ವಿಜಯಪುರ: ‘ಉತ್ತರ ಕರ್ನಾಟಕದ 10 ಸಾವಿರ ಯುವಕರಿಗೆ ಹೋಟೆಲ್ ಉದ್ಯಮದಲ್ಲಿ ಉದ್ಯೋಗ ಕೊಡಿಸುವ ಗುರಿ ಹೊಂದಿದ್ದೇನೆ. ಈ ಭಾಗದ ಯುವಕರನ್ನು ಹೋಟೆಲ್ ಉದ್ಯಮದತ್ತ ಸೆಳೆಯಲು ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ನೀಡಲಾಗುವುದು’ ಶುಭಶ್ರೀ ಗ್ರುಪ್ಸ್ನ ವ್ಯವಸ್ಥಾಪಕ ನಿರ್ದೇಶಕ ಶಾಂತೇಶ ಕಳಸಗೊಂಡ ಹೇಳಿದರು.

ನಗರದಲ್ಲಿ ಸೈಕ್ಲಿಂಗ್ ಗ್ರುಪ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ, ಉತ್ತರ ಕರ್ನಾಟಕದಲ್ಲಿ ಯುವಕರಿಗೆ ಹೋಟೆಲ್ ಉದ್ಯಮದಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ಕೊರತೆ ಇದೆ. ಇದನ್ನು ಹೋಗಲಾಡಿಸಿ, ಜಾಗೃತಿ ಮೂಡಿಸಲಾಗುತ್ತದೆ’ ಎಂದರು.

‘ಕೊಲ್ಲಾಪುರದಲ್ಲಿ ಚಹಾ ಮಾರಾಟದಿಂದ ಹೋಟೆಲ್ ಕ್ಷೇತ್ರಕ್ಕೆ ಕಾಲಿಟ್ಟ ನಾನು ಸಾರ್ವಜನಿಕರ ಸಹಕಾರ ಮತ್ತು ಪ್ರೋತ್ಸಾಹದಿಂದ ಈ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯವಾಗಿದೆ. ಸಿದ್ದೇಶ್ವರ ಸ್ವಾಮೀಜಿ ಆಶಯದಂತೆ ಕಾಯಕ ಮುಂದುವರಿಸಿದ್ದೇನೆ’ ಎಂದರು.

ಸೈಕ್ಲಿಂಗ್ ಗ್ರುಪ್ನ ಸಂಸ್ಥಾಪಕ ಮಹಾಂತೇಶ ಬಿರಾದಾರ ಮಾತನಾಡಿ, ‘ಬಡ ಕುಟುಂಬದ ಹಿನ್ನೆಲೆಯ ಶಾಂತೇಶ ಕಳಸಗೊಂಡ ಅವರು ಶ್ರಮಪಟ್ಟು ಹೋಟೆಲ್ ಉದ್ಯಮದಲ್ಲಿ ಅಭಿವೃದ್ಧಿ ಹೊಂದಿದ್ದಾರೆ. ‘ಅಣ್ಣಾಇಡ್ಲಿ’ ಬ್ರ್ಯಾಂಡ್ ಆರಂಭಿಸಿ ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ‘ಅಣ್ಣಾಇಡ್ಲಿ’ ಶಾಖೆ ಪ್ರಾರಂಭಿಸಿದ್ದಾರೆ. ಶೀಘ್ರದಲ್ಲೇ ವಿದೇಶಗಳಿಗೂ ತಮ್ಮ ಉದ್ಯಮ ವಿಸ್ತರಿಸಲಿದ್ದಾರೆ’ ಎಂದು ತಿಳಿಸಿದರು.

ಮುರುಗೇಶ ಪಟ್ಟಣಶೆಟ್ಟಿ, ಸಂತೋಷ ಔರಸಂಗ, ಶಂಭು ಕರ್ಪೂರಮಠ, ಸುರೇಶ ಘೊಣಸಗಿ, ರಾಜು ಯಲಗೊಂಡ, ಅಪ್ಪು ಭೈರಗೊಂಡ, ಪ್ರವೀಣ ಚೌರ, ಅಶ್ಪಾಕ ಮನಗೂಳಿ, ಸಮೀರ ಬಳಗಾರ, ಡಿ.ಕೆ. ತಾವಸೆ, ಗುರುಶಾಂತ ಕಾಪಸೆ, ಶಿವಾನಂದ ಯರನಾಳ, ಗಜಾನನ ಮಂದೋಲಿ, ಸಚೀನ ಪಾಟೀಲ ವೀಣಾ ದೇಶಪಾಂಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.