ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ನುಡಿದಂತೆ ನಡೆದ ಗ್ಯಾರಂಟಿ ಸರ್ಕಾರ: ದರ್ಶನಾಪುರ

Published 23 ಏಪ್ರಿಲ್ 2024, 13:59 IST
Last Updated 23 ಏಪ್ರಿಲ್ 2024, 13:59 IST
ಅಕ್ಷರ ಗಾತ್ರ

ಸೈದಾಪುರ: ‘ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷವು ಗ್ಯಾರಂಟಿ ಯೋಜನೆಗಳನ್ನು ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಪಟ್ಟಣ ಸೇರಿದಂತೆ ಗುರುಮಠಕಲ್ ಮತಕ್ಷೇತ್ರದ ಬೆಳಗುಂದಿ, ಬಾಡಿಯಾಲ, ಕಡೇಚೂರು, ಅಜಲಾಪುರ, ಪಸ್ಪೂಲ, ಎಂಪಾಡ್ ಗ್ರಾಮಗಳಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಜನರಿಗೆ ನೀಡಿದ್ದ ಪಂಚ ಗ್ಯಾರಂಟಿಗಳ ಭರವಸೆಯನ್ನು ಅಧಿಕಾರಕ್ಕೆ ಬಂದ ಕೇವಲ ನಾಲ್ಕೈದು ತಿಂಗಳಲ್ಲಿ ಜನರಿಗೆ ನೀಡಿ ಸ್ವಾಭಿಮಾನದ ಬದುಕು ನಡೆಸಲು ಅನುಕೂಲ ಮಾಡಿ ಕೊಟ್ಟಿದೆ. ಅದರಂತೆ ನಮ್ಮ ಮೇಲೆ ಜನರಿಟ್ಟಿದ ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ. ಅದೇ ರೀತಿಯಾಗಿ ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರ, ದಲಿತರ, ಹಿಂದುಳಿದವರ ಉದ್ಧಾರಕ್ಕಾಗಿ 25 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ಈ ಭಾಗ ಅಭಿವೃದ್ಧಿಯಾಗುವ ಕಾಲ ಒದಗಿ ಬಂದಿದೆ. ಗುರುಮಠಕಲ್ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ಆಗಲಿದ್ದಾರೆ. ಇದಕ್ಕಾಗಿ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕಿದೆ ಎಂದರು. 

ಈ ವೇಳೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಶರಣಿಕ ಕುಮಾರ ದೋಕಾ, ಕೆಪಿಸಿಸಿಯ ಮರಿಗೌಡ ಹುಲಿಕಲ್, ಕಾಂಗ್ರೆಸ್ ಹಿರಿಯ ಮುಖಂಡರಾದ ಸಾಯಿಬಣ್ಣ ಬೊರಬಂಡ, ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪೂರ, ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನರೆಡ್ಡಿ ಶೆಟ್ಟಿಹಳ್ಳಿ, ಎ.ಸಿ.ಕಾಡ್ಲೂರು, ವಿಶ್ವನಾಥ ನೀಲಹಳ್ಳಿ, ಚಿದಾನಂದಪ್ಪ ಕಾಳೆಬೆಳಗುಂದಿ, ಮಹಿಪಾಲರೆಡ್ಡಿ ದುಪ್ಪಲ್ಲಿ, ವಿಜಯ ಕಂದಳ್ಳಿ, ಸಾಬಣ್ಣ ಸೈದಾಪುರ, ಗ್ರಾ.ಪಂ ಸದಸ್ಯ ಶರಣಪ್ಪ ಬೈರಂಕೊಂಡಿ, ಆಂಜನೇಯ ರಾಂಪುರ, ಅನಿಲ ಭಾಸ್ಕರ್, ದೇವಪ್ಪ ಗುತ್ತೇದಾರ ರಾಚನಳ್ಳಿ, ಪುಂಡಲಿಕ್ ಗೊಂದಡಗಿ, ವೆಂಕಟೇಶ ಕೂಡಲೂರು, ಯೂಸೂಫ ತರಕಾರಿ, ವಿಜಯ, ಬಸವರಾಜ ರಾಂಪುರ ಮತ್ತಿತರರು ಹಾಜರಿದ್ದರು.

ಸೈದಾಪುರ ಪಟ್ಟಣದಲ್ಲಿ ಸೈದಾಪುರ ವಲಯದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಸನ್ಮಾನಿಸಿದರು
ಸೈದಾಪುರ ಪಟ್ಟಣದಲ್ಲಿ ಸೈದಾಪುರ ವಲಯದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಸನ್ಮಾನಿಸಿದರು
ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಒಬ್ಬ ಮಹಾನ್ ಸುಳ್ಳುಗಾರ. ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ತಿಳಿವಳಿಕೆ ಇಲ್ಲದ ಆತ ತನ್ನ ಜೇಬು ತುಂಬಿಕೊಂಡು ವೈಯಕ್ತಿಕವಾಗಿ ಅಭಿವೃದ್ಧಿ ಆಗಿದ್ದಾನೆ
- ಬಾಬುರಾವ ಚಿಂಚನಸೂರ ಮಾಜಿ ಸಚಿವ

‘ಕೇಂದ್ರದ ಬಿಜೆಪಿಯದ್ದು ಪಿಕ್‍ಪಾಕೆಟ್ ಸರ್ಕಾರ’

ದಿನಬಳಕೆಯ ವಸ್ತುಗಳಾದ ಎಲ್‌ಪಿಜಿ ಸಿಲಿಂಡರ್ ಪೆಟ್ರೋಲ್ ಡಿಸೇಲ್‌ ಅಡುಗೆ ಎಣ್ಣೆ ರಸಗೊಬ್ಬರ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ  ಹಣವನ್ನು ಕಿತ್ತುಕೊಂಡ ಕೇಂದ್ರದ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಸಾಲ ಮನ್ನಾಮಾಡಿದೆ. ಆದರೆ ನಮ್ಮ ಸರ್ಕಾರ ಸಾಮಾನ್ಯ ಜನರ ಜೇಬು ತುಂಬಿಸುವ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ವಾಗ್ದಾಳಿ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT