ವಿಜಯಪುರ: ಪಿಪಿಪಿ ಮಾದರಿಯು ಅತ್ಯಂತ ಅಪಾಯಕಾರಿಯಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾ.ತಿ ಸುಂದರೇಶ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ 84 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶುಕ್ರವಾರ ಪಾಲ್ಗೊಂಡು, ಬೆಂಬಲ ನೀಡಿ ಮಾತನಾಡಿದರು.

ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಜನ ಸಾಮಾನ್ಯರ ಸಂಪೂರ್ಣ ಆಸ್ತಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ, ಶ್ರೀಮಂತ ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದೆ. ಒಂದು ವೇಳೆ ಸರ್ಕಾರ ಖಾಸಗಿಯವರಿಗೆ ವೈದ್ಯಕೀಯ ಕಾಲೇಜು ಮಾರಾಟ ಮಾಡಿದರೆ ಸಂಪೂರ್ಣವಾಗಿ ಆಸ್ಪತ್ರೆ ಕೂಡ ಖಾಸಗೀಕರಣಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಮ್ಯುನಿಸ್ಟ್ ಮುಖಂಡ ಜನಾರ್ಧನ ಕೆ. ಮಾತನಾಡಿ, ಬಡವರು ಹಿಂದುಳಿದವರ ಮತ್ತು ಕೃಷಿ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು. ಕಡಿಮೆ ಕರ್ಚಿನಲ್ಲಿ ಮಕ್ಕಳು ಓದಬಹುದು ಎಂದು ಹೇಳಿದರು.

ಕಮ್ಯೂನಿಸ್ಟ್ ಪಕ್ಷದ ಸದಸ್ಯರಾದ ಪಾಲವ್ವನಹಳ್ಳಿ ಪ್ರಸನ್ನಕುಮಾರ, ಎ.ಎಸ್. ಮೋನಪ್ಪ, ವಿನಯ ಗೌಡ ಇದ್ದರು. ಇಪ್ಟಾ ಸಾಂಸ್ಕೃತಿಕ ತಂಡದಿಂದ ಕ್ರಾಂತಿಕಾರಿ ಹಾಡುಗಳನ್ನು ಹಾಡಲಾಯಿತು.

ಹೋರಾಟ ಸಮಿತಿ ಸದಸ್ಯರಾದ ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಅಕ್ರಂ ಮಾಶಾಳಕರ, ಬಾಬುರಾವ್ ಬೀರಕಬ್ಬಿ, ಸುರೇಶ ಬಿಜಾಪುರ, ಶ್ರೀನಾಥ್ ಪೂಜಾರಿ, ಸಿ.ಬಿ. ಪಾಟೀಲ, ಅಬ್ದುಲ್ ರೆಹಮಾನ್ ನಾಸಿರ್, ಜಗದೇವ ಸೂರ್ಯವಂಶಿ, ಭರತಕುಮಾರ ಎಚ್. ಟಿ, ಗಿರೀಶ್ ಕಲಘಟಗಿ, ಮಲ್ಲಿಕಾರ್ಜುನ ಎಚ್. ಟಿ, ಶ್ರೀಕಾಂತ್ ಕೊಂಡಗೂಳಿ, ಮಲ್ಲಿಕಾರ್ಜುನ ಬಟಗಿ, ನೀಲಾಂಬಿಕ ಬಿರಾದಾರ, ಸುಶೀಲ ಮಿಣಜಗಿ, ಗೀತಾ ಎಚ್, ಶಿವಬಾಳಮ್ಮ ಕೊಂಡಗೂಳಿ, ಶಿವರಂಜನಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಜನಪರ ಎನಿಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕನಿಷ್ಠ ಸೌಜನ್ಯ ತೋರದೆ ಹೋರಾಟಗಾರರ ನಿಯೋಗವನ್ನು ಬೆಂಗಳೂರಿಗೆ ಕರೆಸಿಕೊಂಡು ಅವಮಾನ ಮಾಡಿರುವ ಸಿಎಂ ಸಚಿವರಿಗೆ ಧಿಕ್ಕಾರ
- ಸಾ.ತಿ ಸುಂದರೇಶ್ ಸಿಪಿಐ ರಾಜ್ಯ ಕಾರ್ಯದರ್ಶಿ

ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ತರುವುದು ಕಷ್ಟದ ಕೆಲಸವಲ್ಲ ಜಿಲ್ಲೆಯ ಸಚಿವರು ಶಾಸಕರು ಮನಸ್ಸು ಮಾಡಿದರೆ ಬಹಳ ಸರಳ. ನಮ್ಮ ಹೋರಾಟ ಯಾವುದೇ ವ್ಯಕ್ತಿ ಪಕ್ಷದ ವಿರುದ್ಧವಲ್ಲ
–ಅನಿಲ ಹೊಸಮನಿ ಪತ್ರಕರ್ತ

ಕಪ್ಪು ಬಾವುಟ ಪ್ರದರ್ಶನ: ಎಚ್ಚರಿಕೆ

ವಿಜಯಪುರ: ‘ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿರುವವರನ್ನು ಅವಮಾನಿಸಿರುವ ಶಾಸಕ ಯತ್ನಾಳ ತಕ್ಷಣ ಜಿಲ್ಲೆಯ ಜನತೆಯನ್ನು ಬೇಷರತ್ ಆಗಿ ಕ್ಷಮೆ ಕೇಳಬೇಕು, ಇಲ್ಲವಾದರೆ ಯತ್ನಾಳ ವಿರುದ್ಧ ಕಪ್ಪು ಬಾವುಟ ತೋರಿಸುತ್ತೇವೆ, ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಎಚ್ಚರಿಕೆ ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೋರಾಟಗಾರರನ್ನು ಲಪೂಟರು, ಪೇಮೆಂಟ್ ಗಿರಾಕಿಗಳು ಎಂದು ಹೇಳಿರುವ ಯತ್ನಾಳ ಈ ಹಿಂದೆ ವಾಜಪೇಯಿ ಪ್ರಧಾನಿ ಆಗುವಾಗ ಪೇಪೆಂಟ್ ತೆಗೆದುಕೊಂಡು ಅಡ್ಡಮತ ಚಲಾಯಿಸಿರುವ ಬಗ್ಗೆ ಬಿಜೆಪಿ ಮುಖಂಡರೇ ಆರೋಪ ಮಾಡಿದ್ದಾರೆ. ಯತ್ನಾಳ ಆಗ ಯಾರಾರ ಬಳಿ ಪೇಮೆಂಟ್ ತೆಗೆದುಕೊಂಡಿದ್ದಾರೆ ಎಂಬುದನ್ನು ಪ್ರಶ್ನೆ ಮಾಡಬೇಕಾಗುತ್ತದೆ’ ಎಂದರು. ‘ಕೇಂದ್ರ ರೈಲ್ವೆ ಸಚಿವ ಆದರೂ ಜಿಲ್ಲೆಗೆ ಒಂದೇ ಒಂದು ರೈಲು ತಂದಿಲ್ಲ, ಮೂರು ಬಾರಿ ಶಾಸಕರಾದರೂ ವಿಜಯಪುರಕ್ಕೆ ಯಾವೊಂದು ಕೊಡುಗೆ ನೀಡಿಲ್ಲ, ಇಂದಿಗೂ 15 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತದೆ, ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ವಿದೇಶಿ ಪ್ರವಾಸಿಗರು ಬರುತ್ತಿಲ್ಲ’ ಎಂದು ಆರೋಪಿಸಿದರು.

ಪತ್ರಕರ್ತ ಅನಿಲ ಹೊಸಮನಿ ಮಾತನಾಡಿ, ‘ಪಕ್ಷಾತೀತ, ಧರ್ಮಾತೀತ, ಜಾತ್ಯತೀತವಾಗಿ ನಡೆಯುತ್ತಿರುವ ವೈದ್ಯಕೀಯ ಕಾಲೇಜು ಹೋರಾಟವನ್ನು ರಾಜಕೀಯಕರಣಗೊಳಿಸುವ ಉದ್ದೇಶದಿಂದ ಯತ್ನಾಳ ಆರೋಪ ಮಾಡಿರುವುದು ಖಂಡನೀಯ’ ಎಂದರು. ಕೆಪಿಸಿಸಿ ವೈದ್ಯಕೀಯ ಘಟಕದ ಡಾ.ರವಿಕುಮಾರ್ ಬಿರಾದಾರ ಮಾತನಾಡಿ, ‘ಹೋರಾಟಗಾರರನ್ನು ಯತ್ನಾಳ ಪೇಮೆಂಟ್ ಗಿರಾಕಿಗಳು ಎಂದಿರುವುದು ಖಂಡನೀಯ ಎಂದರು.