ಯಾದಗಿರಿ: ಡಿಜಿಟಲೀಕರಣದ ವ್ಯಾಪ್ತಿ ವಿಸ್ತರಣೆಯಾಗಿ ಸ್ಮಾರ್ಟ್ಫೋನ್ಗಳ ಸಂಖ್ಯೆ ಹೆಚ್ಚಾದಂತೆ ಸೈಬರ್ ಮೋಸದ ಪ್ರಕರಣಗಳೂ ಹೆಚ್ಚಾಗಿವೆ. ‘ಅಧಿಕ ಲಾಭ’ ಗಳಿಸಿ ದಿಢೀರ್ ಶ್ರೀಮಂತರಾಗುವ ಅತಿಯಾಸೆಯ ಅಮಾಯಕರು ವಂಚನೆಯ ಖೆಡ್ಡಾಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ.

ಅಪರಿಚಿತರೊಂದಿಗೆ ವಹಿವಾಟು, ಅನಾಮಿಕರು ಕಳುಹಿಸುವ ಲಿಂಕ್, ಸಾಮಾಜಿಕ ಜಾಲತಾಣಗಳಲ್ಲಿನ ಅಸುರಕ್ಷಿತ ಆ್ಯಪ್ಗಳನ್ನು ನಂಬಿ ಹಣದ ವಹಿವಾಟು ನಡೆಸದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರೂ ಮೋಸದ ಜಾಲಕ್ಕೆ ಸಿಲುಕಿ ನರಳುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.

ಜಿಲ್ಲೆಯಲ್ಲಿ 2023ರಲ್ಲಿ 20 ಪ್ರಕರಣಗಳಲ್ಲಿ ವಂಚನೆಗೆ ಒಳಗಾಗಿದ್ದ ಸಂತ್ರಸ್ತರು ₹52.36 ಲಕ್ಷ ಕಳೆದುಕೊಂಡಿದ್ದರು. 2024ರಲ್ಲಿ ವಂಚನೆಯ ಪ್ರಕರಣಗಳ ಸಂಖ್ಯೆ 24ಕ್ಕೆ ಏರಿಕೆ ಆಗಿದ್ದರೂ ಕಳೆದುಕೊಂಡಿದ್ದ ಮೊತ್ತ ₹1.81 ಕೋಟಿಗೆ ತಲುಪಿತ್ತು.

2025ರ ನವೆಂಬರ್ ವರೆಗೆ 22 ಪ್ರಕರಣಗಳು ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ದಾಖಲಾಗಿವೆ. ವಂಚಕರು ಬಲೆ ಬೀಸಿ ಹಣ ಲಪಟಾಯಿಸಿದ್ದರ ಮೊತ್ತ ₹2.50 ಕೋಟಿಯಷ್ಟಿದೆ.

ಭಿನ್ನಭಿನ್ನ ರೀತಿಯಲ್ಲಿ ಬಲೆ ಬೀಸಿ ದೋಚಿರುವ ಹಣವನ್ನು ವಂಚಕರಿಂದ ರಿಕವರಿ ಮಾಡುವುದೇ ಪೊಲೀಸರಿಗೆ ತಲೆನೋವಾಗಿದೆ. 20 ಪ್ರಕರಣಗಳಲ್ಲಿ 9 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. 2024ರ 24 ಕೇಸ್ಗಳಲ್ಲಿ 6 ಪ್ರಕರಣಗಳು ಪತ್ತೆಯಾಗಿದ್ದು, ಈ ವರ್ಷ ಒಂದು ವಂಚನೆ ಪ್ರಕರಣವನ್ನು ಪತ್ತೆ ಮಾಡಲಾಗಿದೆ.

ವಂಚಕರ ಜಾಲಗಳು ಬಹುತೇಕ ಸಕ್ರಿಯವಾಗಿ ಕಾರ್ಯಾಚರಣೆ ಮಾಡುವುದು ಬಿಹಾರ, ಉತ್ತರ ಪ್ರದೇಶ, ದೆಹಲಿ, ಹರಿಯಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಂದ. ವಂಚನೆ ಎಸಗುವ ಬಹುತೇಕರು ಪದವಿಯನ್ನೂ ಮಾಡಿರುವುದಿಲ್ಲ. ಕಾಲೇಜು ಅರ್ಧಕ್ಕೆ ಮೊಟಕುಗೊಳಿಸಿ, ವಂಚನೆಯ ತಂತ್ರಗಳ ಬಗ್ಗೆ ತರಬೇತಿ ಪಡೆದಿರುತ್ತಾರೆ ಎನ್ನುತ್ತಾರೆ ಪೊಲೀಸರು.

ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಅಮಾಯಕರ, ಬೇರೆಯವರ ದಾಖಲೆಗಳನ್ನು ಪಡೆದು ಬ್ಯಾಂಕ್ ಖಾತೆ ಮತ್ತು ಸಿಮ್ ಕಾರ್ಡ್ ಪಡೆದು ಅವುಗಳನ್ನೇ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ. ವಂಚಕರ ಜಾಲಕ್ಕೆ ಸಿಲುಕಿ ಅದನ್ನು ನಂಬಿ ಖಾತೆಗಳಿಗೆ ಹಣ ಹಾಕುತ್ತಿದಂತೆ ಕ್ಷಣ ಮಾತ್ರದಲ್ಲಿ ಹಣವು ಬೇರೆ– ಬೇರೆ ಖಾತೆಗಳಿಗೆ ವರ್ಗಾವಣೆ ಆಗಿರುತ್ತದೆ. ಮತ್ತೆ ಕೆಲವರು ಅದನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಾರೆ ಎಂದು ಹೇಳುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಲಿಂಕ್ ಕಳುಹಿಸಿ ವಂಚನೆ, ಆನ್ಲೈನ್ ವಹಿವಾಟಿನಲ್ಲಿ ಲಾಭಾಂಶದ ಆಮಿಷ, ಬ್ಯಾಂಕ್ ಕೆವೈಸಿ ನೆಪ, ನಿಷ್ಕ್ರಿಯವಾದ ಮೊಬೈಲ್ ನಂಬರ್ ಬಳಕೆ, ಡಿಜಿಟಲ್ ಅರೆಸ್ಟ್, ಕಾರು, ಹೋಟೆಲ್ ಹಾಗೂ ಉತ್ಪನ್ನಗಳ ರಿವ್ಯೂವ್, ಉನ್ನತ ಅಧಿಕಾರಿಗಳ ಹೆಸರು ದರ್ಬಳಕೆ ಸೇರಿ ಹಲವು ಸ್ವರೂಪಗಳಲ್ಲಿ ಬಲೆ ಬೀಸುತ್ತಿದ್ದಾರೆ. ಅವರ ಖೆಡ್ಡದಲ್ಲಿ ಅಧಿಕಾರಿಗಳು, ಉದ್ಯಮಿಗಳು, ಪತ್ರಕರ್ತರು, ವ್ಯಾಪಾರಸ್ಥರು, ನಿರುದ್ಯೋಗಿಗಳು, ವಿದ್ಯಾರ್ಥಿಗಳು, ಗೃಹಿಣಿಯರು ಸಿಲುಕಿ ಹಣ ಕಳೆದುಕೊಂಡಿದ್ದಾರೆ.

‘ಜಾಗೃತಿ ಕಾರ್ಯಕ್ರಮ ನಿರಂತರ’

‘ಆನ್ಲೈನ್ ವಂಚನೆಯ ಜಾಲಗಳಿಗೆ ಸಿಲುಕದಂತೆ ಸಾಮಾಜಿಕ ಜಾಲತಾಣಗಳು ಶಾಲಾ– ಕಾಲೇಜುಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಆನ್ಲೈನ್ ಹೂಡಿಕೆಯ ಬಗ್ಗೆ ಜಾಗೃತಿ ವಹಿಸಬೇಕು. ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು. ಜಿಲ್ಲಾಧಿಕಾರಿ ಹೆಸರು ದುರ್ಬಳಕೆ ಮಾಡಿಕೊಂಡು ₹50 ಸಾವಿರ ಪಡೆದಿದ್ದ ಪ್ರಕರಣದಲ್ಲಿ ₹20 ಸಾವಿರ ರಿಕವರಿ ಮಾಡಿಕೊಳ್ಳಲಾಗಿದೆ. ಆರೋಪಿಯನ್ನು ಸಹ ಬಂಧಿಸಲಾಗುವುದು’ ಎಂದು ಹೇಳಿದರು.

ಒಂದೇ ಆ್ಯಪ್: 24 ಮಂದಿಯಿಂದ ₹ 43.25 ಲಕ್ಷ ವಂಚನೆ

ವಾಟ್ಸ್ಆ್ಯಪ್ ಟೆಲಿಗ್ರಾಂನಂತಹ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದಕೋಸ್ಟಾ ಆ್ಯಪ್ ( COSTA APP) ನಂಬಿದ 24 ಮಂದಿ ₹ 43.25 ಲಕ್ಷ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. 24 ಮಂದಿ ಪೈಕಿ 17 ಸಂತ್ರಸ್ತರು ಒಂದೇ ಗ್ರಾಮದವರು ಎಂಬುದು ವಿಶೇಷ. ಹಣದ ಅವಶ್ಯಕತೆ ಇದ್ದಿದ್ದ ಸಂತ್ರಸ್ತರು ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಮೆಸೇಜ್ನ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರು. ವಾಟ್ಸ್ಆ್ಯಪ್ ಟೆಲಿಗ್ರಾಂನಲ್ಲಿ ಕೋಸ್ಟಾ ಹೆಸರಿನ ಗ್ರೂಪ್ ಸೇರಿಕೊಂಡರು. ಅದರಲ್ಲಿ ವಂಚಕ ಸದಸ್ಯರು ತಾವು ಹಣ ದ್ವಿಗುಣ ಮಾಡಿಕೊಂಡಿದ್ದಾಗಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದರು. ಅದನ್ನು ನಂಬಿದವರು ವಂಚಕರು ಸೂಚಿಸಿದ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಹಂತ– ಹಂತವಾಗಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆ್ಯಪ್ನಲ್ಲಿ ನಕಲಿ ಲಾಭಾಂಶದ ಹಣ ಕಾಣಿಸಿಕೊಂಡಿದ್ದು ಅದನ್ನು ಡ್ರಾ ಮಾಡಿಕೊಳ್ಳಲು ಹೋದಾಗ ಅಸಲಿಗೆ ಅಲ್ಲಿ ಹಣವೇ ಇರಲಿಲ್ಲ. ಮೋಸ ಹೋಗಿದ್ದು ಗೊತ್ತಾಗಿ ಸೆನ್ ಠಾಣೆ ಮೊರೆ ಮೊರೆ ಹೋದರು. ಕೋಸ್ಟಾ ಆ್ಯಪ್ ನಂಬಿ ಸುರಪುರ ತಾಲ್ಲೂಕಿನ ಹಾಲಬಾವಿ ಗ್ರಾಮದ 17 ಮಂದಿ ಲಾಭಾಂಶದ ಆಮಿಷಕ್ಕೆ ಒಳಗಾಗಿ ₹26.72 ಲಕ್ಷ ಕಳೆದುಕೊಂಡು ಪೇಚಿಗೆ ಸಿಲುಕಿರುವುದು ಡಿಜಿಟಲ್ ವಂಚನೆಯ ಕರಾಳು ಮುಖಕ್ಕೆ ಹಿಡಿದ ಕನ್ನಡಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.