ಚಿತ್ರದುರ್ಗವೆಂದರೆ ಬರೀ ಕಲ್ಲಿನಕೋಟೆಯಲ್ಲ, ಕಲ್ಲುಬಂಡೆಗಳ ತಾಣವಲ್ಲ, ನಾಯಕ ಅರಸರ ಪರಾಕ್ರಮದ ಕತೆಗಳಷ್ಟೇ ಅಲ್ಲ. ಅದಕ್ಕೂ ಮಿಗಿಲಾದ ಪ್ರಕೃತಿ ಸೌಂದರ್ಯವನ್ನು ಕೋಟೆನಾಡು ಹೊತ್ತು ನಿಂತಿದೆ. ಚಿತ್ರದುರ್ಗ ನಗರದಿಂದ ಕೇವಲ 1 ಕಿ.ಮೀ ಅಂತರದಲ್ಲಿ ಸುಂದರವಾದ ಅರಣ್ಯದ ತಂಗಾಳಿಯ ಸ್ಪರ್ಶವಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ಕರಡಿ ಸೇರಿದಂತೆ ವೈವಿಧ್ಯಮಯ ವನ್ಯಜೀವಿಗಳು ವಾಸಿಸುವ ವನ್ಯಜೀವಿಧಾಮವಿದೆ. ಇದು ಜೋಗಿಮಟ್ಟಿ ಎಂದೇ ಪ್ರಸಿದ್ಧಿ ಪಡೆದಿದೆ.

ಜೋಗಿಮಟ್ಟಿದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲುವುದಿಲ್ಲ. ಊಟಿಯ ಗಿರಿಧಾಮ, ಕೊಡಗಿನ ರಾಜಾಸೀಟ್, ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಸಂದೆಡೆ ಸೇರಿಸಿದರೆ ಉಂಟಾಗುವ ಸೊಬಗನ್ನು ಜೋಗಿಮಟ್ಟಿಯಲ್ಲಿ ಕಾಣಬಹುದು. ಚಳಿಗಾಲ, ಬಿಸಿಲುಗಾಲ, ಮಳೆಗಾಲದಲ್ಲಿ ಭಿನ್ನವಾಗಿ ಕಾಣಿಸುವ ಜೋಗಿಮಟ್ಟಿ ನೋಡುಗ ಮನಸ್ಸುಗಳಲ್ಲಿ ರೋಮಾಂಚನ ಮೂಡಿಸುತ್ತದೆ.

ಇನ್ನು, 1ನೇ ಶತಮಾನದಲ್ಲೇ ಪ್ರಮುಖ ‘ಪ್ರಾಚೀನ ಪಟ್ಟಣ’ವಾಗಿತ್ತು ಎನ್ನಲಾಗುವ ಚಂದ್ರವಳ್ಳಿ ಕೂಡ ಚಿತ್ರದುರ್ಗದ ಹೆಮ್ಮೆಯ ತಾಣವಾಗಿದೆ. ಈ ಮೂರು ತಾಣಗಳು ದುರ್ಗವನ್ನು ಸುತ್ತುವರಿದಿವೆ. ಚಿತ್ರದುರ್ಗಕ್ಕೆ ಬಂದವರು ಬರೀ ಕಲ್ಲಿನ ಕೋಟೆಯನ್ನಷ್ಟೇ ನೋಡಿ ಹೋಗುತ್ತಾರೆ. ಜೋಗಿಮಟ್ಟಿ ಹಾಗೂ ಚಂದ್ರವಳ್ಳಿ ತಾಣಗಳು ಪ್ರವಾಸಿ ತಾಣಗಳಾಗಿ ಅಷ್ಟೊಂದು ಪ್ರಚಾರ ಪಡೆದಿಲ್ಲ ಎಂಬುದು ಬೇಸರದ ಸಂಗತಿಯಾಗಿಯೇ ಉಳಿದಿದೆ.

ಕಲ್ಲಿನಕೋಟೆ , ಜೋಗಿಮಟ್ಟಿ ಹಾಗೂ ಚಂದ್ರವಳ್ಳಿಯನ್ನು ಒಂದೇ ಫ್ರೇಮ್ನಲ್ಲಿ ಕಣ್ತುಂಬಿಕೊಳ್ಳುವ ಪ್ರಯತ್ನ ಇತ್ತೀಚೆಗೆ ಹುಟ್ಟಿಕೊಂಡಿದೆ. ಸದ್ಯಕ್ಕೆ ಇದು ಕೇವಲ ಮಾತಾಗಿ ಉಳಿದಿದೆ. ಇದು ಸಾಕಾರಗೊಂಡರೆ ಚಿತ್ರದುರ್ಗ ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತದೆ ಎಂಬ ಭರವಸೆಯೂ ಮೂಡಿದೆ. ಈ ಮೂರು ಪ್ರವಾಸಿ ತಾಣಗಳು ಒಂದೆರಡು ಕಿ.ಮೀ ಅಂತರದಲ್ಲೇ ಇರುವ ಕಾರಣ ಮೂರನ್ನೂ ಒಂದೇ ಕಡೆ ಕೂಡಿಸುವ ‘ಕೇಬಲ್ ಕಾರ್ ಅಳವಡಿಕೆ’ ಯೋಜನೆಯ ಮಾತುಗಳು ಇತ್ತೀಚೆಗೆ ಹುಟ್ಟಿಕೊಂಡಿದೆ.

2022ರಲ್ಲಿ ಈ ಚಿಂತನೆ ಮೊದಲ ಬಾರಿಗೆ ಹುಟ್ಟಿಕೊಂಡಿತು. ಕೇಂದ್ರ ಸಚಿವರೂ ಆಗಿದ್ದ ಚಿತ್ರದುರ್ಗ ಜಿಲ್ಲೆಯ ಮಾಜಿ ಸಂಸದ ನಾರಾಯಣಸ್ವಾಮಿ ತಮ್ಮ ಆಡಳಿತಾವಧಿಯಲ್ಲಿ ಕೋಟೆ, ಜೋಗಿಮಟ್ಟಿ ಹಾಗೂ ಚಂದ್ರವಳ್ಳಿಯ ನಡುವೆ ಕೇಬಲ್ ಕಾರ್ ಅಳವಡಿಸುವ ಚಿಂತನೆಯನ್ನು ಜನರ ಮುಂದಿಟ್ಟರು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತ್ತು. 2022ರಲ್ಲಿ ಕೋಟೆಯ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್ಐ), ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ಕೇಬಲ್ ಕಾರ್ ಅಳವಡಿಕೆಯ ವಿಷಯ ಪ್ರಸ್ತಾಪ ಮಾಡಿದ್ದರು.

ಕೋಟೆಯಲ್ಲಿ ಒಮ್ಮೆ ಕೇಬಲ್ ಕಾರ್ ಹತ್ತಿದರೆ ಕೋಟೆಯಲ್ಲಿರುವ 30ಕ್ಕೂ ಹೆಚ್ಚು ಸ್ಮಾಕರಗಳನ್ನು ಕಡಿಮೆ ಅವಧಿಯಲ್ಲಿ ವೀಕ್ಷಣೆ ಮಾಡಬಹುದು. ಒನಕೆ ಓಬವ್ವ ಕಿಂಡಿ ಮಾರ್ಗವಾಗಿ ಚಂದ್ರವಳ್ಳಿಗೆ ಕೇಬಲ್ ಕಾರ್ನಲ್ಲಿ ತೆರಳುವ ಯೋಚನೆಯೂ ಯೂಜನೆಯಲ್ಲಿ ಮೂಡಿತ್ತು. ಒನಕೆ ಓಬವ್ವ ಕಿಂಡಿಯಿಂದ ಕೇವಲ 1 ಕಿ.ಮೀ ದೂರದಲ್ಲಿರುವ ಚಂದ್ರವಳ್ಳಿಯವರೆಗೂ ಕೇಬಲ್ ಕಾರ್ನಲ್ಲಿ ತೆರಳುವ ಸುಂದರ ಅನುಭವದ ಯಾತ್ರೆಯನ್ನು ಕಟ್ಟಿಕೊಡಬೇಕೆಂಬ ಚಿಂತನೆ ಯೋಜನೆಯಲ್ಲಿ ಇತ್ತು.

ಅಷ್ಟೇ ಅಲ್ಲದೇ ಕೋಟೆಯಿಂದ ಚಂದ್ರವಳ್ಳಿ ಅರಣ್ಯ ಪ್ರದೇಶಕ್ಕೂ 1 ಕಿ.ಮೀ ಅಂತರವಿದ್ದು ಅದನ್ನೂ ವೀಕ್ಷಿಸುವ ಸುಂದರ ಅನುಭವಕ್ಕೆ ಪುಷ್ಟಿ ನೀಡಬೇಕು ಎಂಬ ಚಿಂತನೆ ಇತ್ತು. ಚಂದ್ರವಳ್ಳಿ ಅರಣ್ಯ ಪ್ರದೇಶದಲ್ಲಿ ಬರುವ ಆಡುಮಲ್ಲೇಶ್ವರ ಕಿರು ಮೃಗಾಲಯವನ್ನೂ ವೀಕ್ಷಿಸುವ ಸೌಲಭ್ಯ ಯೋಜನೆಯಲ್ಲಿ ಇರಬೇಕು ಎಂಬ ವಿಚಾರವೂ ಬಂದಿತ್ತು.

ವಿಧಾನ ಪರಿಷತ್ ಸದಸ್ಯರಾಗಿರುವ ಕೆ.ಎಸ್.ನವೀನ್ ಅವರು ಕೂಡ ಈ ಮೂರು ಪ್ರವಾಸಿ ತಾಣಗಳ ನಡುವೆ ಕೇಬಲ್ ಕಾರ್ ಅಳವಡಿಸುವ ಬಗ್ಗೆ ಅವರದೇ ಆದ ರೀತಿಯಲ್ಲಿ ನೀಲನಕ್ಷೆಯೊಂದನ್ನು ರೂಪಿಸಿದ್ದರು. ಜೊತೆಗೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ, ಬಿಜೆಪಿ ಮುಖಂಡ ಎಂ.ಸಿ.ರಘುಚಂದನ್ ಅವರು ಕೂಡ ವಿದೇಶದಲ್ಲಿ ಇರುವ ಹಲವು ಕೇಬಲ್ ಕಾರ್ ಯೋಜನೆಯನ್ನು ಅಧ್ಯಯನ ಮಾಡಿದ್ದರು. ಅದರ ಮಾದರಿಯಲ್ಲೇ ಕೋಟೆ, ಚಂದ್ರವಳ್ಳಿ, ಜೋಗಿಮಟ್ಟಿ ಕೂಡಿಸುವ ಕೇಬಲ್ ಕಾರ್ ಅಳವಡಿಕೆಯ ಬಗ್ಗೆ ನೀಲನಕ್ಷೆ ತಯಾರಿಸದ್ದರು.

ಕೇಬಲ್ ಕಾರ್ ಯೋಜನೆ ಇಲ್ಲಿಯವರೆಗೂ ನೀಲನಕ್ಷೆಯಾಗಿಯೇ ಉಳಿದಿದೆ. ಇದು ಸಾಕಾರಗೊಳ್ಳಬೇಕು ಎಂದು ಸ್ಥಳೀಯರು ಈಗಿನ ಸಂಸದರಾದ ಗೋವಿಂದ ಕಾರಜೋಳ ಅವರಿಗೂ ಮನವಿ ಮಾಡಿದ್ದಾರೆ. ಅವರು ಕೂಡ ಕೋಟೆಯ ಸಮಗ್ರ ಅಭಿವೃದ್ಧಿಯಲ್ಲಿ ಕೇಬಲ್ ಕಾರ್ ಯೋಜನೆಯನ್ನೂ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದಷ್ಟು ಬೇಗ ಕೇಬಲ್ ಕಾರ್ ಯೋಜನೆಗೆ ಜೀವ ನೀಡಬೇಕು ಎಂದು ಪ್ರವಾಸಿಗರು ಕೂಡ ಒತ್ತಾಯಿಸಿದ್ದಾರೆ.

‘ಸಾಕಷ್ಟು ಮಂದಿ ವಯಸ್ಸಾದವರು ಇಲ್ಲಿಯವರೆಗೂ ಕೋಟೆ ಏರಲು ಸಾಧ್ಯವಾಗಿಲ್ಲ. ಅವರೆಲ್ಲರೂ ಕೋಟೆಯ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಬೇಕೆಂದರೆ ಕೇಬಲ್ ಕಾರ್ ಯೋಜನೆ ಬರಬೇಕು. ಕೇಬಲ್ ಕಾರ್ ಯೋಜನೆಗೆ ಚಂದ್ರವಳ್ಳಿ, ಜೋಗಿಮಟ್ಟಿಯನ್ನೂ ಸೇರಿಸಿಕೊಂಡರೆ ಇನ್ನೂ ಉತ್ತಮ’ ಎಂದ ಸಾಹಿತಿ ಎಂ.ಮೃತ್ಯುಂಜಯಪ್ಪ ಹೇಳಿದರು.

ದಾರಿ ಯಾವುದಯ್ಯ ಕೋಟೆಗೆ?

ಕಲ್ಲಿನ ಕೋಟೆಗೆ ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಕುಸಿಯುತ್ತಿದೆ. ಇದಕ್ಕೆ ಕಾರಣ ಕೋಟೆಯ ಬಳಿ ತೆರಳಲು ನಗರದಿಂದ ಸಮರ್ಪಕ ರಸ್ತೆ ಇಲ್ಲದಿರುವುದೇ ಆಗಿದೆ.

ನಗರದ ಮದಕರಿ ವೃತ್ತ ಹಾಗೂ ಗಾಂಧಿ ವೃತ್ತದಿಂದ ಕೋಟೆಗೆ ಬರಲು 2 ಮಾರ್ಗಗಳಿವೆ. ಆದರೆ ಕೋಟೆಗೆ ತೆರಳುವ ಬಗ್ಗೆ ಸೂಚನಾ ಫಲಕಗಳೇ ಇಲ್ಲ. ಎರಡೂ ರಸ್ತೆಗಳು ಕಿರಿದಾಗಿರುವ ಕಾರಣ ದೊಡ್ಡ ವಾಹನಗಳು ಬರಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ.

ಇರುವ 2 ರಸ್ತೆಗಳು ಕೂಡ ಹಾಳಾಗಿದ್ದು, ಕೋಟೆವರೆಗೆ ತಲುಪಲು ಹರಸಾಹಸ ಪಡಬೇಕಾಗಿದೆ. ವಿವಿಧ ಬಡಾವಣೆ, ಕೊಳೆಗೇರಿಗಳ ಸಣ್ಣ ರಸ್ತೆಗಳನ್ನು ದಾಟಿ ಕೋಟೆ ತಲುಪಲು ಪ್ರವಾಸಿಗರು ನಿಟ್ಟುಸಿರು ಬಿಡಬೇಕಾಗಿದೆ. ಜೊತೆಗೆ ಸ್ಥಳೀಯರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುವ ಕಾರಣ ಟ್ರಾಫಿಕ್ ಜಾಮ್ ಪ್ರವಾಸಿಗರನ್ನು ಕಾಡುತ್ತದೆ. ಹೀಗಾಗಿ ಪ್ರವಾಸಿಗರು ಕೋಟೆಗೆ ಬರಲು ಹಿಂದೇಟು ಹಾಕುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಕೋಟೆ ಬಳಿ ಬಂದರೂ ಪ್ರವಾಸಿಗರ ವಾಹನ ನಿಲ್ಲಿಸಲು ಪಾರ್ಕಿಂಗ್ ಸ್ಥಳದ ಕೊರತೆ ಇದೆ. ಕೋಟೆ ಮುಂದಿನ ರಸ್ತೆಯನ್ನು ಅಂಗಡಿಗಳು, ಶಾಲಾ, ಕಾಲೇಜುಗಳ ಕಾಂಪೌಂಡ್ಗಳು ಆವರಿಸಿಕೊಂಡಿವೆ. ಸಣ್ಣ ಜಾಗದಲ್ಲಿ ವಾಹನ ಓಡಾಡುವುದರ ಜೊತೆಗೆ ವಾಹನ ನಿಲ್ಲಿಸುವುದು ಸಮಸ್ಯೆಯಾಗಿದೆ. ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಘಟನೆಗಳು ಸಾಮಾನ್ಯವಾಗಿದೆ.

‘ಹಲವು ದಶಕಗಳ ಹಿಂದೆಯೇ ಕೋಟೆ ಜಾಗ ಒತ್ತುವರಿಯಾಗಿ ಹೋಗಿದೆ. ಈಗ ಸಾರ್ವಜನಿಕರನ್ನು ತೆರವುಗೊಳಿಸುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ ನಗರದ ಪ್ರಮುಖ ವೃತ್ತದಿಂದ ಕೋಟೆವರೆಗೂ ಕೇಬಲ್ ಕಾರ್ ಅಳವಡಿಸಬೇಕು. ಅದನ್ನು ಜೋಗಿಮಟ್ಟಿ, ಚಂದ್ರವಳ್ಳಿಗೂ ವಿಸ್ತರಣೆ ಮಾಡಬಹದು’ ಎಂದು ಚಿತ್ರದುರ್ಗದ ಸತ್ಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.