ವಿಜಯಪುರ: ವಚನ ಸಾಹಿತ್ಯದ ತಾಡೋಲೆಗಳನ್ನು ಹುಡುಕಿ ತಂದು ವಚನಗಳನ್ನು ಮುದ್ರಿಸಿ ಸಂರಕ್ಷಣೆ ಮಾಡಿದ ಶ್ರೇಯಸ್ಸು ಡಾ. ಫ.ಗು ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೈ ಕೊಣ್ಣೂರ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಜರುಗಿದ ಡಾ.ಫ.ಗು.ಹಳಕಟ್ಟಿಯವರ ಜೀವನ ಮತ್ತು ಸಾಹಿತ್ಯ ಕುರಿತು ಚಿಂತನೆ ಹಾಗೂ ಜಯದೇವಿತಾಯಿ ಲಿಗಾಡೆಯವರ ಕನ್ನಡ ಸೇವೆಯ ಕುರಿತು ಜರುಗಿದ ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ವಿಶ್ರಾಂತ ಮುಖ್ಯೋಪಾಧ್ಯಾಯ ಇಕ್ಬಾಲ್ ಅರಳಿಮಟ್ಟಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರಗಳ ಆಗರವಾಗಿ, ಮಾನವೀಯ ಮೌಲ್ಯಗಳ ಆಧಾರ ಸ್ತಂಭಗಳಾಗಿ ಹೋದ ಫ.ಗು.ಹಳಕಟ್ಟಿಯವರನ್ನು ಹಾಗೂ ಕನ್ನಡ ಸೇವೆ ಮಾಡಿದ ಕನ್ನಡತಿ ಜಯದೇವಿ ತಾಯಿ ಲಿಗಾಡೆಯವರ ಚಿಂತನೆ ಮಾಡುವ ಮೂಲಕ ಜಿಲ್ಲಾ ಕಸಾಪ ಮಹತ್ವದ ಪಾತ್ರ ವಹಿಸಿದೆ ಎಂದರು.

‘ಫ.ಗು.ಹಳಕಟ್ಟಿಯವರ ಜೀವನ ಹಾಗೂ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿದ ತಿಕೋಟಾ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ, ಚಿಕ್ಕಂದಿನಲ್ಲಿಯೇ ಉನ್ನತ ಶಿಕ್ಷಣ ಪಡೆಯಲು ಮುಂಬೈಗೆ ಹೋಗಿ ಬಂದರೂ ಸಹ ಮರಾಠಿ ಪ್ರಭಾವಕ್ಕೆ ಒಳಗಾಗದೇ ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೇಮವನ್ನು ಹೊಂದಿದ್ದರು ಎಂದರು.

ವಚನ ಸಾಹಿತ್ಯದ ಸಂಗ್ರಹದಲ್ಲಿ ತೊಡಗಿಕೊಂಡು ತಮ್ಮ ಸ್ವಂತ ಮನೆಯನ್ನು ಮಾರಿ ‘ಹಿತಚಿಂತಕ’ ಎಂಬ ಮುದ್ರಣಾಲಯವನ್ನು ಸ್ಥಾಪಿಸಿ ಹಲವಾರು ಕೃತಿಗಳನ್ನು ಪ್ರಕಟಿಸಿ, ಸಾಹಿತ್ಯ ಪ್ರೇಮ ಮೆರೆದಿದ್ದಾರೆ ಎಂದರು.

‘ಜಯದೇವಿತಾಯಿ ಲಿಗಾಡೆಯವರ ಕನ್ನಡ ಸೇವೆ’ ಕುರಿತು ಉಪನ್ಯಾಸ ನೀಡಿದ ಸಾಹಿತಿ ಶಿಲ್ಪಾ ಭಸ್ಮೆ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಿದ್ದು ಎಂಬುದನ್ನು ಬಲವಾಗಿ ಪ್ರತಿಪಾದಿಸಿದ ಜಯದೇವಿ ತಾಯಿ ಲಿಗಾಡೆಯವರು ಮಾತೃಭಾಷೆ ಕನ್ನಡದ ಅಭಿಮಾನವನ್ನು ಎತ್ತಿ ತೋರಿಸಿದ್ದಾರೆ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಬಸಲಿಂಗಮ್ಮ, ಗುಂಡಪ್ಪ ಕುಂಬಾರ, ಸುಜಾತಾ, ಈರಣ್ಣ ಪಟ್ಟಣಶೆಟ್ಟಿ, ಪದ್ಮಾವತಿ ಗುಡಿ, ಸಿದ್ದಣ್ಣ ವಡಗೇರಿ, ಸುನಂದಾ ಕೋರಿ, ಶೋಭಾ ಬಡಿಗೇರ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ, ಶಶಿಕಲಾ ನಾಯ್ಕೋಡಿ ಹಾಗೂ ಮೆಹತಾಬ್ ಕಾಗವಾಡ, ಡಾ.ಮಾಧವ ಗುಡಿ, ಪರವೀನ ಶೇಖ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.