ವಿಜಯಪುರ: ‘ಕುಸ್ತಿ ಪಂದ್ಯ ಪ್ರಾಚೀನ ಕಾಲದ ಇತಿಹಾಸ ಹೊಂದಿದೆ. ಕುಸ್ತಿ ಪಂದ್ಯಗಳಿಗೆ ತನ್ನದೇ ಆದ ವೈಭವಯುತ ಇತಿಹಾಸ ಹಾಗೂ ಮಹತ್ವವಿದೆ’ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದ ದ್ಯಾಮಗಂಗಾ-ಶ್ರೀ ಮಾರುತೇಶ್ವರ ಜಾತ್ರೆ ಅಂಗವಾಗಿ ಬುಧವಾರ ಏರ್ಪಡಿಸಿದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಸ್ತಿ ಪಂದ್ಯಾವಳಿಗೆ ಐತಿಹಾಸಿಕ ಹಿನ್ನೆಲೆ ಇದೆ, ರಾಜ-ಮಹಾರಾಜರು ಕುಸ್ತಿ ಪಂದ್ಯಾವಳಿಯನ್ನು ಪ್ರೋತ್ಸಾಹಿಸಿ ಪೋಷಿಸಿದ್ದಾರೆ. ಕುಸ್ತಿ ಒಂದು ಮಹತ್ವದ ಆಟವಾಗಿದ್ದು, ಬಲ ಪ್ರದರ್ಶನ, ಮಾನಸಿಕ ಆರೋಗ್ಯ ವೃದ್ಧಿಗೂ ಸಹಕಾರಿ ಎಂದರು.

‘ಮೈಸೂರು ದಸರಾದಲ್ಲಿ ದೇಶದ ವಿವಿಧ ಭಾಗಗಳಿಂದ ನುರಿತ ಹಾಗೂ ಶಕ್ತಿಶಾಲಿ ಕುಸ್ತಿ ಪಟುಗಳು ಭಾಗವಹಿಸುತ್ತಾ ಗ್ರಾಮೀಣ ಪ್ರದೇಶದ ಈ ಕಲೆ ಉಳಿಸುತ್ತಾ ಬಂದಿದ್ದಾರೆ. ಆದ್ದಾಗಲೂ ಇಂದು ಕುಸ್ತಿ ಪಂದ್ಯಗಳಿಗೆ ಸಾರ್ವಜನಿಕರು ನಿರಾಸಕ್ತಿ ಹೊಂದಿದ್ದಾರೆ’ ಎಂದು ವಿಷಾದಿಸಿದರು.

‘ಕುಸ್ತಿ ಪಟುಗಳು ನಿರಂತರ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಅನೇಕ ಪೈಲ್ವಾರು ವಿವಿಧ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತ್ತೀಚಿಗೆ ಗ್ರಾಮೀಣ ಪ್ರದೇಶದ ಜನರು ಕುಸ್ತಿ ಪಂದ್ಯಗಳ ಬಗ್ಗೆ ನಿರಾಸಕ್ತಿ ಹೊಂದುತ್ತಿದ್ದು, ಗರಡಿ ಮನೆಗಳೆಲ್ಲವೂ ಮರೆಯಾಗುತ್ತಿರುವುದು ನೋವಿನ ಸಂಗತಿ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ ಮಾತನಾಡಿ, ‘ದೇಸಿ ಕ್ರೀಡೆಗಳು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಕುಸ್ತಿಯನ್ನು ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ’ ಎಂದರು.

ಅಶೋಕ ಬಗಲಿ, ಈರಣ್ಣ ಪಟ್ಟಣಶೆಟ್ಟಿ, ಸಾಹೇಬಗೌಡ ಬಿರಾದಾರ, ಮುದಸ್ಸರ ವಾಲಿಕಾರ, ಮಹಾಂತೇಶ ಶಿರಬೂರ, ಭೀಮನಗೌಡ ಬಿರಾದಾರ, ಜಗನ್ನಾಥ ಶಿರಬೂರ, ಮಲ್ಲಪ್ಪ ಬಾವಿಕಟ್ಟಿ, ರೇವಣಸಿದ್ದೇಶ್ವರ ಗೋಣಸಗಿ, ರಾಮಗೊಂಡ ಬೀಳೂರ, ಜಗನ್ನಾಥ ಶಿರಬೂರ, ಪ್ರಕಾಶ ಚಿಕ್ಕಲಕಿ, ಮಲ್ಲಿಕಾರ್ಜುನ ಕಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.