ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ: ಪ್ರವಾಸಿಗರಿಗೆ ನೆರಳಿನ ವ್ಯವಸ್ಥೆ

Published 24 ಫೆಬ್ರುವರಿ 2024, 13:22 IST
Last Updated 24 ಫೆಬ್ರುವರಿ 2024, 13:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿ ಸುತ್ತಮುತ್ತ ಬಿಸಿಲಿನ ತಾಪ ಜಾಸ್ತಿಯಾಗುತ್ತಿದ್ದು, ವಿಜಯ ವಿಠ್ಠಲ ದೇವಸ್ಥಾನದ ಸಮೀಪ ಪ್ರವಾಸಿಗರಿಗಾಗಿ ಬಿದಿರಿನ ತಟ್ಟಿಯ ಮೇಲೆ ಕಾಸೆ ಹುಲ್ಲು ಹಾಸಿ ನೆರಳಿನ ವ್ಯವಸ್ಥೆ ಮಾಡಲಾಗಿದೆ.

ಬ್ಯಾಟರಿ ವಾಹನ ಬರುವ ತನಕ ಕಾಯಲು ಪ್ರವಾಸಿಗರಿಗೆ ಈ ನೆರಳಿನ ವ್ಯವಸ್ಥೆಯನ್ನು ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ಮಾಡಿದೆ.

ರಾಜ ಪ್ರಾಂಗಣದ ಬಳಿಯೂ ಬೇಕು: ಮಹಾನವಮಿ ದಿಬ್ಬ ಸಮೀಪದ ರಾಜ ಪ್ರಾಂಗಣದ ಬಳಿಯೂ ಇಂತಹದೇ ನೆರಳಿನ ವ್ಯವಸ್ಥೆ ಬೇಕು. ಅಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ಎಳನೀರು ಮಾರಾಟದ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT