ವಿಜಯಪುರ: ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಬುಧವಾರ 21 ದಿನ ಪೂರೈಸಿತು.

ರೈತ ಮುಖಂಡ ಬಸವರಾಜ ಕುಂಬಾರ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧಿಸುವ ರಾಜಕಾರಣಿಗಳಿಗೆ ಜಿಲ್ಲೆಯ ಬಡ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಜಿಲ್ಲೆಯ ಪ್ರಭಾವಿ ಸಚಿವರು ಹಾಗೂ ಶಾಸಕರು ಮುಂದಾಗಿ ಧರಣಿ ನಿರತರಿಗೆ ಪಕ್ಕಾ ಆಶ್ವಾಸನೆ ನೀಡಿ ಧರಣಿ ಅಂತ್ಯಗೊಳಿಸಿ ಅದಷ್ಟು ಬೇಗನೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತೀಯ ಝಾಮ ಝಾಮ್ ಅಸೋಸಿಯೇಷನ್ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಜಮಾದಾರ ಮಾತನಾಡಿ, ನಮ್ಮ ಸಚಿವರು, ಶಾಸಕರು ಜನ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ. ಜಿಲ್ಲೆಯ ಜನತೆ ಬಗ್ಗೆ ಇವರಿಗೆ ಕಿಂಚಿತೂ ಕಳಕಳಿ ಇಲ್ಲ, ಜಿಲ್ಲೆಯ ಆಸ್ತಿಯನ್ನು ಹೇಗೆ ಕೊಳ್ಳೆ ಹೊಡೆಯಬೇಕೆಂಬ ಉದ್ದೇಶದಿಂದ ಭಂಡತನಕ್ಕೆ ಇಳಿದಿದ್ದಾರೆ, ಮುಂಬರವ ದಿನಗಳಲ್ಲಿ ಭಾರಿ ವಿರೋಧ ವ್ಯಕ್ತ ಆಗುವುದರಲ್ಲಿ ಸಂಶಯ ಇಲ್ಲ ಈಗಾಗಲೇ ಸಾಮಾನ್ಯ ಜನತೆ ಎಚ್ಚೆತುಕೊಂಡಿದೆ, ನಿಮ್ಮ ಅಂತ್ಯದ ಕಾಲ ಸಮಿಸುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ವೈದ್ಯಕೀಯ ಕಾಲೇಜುಗಳು ಇದ್ದರೂ ಏನು ತಪ್ಪಿಲ್ಲ, ಸರ್ಕಾರ ಆದಷ್ಟು ಬೇಗನೆ ಸರ್ಕಾರಿ ವೈಧ್ಯಕೀಯ ಕಾಲೇಜು ಆರಂಭಿಸಿದಿದ್ದರೆ ಮುಂಬರವ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯಪುರ ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳಾದ ಕೆ.ಎನ್. ಮೇಟಿ, ಡಾ.ಬಾಬು ಸಜ್ಜನ, ಮಹಾದೇವ ದೇವರ, ಶ್ರೀದೇವಿ ರಜಪೂತ, ಬಿ. ಎಸ್. ನವಲಿ, ಮಂಜುಳಾ ಅಂಗಡಿ, ದಸ್ತಗೀರ ಸಾಲೋಟಗಿ, ರವಿ ಕಿತ್ತೂರು, ಆರ್. ಡಿ. ಶಿವನಗುತ್ತಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸಿದರು.

ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ್ ಕಾಂಚ್ಯಾಣಿ, ಎಂ. ಜಿ. ಯಾದವಾಡ, ಎಸ್. ವೈ. ಗದಗ, ಸೋಮನಗೌಡ ಎಸ್. ಪಾಟೀಲ, ಬಿ. ಎಸ್. ಸಾರವಾಡ ಬೆಂಬಲ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಅಧ್ಯಕ್ಷ ಅಶೋಕ ಸೌದಾಗಾರ, ಮುತ್ತಣ್ಣ ಕಬಾಡೆ, ಸಾಯಬಣ್ಣ ನಿರಂಜನ, ಎಸ್. ಸಿ. ಸಾತಪುತೆ, ಸಿದ್ರಾಮ ಹೊನ್ನಮೋರೆ, ಯಲ್ಲಪ್ಪ ಸಂಕ್ಯನ್ನವರ, ಪರಮಾನಂದ ಹಳ್ಳೂರ, ಎಂ.ಆರ್ ಸೌದಾಗರ ಬೆಂಬಲ ವ್ಯಕ್ತಪಡಿಸಿ, ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.