ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಡಿಕೆಶಿ ಪದಗ್ರಹಣ, ಜಿಲ್ಲೆಯಲ್ಲಿ ಸಂಭ್ರಮ

ಜಿಲ್ಲಾ ಕಾಂಗ್ರೆಸ್‍ನಿಂದ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ; ತಳಮಟ್ಟದಿಂದ ಪಕ್ಷ ಸಂಘಟಿಸುವ ಪ್ರತಿಜ್ಞೆ
Last Updated 2 ಜುಲೈ 2020, 16:05 IST
ಅಕ್ಷರ ಗಾತ್ರ

ಯಾದಗಿರಿ: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರು ಬೆಂಗಳೂರಿನಲ್ಲಿ ಪದಗ್ರಹಣ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆನ್‍ಲೈನ್ ಟಿವಿ ಮೂಲಕ ಕಾರ್ಯಕ್ರಮದ ಪ್ರಸಾರವನ್ನು ಪಕ್ಷದ ಮುಖಂಡರು ವೀಕ್ಷಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ ಅವರೊಡನೆ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಪ್ರತಿಜ್ಞೆ ಕೈಗೊಂಡರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರಡ್ಡಿ ಪಾಟೀಲ ತುನ್ನೂರ ಮಾತನಾಡಿ, ಕೆಪಿಸಿಸಿಗೆ ಶಿವಕುಮಾರ ಅವರು ಸಾರಥ್ಯ ವಹಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಂತಾಗಿದೆ.
ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ 31 ಗ್ರಾಮ ಪಂಚಾಯಿತಿ ಮತ್ತು 5 ನಗರ ಪ್ರದೇಶದಲ್ಲಿ ಆನ್‍ಲೈನ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತುಎಂದರು.

ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಸರಳವಾಗಿನಡೆಸಲು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ ಅವರು ಸೂಚನೆ ನೀಡಿದ್ದರು. ಅದರಂತೆ ಜಿಲ್ಲೆಯಾದ್ಯಂತ ಆನ್‍ಲೈನ್ ಮೂಲಕ ಪಕ್ಷದ ಕಾರ್ಯಕರ್ತರಿಗೆ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೋಟ್ನಡಗಿ, ಪ್ರಮುಖರಾದ ಕೃಷ್ಣಾಜೀ ಕುಲಕರ್ಣಿ, ಜಿಲ್ಲಾ ಕೆಪಿಸಿಸಿ ವೀಕ್ಷಕರಾದಚಂದ್ರಿಕಾ ಪರಮೇಶ್ವರಿ, ಚಿದಾನಂದಪ್ಪ ಕಾಳೆಬೆಳಗುಂದಿ, ಸದಾಶಿವಪ್ಪಗೌಡ ರೋಟ್ನಡಗಿ, ರಾಘವೇಂದ್ರ ಮಾನಸಗಲ್, ಸುರೇಶ ಜೈನ್, ಲಾಯಕ್ ಹುಸೇನ್ ಬಾದಲ್, ರಾಘವೇಂದ್ರ ಮಾನಸಗಲ್, ಶರಣಪ್ಪಗೌಡ ಮಲ್ಹಾರ, ಮರೆಪ್ಪ ಬಿಳ್ಹಾರ, ಮಲ್ಲಣ್ಣ ದಾಸನಕೇರಿ, ಸಾಬರೆಡ್ಡಿ ಕಲಬುರ್ಗಿ ಇದ್ದರು.
‘ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸಪರ್ವ’:

ಕೆಂಭಾವಿ: ‘ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಕುಸಿದು ಹೋಗಿದೆ ಎಂಬ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡಲು ಶಿವಕುಮಾರ ಅಂಥ ಸಮರ್ಥ ನಾಯಕರು ಸಿದ್ಧರಿದ್ದು ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್‌ ಹೊಸ ಪರ್ವ ಆರಂಭಿಸಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ ಎಂದು ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕೆಪಿಸಿಸಿ ನೂತನ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪತಿಜ್ಞಾ ವಿಧಿ ಸ್ವೀಕಾರ ಸಮಾರಂಭದ ನೇರಪ್ರಸಾರ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸಾರಥ್ಯ ವಹಿಸಿದ ಡಿ.ಕೆ.ಶಿವಕುಮಾರ ಅವರು ಒಬ್ಬ ಪ್ರಜ್ಞಾವಂತ ರಾಜಕೀಯ ಧುರೀಣರಾಗಿದ್ದು ಅವರ ಗರಡಿಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಚಿಂಚೋಳಿ ಸ್ವಾಗತಿಸಿದರು. ಬಾಪುಗೌಡ ಪಾಟೀಲ, ಮುರುಗೇಶ ಹುಣಸಗಿ, ರಹಿಮಾನ ಪಟೇಲ, ಬಾಬು ದೇವರಮನಿ, ರಾಮು ದೊಡಮನಿ, ತಿಪ್ಪಣ್ಣ ಟಣಕೆದಾರ, ಸೋಮು ಶಹಾಪೂರ ಸೇರಿದಂತೆ ಹಲವು ಕಾರ್ಯಕರ್ತರಿದ್ದರು.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದ ನೇರಪ್ರಸಾರವನ್ನು ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಉದ್ಘಾಟಿಸಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ಧರಾಮಯ್ಯನವರಂಥ ಹಿರಿಯ ನಾಯಕರಿಂದ ನಮ್ಮ ಪಕ್ಷ ರಾಜ್ಯದಲ್ಲಿ ಬಲಿಷ್ಠವಾಗಿದ್ದು ನೂತನ ಸಾರಥ್ಯ ವಹಿಸಿದ ಯುವ ನಾಯಕ ಡಿ.ಕೆ.ಶಿವಕುಮಾರ ಅವರಿಂದ ಪಕ್ಷಕ್ಕೆ ಮತ್ತಷ್ಟು ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್‌ ಉಪಾಧ್ಯಕ್ಷ ಸಾಹೇಬಲಾಲ ಆಂದೇಲಿ, ಶಾಂತಗೌಡ ನೀರಲಗಿ, ಪುರಸಭೆ ಸದಸ್ಯ ರಾಘವೇಂದ್ರ ದೇಶಪಾಂಡೆ, ಲಾಲಪ್ಪ ಆಲ್ಹಾಳ, ಆರೀಫ್ ಖಾಜಿ, ಖಾಜಾಪಟೇಲ ಕಾಚೂರ, ರಂಗಪ್ಪ ವಡ್ಡರ್ ಇದ್ದರು.

ಕೆಂಭಾವಿ: ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಗುರುವಾರ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ನೇರಪ್ರಸಾರ ವೀಕ್ಷಣೆಗೆ ಚನ್ನರೆಡ್ಡಿ ದೇಸಾಯಿ ಚಾಲನೆ ನೀಡಿದರು. ಮಹಾಂತಗೌಡ ಪಾಟೀಲ, ಲಕ್ಷ್ಮಣ ತಿಪ್ಪಶೆಟ್ಟಿ, ಸುನೀಲ್ ಬೂದೂರು, ಮಹಿಬೂಬಸಾಬ, ಶಿವರಾಜ, ಬಲವಂತ್ರಾಯಗೌಡ ದೇಸಾಯಿ, ಮಹಿಬೂಬಸಾಬ, ವಿರೇಶ ಬಡಿಗೇರ್, ದೇವರಾಜ ಹೊಸಗೌಡ್ರು, ಸುನೀಲ್ ಪತ್ತಾರ, ಪ್ರಕಾಶ ವಣಿಕ್ಯಾಳ, ಶರಣಬಸ್ಸು ವಿಶ್ವಕರ್ಮ, ಶರಣು, ಬಸಣ್ಣ ಪೂಜಾರಿ, ಮಾಳಪ್ಪ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT