ಯಾದಗಿರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವು ಸರ್ವರ್, ಆ್ಯಪ್ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಎರಡನೇ ದಿನವೂ ಮಂದಗತಿಯಲ್ಲಿ ಸಾಗಿದೆ.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಯು ಜಿಲ್ಲೆಯಲ್ಲಿ 2.40 ಲಕ್ಷ ಕುಟುಂಬಗಳನ್ನು ಸಮೀಕ್ಷೆಗೆ ಗುರುತಿಸಿದೆ. 2,191 ಬ್ಲಾಕ್ ಗಣತಿದಾರರನ್ನು ಸಮೀಕ್ಷೆಗಾಗಿ ನೇಮಿಸಲಾಗಿದೆ. ಸಮೀಕ್ಷೆ ಆರಂಭವಾಗಿ ಎರಡು ದಿನಗಳು ಕಳೆದಿದ್ದು, ಕೇವಲ 123 ಮನೆಗಳ ಸಮೀಕ್ಷಯಷ್ಟೇ ಪೂರ್ಣಗೊಂಡಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಮೊದಲ ದಿನದಲ್ಲಿ ಸುರಪುರ ಹಾಗೂ ಗರುಮಠಕಲ್ನಲ್ಲಿ ಕೇವಲ ಮೂರು ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆ ವೇಳೆ ‘ಆ್ಯಪ್’ ಓಪ್ನ ಆಗದಿರುವುದು, ಲಾಗ್ ಇನ್ ಎರರ್, ಒಟಿಪಿ ಬಾರದಿರುವುದು, ನೆಟ್ವರ್ಕ್ ಸಮಸ್ಯೆಗಳು, ವಿಳಂಬವಾಗಿ ಕಿಟ್ ವಿತರಣೆಯಿಂದಾಗಿ ಸಮೀಕ್ಷೆಯಲ್ಲಿ ಆರಂಭಿಕ ಸಮಸ್ಯೆಗಳು ಎದುಗಾಗಿವೆ ಎಂದು ಹೇಳಿದ್ದಾರೆ.

‘ಪ್ರತಿಯೊಬ್ಬ ಗಣತಿದಾರರಿಗೆ ಗರಿಷ್ಠ 150 ಮನೆಗಳನ್ನು ನೀಡಲಾಗಿದೆ. ಆ್ಯಪ್ನಲ್ಲಿ ಸಮಸ್ಯೆಗಳು ಸರಿಪಡಿಸಿಕೊಂಡು ನಿಗದಿತ ಅವಧಿಯಲ್ಲಿ ಸಮೀಕ್ಷಾ ಕಾರ್ಯವನ್ನು ಮುಗಿಸುತ್ತೇವೆ. ತಾಂತ್ರಿಕ ವಿಭಾಗದ ಸಿಬ್ಬಂದಿ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಸಮೀಕ್ಷೆಗೆ ಒಗ್ಗಿಕೊಳ್ಳು ಕೆಲವರಿಗೆ ಒಂದಿಷ್ಟು ಸಮಯ ಹಿಡಿಯುತ್ತದೆ. ಒಮ್ಮೆ ಪೂರಿಪೂರ್ಣಾವಾದ ಬಳಿಕ ತ್ವರಿತವಾಗಿ ಮುಗಿಸುತ್ತೇವೆ’ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಉಪ ನಿರ್ದೇಶಕ ಸದಾಶಿವ ನಾರಾಯಣಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.