ಹೊರ್ತಿ: ಹೊರ್ತಿಯ ಸೋನಿಯಾ ನಗರದ ರೈತ ಶಿವಮೂರ್ತಿ ಸಿದರಾಯ ಲೋಣಿ ಮತ್ತು ಮಲ್ಲಪ್ಪ ವಿಠೋಬಾ ಲೋಣಿ ಸಹೋದರರು ತಮ್ಮ 2 ಎಕರೆ ಜಮೀನಿನಲ್ಲಿ ಗೋಲ್ಡನ್ ಸೀತಾಫಲ ಬೆಳೆದು ಉತ್ತಮ ಆದಾಯ ಕಂಡುಕೊಂಡಿದ್ದಾರೆ.

ಕಳೆದ 6 ವರ್ಷಗಳ ಹಿಂದೆ ₹100ಕ್ಕೆ ಒಂದರಂತೆ 600 ಸಸಿಗಳನ್ನು ತಂದು 2 ಎಕರೆ ಜಮೀನಿನಲ್ಲಿ ಗೋಲ್ಡನ್ ಸೀತಾ ಫಲ ಬೆಳೆದಿದ್ದಾರೆ. ವರ್ಷಕ್ಕೊಮೆ ಮಾತ್ರ ಫಲ ನೀಡುವ ಗಿಡಗಳು ಎರಡೂವರೆ ತಿಂಗಳು ಪೂರ್ತಿ ಫಲ ನೀಡಿವೆ.

‘ಹನಿ ನೀರಾವರಿ ಮೂಲಕ ಗೋಲ್ಡನ್ ಸೀತಾ ಫಲ ಹಣ್ಣಿನ ಬೆಳೆ ಬೆಳೆದಿದ್ದು, ತಿಪ್ಪೆ ಗೊಬ್ಬರ ಹಾಕಿ, ಒಂದು ಸಲ ಕೀಟನಾಶಕ ಸಿಂಪಡಣೆ ಮಾಡಲಾಗುತ್ತದೆ. ಇರುವೆಗಳು ಕಂಡು ಬಂದರೆ ಪರಟಾನ್ ಪುಡಿ ಸಿಂಪಡಿಸಲಾಗುತ್ತದೆ. ವಾರಕ್ಕೆ 40 ಟ್ರೇ ಹಣ್ಣುಗಳನ್ನು ಕಟಾವು ಮಾಡುತ್ತೇವೆ. ಒಟ್ಟು 75 ದಿನದ ಬೆಳೆ ಇದಾಗಿದ್ದು, ಒಂದು ವಾರಕ್ಕೆ ಒಂದು ಸಲ ಕಾಯಿಗಳನ್ನು ಕಟಾವು ಮಾಡುತ್ತೇವೆ’ ಎಂದು ರೈತ ಶಿವಮೂರ್ತಿ ಸಿದರಾಯ ಲೋಣಿ ತಿಳಿಸಿದರು.

‘ಈ ವರ್ಷದ ₹50 ಸಾವಿರ ಖರ್ಚು ತೆಗೆದು ಉತ್ತಮ ಆದಾಯ ಸಿಗಲಿದೆ. ಅಥರ್ಗಾದವರು ಹೊಲಕ್ಕೆ ಬಂದು 1 ಟ್ರೇಗೆ ₹1 ಸಾವಿರದಂತೆ ಖರೀದಿಸಿ, ಪ್ರತಿ ವರ್ಷ ಉತ್ತಮ ದರ ಕೊಡುವ ಬೆಂಗಳೂರು ಮಾರುಕಟ್ಟೆಗೆ ಸಾಗಿಸುತ್ತಾರೆ. ಕಳೆದ ವರ್ಷವು ಉತ್ತಮ ಲಕ್ಷ ಲಾಭ ನೀಡಿತ್ತು. ಈ ವರ್ಷ ಲಾಭದಾಯಕ ಫಲ ಸಿಕ್ಕಿಲ್ಲ’ ಎಂದು ಹೇಳಿದರು.

ಅಧಿಕ ಮಳೆ ಕಾರಣ ಈ ವರ್ಷ ಕಳೆದ ವರ್ಷಕ್ಕಿಂತ ಗೋಲ್ಡನ್ ಸೀತಾಫಲ ಬೆಳೆಯಿಂದ ₹1.5 ಲಕ್ಷ ಆದಾಯ ಕಡಿಮೆ ಬಂದಿದೆ. ಹಾನಿಯಾದ ತೋಟಗಾರಿಕಾ ಬೆಳೆಗಳಿಗೆ ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ
ಶಿವಮೂರ್ತಿ ಸಿದರಾಯ ಲೋಣಿ ರೈತ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.