ಸಿಂದಗಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಿಂದ ತಮ್ಮನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತೆಯರು, ಸಹಾಯಕಿಯರು ಸೋಮವಾರ ಪಟ್ಟಣದ ತಾಲ್ಲೂಕು ಪ್ರಜಾಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಣ್ಣಾರಾಯ ಈಳಗೇರ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕಡಿಮೆ ಗೌರವ ಧನ, ಹೆಚ್ಚು ಕೆಲಸ ಎಂಬ ಸರ್ಕಾರದ ಧೋರಣೆ ಕೈಬಿಟ್ಟು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಅವರಿಗೂ ವಿಶೇಷ ಗೌರವಧನ ನೀಡಬೇಕು’ ಎಂದು ಒತ್ತಾಯಿಸಿದರು.

‘ಈವರೆಗೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಶಾಲಾ ಶಿಕ್ಷಕರಿಗೆ ಸರ್ಕಾರ ಸಮೀಕ್ಷೆ ಮಾಡುವ ಪ್ರತಿ ಮನೆಗೆ ₹ 100 ಹಾಗೂ ಒಟ್ಟು ₹ 5 ಸಾವಿರ ಗೌರವ ಧನ ನೀಡಿದೆ. ಜೊತೆಗೆ ಅವರಿಗೆ ಎರಡು ದಿನಗಳ ತರಬೇತಿ ಕೂಡ ನೀಡಲಾಗಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಯಾವುದೇ ಸೌಲಭ್ಯ ನೀಡದೇ ಸಮೀಕ್ಷೆ ಮಾಡಲು ಆದೇಶಿಸುವುದು ಸರಿಯಲ್ಲ’ ಎಂದು ಡಿವೈಎಫ್ಐ ತಾಲ್ಲೂಕು ಸಮಿತಿ ಅಧ್ಯಕ್ಷ ರಮೇಶ ಸಾಸಾಬಾಳ ಟೀಕಿಸಿದರು.

ಅಂಗನವಾಡಿ ನೌಕರರ ಸಂಘ ತಾಲ್ಲೂಕು ಸಮಿತಿ ಕಾರ್ಯದರ್ಶಿ ಪ್ರತಿಭಾ ಕುರಡೆ, ಕಾರ್ಯಕರ್ತೆಯರಾದ ಲಕ್ಷ್ಮೀ ಕುಂಬಾರ, ಜಗದೇವಿ ಪಾಸೋಡಿ, ಭಾಗ್ಯ ಸಾತಿಹಾಳ, ಶಾಂತಾ ಢವಳಾರ, ಕೆ.ಪಿ.ಸಜ್ಜನ, ಸವಿತಾ ಕೊಕಟನೂರ, ಜೈನಾಬಿ ಮುರಡಿ, ಶರಣಮ್ಮ ಕುಂಬಾರ, ಸಿ.ಎಂ.ಹೊಸಮನಿ, ಆರ್.ಎಂ.ಯಂಟಮಾನ, ಮಾಬೂಬಿ, ಕೆ.ಎಸ್.ಬಂದೆ, ಶಹನಾಜ ಸಾಲೋಟಗಿ, ಎ.ವಿ.ಗಾಳಿಮಠ, ಸಿ.ಜಿ.ಬೋವಿ, ವೈ.ಎಂ.ನಾರಾಯಣಕರ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಗೌರವ ಧನವಿಲ್ಲವೆಂದರೆ ಯಾವ ನ್ಯಾಯ?

ತರಬೇತಿ ಗೌರವ ಧನ ಪಡೆದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದ ಶಾಲಾ ಶಿಕ್ಷಕರನ್ನು ಕೈಬಿಟ್ಟು ಈಗ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ಹೆಗಲಿಗೆ ಸಮೀಕ್ಷೆಯ ಭಾರ ಹೊರಿಸಿದ್ದು ಅನ್ಯಾಯದ ಪರಮಾವಧಿ. ಕಾರ್ಯಕರ್ತೆಯರಲ್ಲಿ ಸಮೀಕ್ಷೆಗೆ ಅಗತ್ಯವಾಗಿರುವ ಸ್ಮಾರ್ಟ್ ಫೋನ್ ಇಲ್ಲ. ಆಪರೇಟ್ ಮಾಡಲೂ ಬರುವುದಿಲ್ಲ. ತರಬೇತಿ ಇಲ್ಲ ಗೌರವಧನವೂ ಇಲ್ಲ. ಗೌರವ ಸೇವೆ ಮಾತ್ರ ಎಂದರೆ ಯಾವ ನ್ಯಾಯ? ಈಗಾಗಲೇ ಹಲವು ಕಾರ್ಯಬಾಹುಳ್ಯಗಳಲ್ಲಿ ಒದ್ದಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮೀಕ್ಷೆಯ ಹೊರೆ ಇನ್ನಷ್ಟು ಭಾರವಾಗಿದೆ. ಹೀಗಾಗಿ ಸಮೀಕ್ಷೆಯಿಂದ ಅವರನ್ನು ತಕ್ಷಣವೇ ಕೈಬಿಡಬೇಕು ಎಂದು ಸಿಐಟಿಯು ತಾಲ್ಲೂಕು ಸಮಿತಿ ಅಧ್ಯಕ್ಷೆ ಸರಸ್ವತಿ ಮಠ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.