ವಿಜಯಪುರ: ತಾಲ್ಲೂಕಿನ ಮಹಲ್ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಿಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತ್ವದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳು ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಲಾಕ್ ಡೌನ್ ಸಂದರ್ಭಕ್ಕಿಂತ ಮೊದಲು ಹಳ್ಳಿಗೆ ಬರುತ್ತಿದ್ದ ಬಸ್ ಈಗ ಬರುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ದಿನವೂ ಕಾಲೇಜು ತಲುಪಲು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.

ದಿನವೂ ಆಟೊ ರಿಕ್ಷಾಗಳಿಗೆ ಅಧಿಕ ಹಣ ಕೊಟ್ಟು ಬರಬೇಕಾಗಿದೆ. ಕೊರೊನಾ ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಕೆಲಸ ಮಾಡಿ ಆಟೊಗೆ ದುಡ್ಡು ಕೊಟ್ಟು ಕಾಲೇಜಿಗೆ ಬರುತ್ತಿದ್ದಾರೆ. ಈ ಕೂಡಲೇ ಸಾರಿಗೆ ಇಲಾಖೆ ಮಹಲ್ ಗ್ರಾಮಕ್ಕೆ ಲಾಕ್ ಡೌನ್ ಮೊದಲು ಓಡಿಸುತ್ತಿದ್ದಂತೆ ಈಗ ಮಹಲ್ ಹಳ್ಳಿಗೆ ಬಸ್ ಕಳುಹಿಸಬೇಕು ಎಂದುಸಾರಿಗೆ ನಿಯಂತ್ರಕರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಮನವಿಗೆ ಸ್ಪಂದಿಸಿದಸಾರಿಗೆ ನಿಯಂತ್ರಕರು, ನಾಳೆಯಿಂದಲೇ ಮಹಲ್ ಹಳ್ಳಿಗೆ ಬಸ್ ಕಳುಹಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಕಾರ್ಯದರ್ಶಿಸುರೇಖಾ ಕಡಪಟ್ಟಿ, ಸಂಘಟನೆಯ ಪ್ರಮುಖರಾದ ಭೀಮಣ್ಣ ವಾಲಿಕಾರ, ಶರಣು ವಾಲಿಕಾರ, ಬಸವರಾಜ, ಮಲ್ಲಮ್ಮ, ಲಕ್ಷ್ಮಿ, ಪ್ರಿಯಾ, ಪುನೀತ, ಶಾಂತಪ್ಪ ಕೊಂಡಗುಳಿ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.