾ ಅವರು ಮಹಿಳೆಯರ ಮ್ಯಾರಥಾನ್‌ ವಿಶ್ವದಾಖಲೆಯನ್ನು ಭಾನುವಾರ ಎರಡು ನಿಮಿಷಗಳಿಗಿಂತ ಹೆಚ್ಚು ಅಂತರದಿಂದ ಮುರಿದರು. ಬರ್ಲಿನ್‌ ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕೆನ್ಯಾದ ಇಲ್ಯುಡ್‌ ಕಿಪ್ಚೊಗೆ ಅವರು ದಾಖಲೆ ಐದನೇ ಬಾರಿಗೆ ಅಗ್ರಸ್ಥಾನ ಪಡೆದ ಹಿರಿಮೆಗೆ ಪಾತ್ರರಾದರು.

ಅಸ್ಸೇಫಾ ಅವರು 2 ಗಂಟೆ 11 ನಿಮಿಷ 53 ಸೆಕೆಂಡಗಳಲ್ಲಿ ಗುರಿತಲುಪಿ, ಷಿಕಾಗೊದಲ್ಲಿ ಕೆನ್ಯಾದ ಬ್ರಿಜಿಡ್‌ ಕೊಸೆಗಿ 2019ರಲ್ಲಿ ಸ್ಥಾಪಿಸಿದ್ದ  2:14:04ರ ದಾಖಲೆಯನ್ನು ಮುರಿದರು. ‘ನಾನು ವಿಶ್ವದಾಖಲೆ ಮುರಿಯಬೇಕೆಂಬ ಆಸೆ ಹೊಂದಿದ್ದೆ. ಆದರೆ 2ನಿಮಿಷಗಳಿಗಿಂತ ಹೆಚ್ಚು ಅಂತರದಲ್ಲಿ ಆಗಬಹುದೆಂಬ ನಿರೀಕ್ಷೆಯಿರಲಿಲ್ಲ’ ಎಂದು 29 ವರ್ಷದ ಅಸ್ಸೇಫಾ ಪ್ರತಿಕ್ರಿಯಿಸಿದರು.

ಕೆನ್ಯಾದ ಶೀಲಾ ಚೆಪ್ಕಿರುಯಿ ಆರು ನಿಮಿಷಗಳಿಂದ ಹಿಂದೆ ಬಿದ್ದು ಎರಡನೇ ಸ್ಥಾನ ಪಡೆದರೆ, ತಾಂಜೇನಿಯಾದ ಮಗ್ದಲಿನಾ ಶವುರಿ ಸುಮಾರು ಏಳು ನಿಮಿಷ ಹಿಂದೆಬಿದ್ದು ಮೂರನೇ ಸ್ಥಾನ ಪಡೆದರು.

ಪುರುಷರ ವಿಭಾಗದಲ್ಲಿ ವಿಶ್ವದಾಖಲೆ ವೀರ ಕಿಪ್ಚೊಗೆ 2ಗಂಟೆ 02 ನಿಮಿಷ 42 ಸೆಕೆಂಡುಗಳಲ್ಲಿ ಗುರಿತಲುಪಿದರು. ಅವರು
ಸ್ವದೇಶದ ವಿನ್ಸೆಂಟ್‌ ಕಿಪ್ಕೆಪೊಯಿ ಅವರನ್ನು 31 ಸೆಕೆಂಡುಗಳಿಂದ ಹಿಂದೆಹಾಕಿದರು. ಆದರೆ ಕಿಪ್ಚೊಗೆ ಅವರಿಗೆ ಕಳೆದ ವರ್ಷ ಸ್ಥಾಪಿಸಿದ್ದ ತಮ್ಮದೇ ದಾಖಲೆ  (2:01:09) ಸುಧಾರಿಸಲು ಆಗಲಿಲ್ಲ.

ಈ ಹಿಂದೆ ಇಥಿಯೋಪಿಯದ ಹೇಲೆ ಗೆಬ್ರೆಸೆಲಾಸಿ ಅವರು ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದ್ದು ದಾಖಲೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT