ಮಂಗಳವಾರ, ಸೆಪ್ಟೆಂಬರ್ 27, 2022
27 °C
ತಾಳಿಕೋಟೆಯಿಂದ ವಿಜಯಪುರ ವರೆಗೆ ತಲೆ ಮೇಲೆ ಕಲ್ಲುಹೊತ್ತು ಪಾದಯಾತ್ರೆ

ಪುರಸಭೆ ಭ್ರಷ್ಟಾಚಾರದ ತನಿಖೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಳಿಕೋಟೆಯಿಂದ ತಲೆ ಮೇಲೆ ಕಲ್ಲುಹೊತ್ತು ಪಾದಯಾತ್ರೆ ಮೂಲಕ ವಿಜಯಪುರಕ್ಕೆ ಸೋಮವಾರ ತಲುಪಿದ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡರು ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಅವರಿಗೆ ಮನವಿ ಸಲ್ಲಿಸಿದರು.

ತಾಳಿಕೋಟೆಯ ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲ್ಮಟ್ಟದ ಸೇತುವೆಯನ್ನು ಬಸ್ ನಿಲ್ದಾಣದ ವರೆಗೆ ಮಾಡಬೇಕು ಹಾಗೂ ಪುರಸಭೆಯಲ್ಲಿನ ಭ್ರಷ್ಟಾಚಾರದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಜಿ+1 ಮಾದರಿಯ 600 ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಬಡವರು ಸಾಲ ಮಾಡಿ ಪುರಸಭೆಗೆ ಕೋಟ್ಯಂತರ ರೂಪಾಯಿ ಭರಣಾ ಮಾಡಿ ಐದು ವರ್ಷಗಳು ಗತಿಸುತ್ತಾ ಬಂದಿದ್ದು, ಇತ್ತಕಡೆ ಮನೆಯೂ ಇಲ್ಲದೆ ಮತ್ತು ಹಣವನ್ನು ಕಳೆದುಕೊಂಡು, ಮಾಡಿದ ಸಾಲದ ಬಡ್ಡಿ ಕಟ್ಟಲಾಗದೆ ಪರಿತಪಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತಾಳಿಕೋಟಿ ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಾಮಾಜಿಕ ಕಾರ್ಯಕರ್ತ ನದಿಂ ಕಡು ಅವರು ತಲೆಮೇಲೆ ಕಲ್ಲು ಹೊತ್ತುಕೊಂಡು ತಾಳಿಕೋಟೆಯಿಂದ ವಿಜಯಪುರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು.  

ಮಾಜಿ ಸಚಿವ ಸಿ.ಎಸ್. ನಾಡಗೌಡ, ಸುರೇಶ ನಾಡಗೌಡ, ಚಿನ್ನು ನಾಡಗೌಡ, ನಿಂಗನಗೌಡ ಅಸ್ಕಿ, ಸಂಗಮೇಶ ಛಾಯಾಗೋಳ, ಮಹಿಬೂಬ ಚೋರಗಸ್ತಿ, ಪ್ರಭುಗೌಡ ಮದರಕಲ್, ಆರಿಫ್ ಹೊನ್ನುಟಗಿ, ಜಗದೀಶ ಡೇರೆದ, ಕಾಸಿಂ ಪಟೇಲ್ ಸುರೇಶ ಹಜೇರಿ, ಅಕ್ಕಮಹಾದೇವಿ ಕಟ್ಟಿಮನಿ, ಸತ್ತಾರ ಅವಟಿ, ಮೋದಿನ್ ನಗಾರ್ಚಿ, ಮುನ್ನಾ ಅರ್ಜುಣಗಿ, ಆನಂದ ಗುರಡ್ಡಿ, ಪುರಸಭೆ ಸ್ಥಾಯಿ ಸಮಿುತಿ ಅಧ್ಯಕ್ಷ ಪರಶುರಾಮ ತಂಗಡಗಿ, ಸುರೇಶಕುಮಾರ ಹಜೇರಿ, ಪತ್ತೇಮಹಮ್ಮದ ನಾಯ್ಕೋಡಿ, ಸುರೇಶ ಹಜೇರಿ, ರವಿ ಕಟ್ಟಿಮನಿ, ಸುಭಾಸ ಗೌಡಗೇರಿ, ನಿಂಗನಗೌಡ ದೇಸಾಯಿ, ಬಿ.ಎಸ್. ಗಬಸಾವಳಗಿ, ಶಿವರಾಜ ನಾಗೂರ, ಜೈಭೀಮ ಮುತ್ತಗಿ, ಆರ್.ಟಿ.ಪಾಟೀಲ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.