ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂಬಾರ ಭವನದ ಉದ್ಘಾಟನೆ ಶೀಘ್ರ: ಶಾಸಕ ರಾಜಾ ವೇಣುಗೋಪಾಲ ನಾಯಕ

Published 22 ಜೂನ್ 2024, 14:38 IST
Last Updated 22 ಜೂನ್ 2024, 14:38 IST
ಅಕ್ಷರ ಗಾತ್ರ

ಸುರಪುರ: ‘ಕುಂಬಾರ ಸಮಾಜದವರು ಗುಡಿಕೈಗಾರಿಕೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡವರು. ತಮ್ಮ ವೃತ್ತಿಯಾಯಿತು, ತಾವಾಯಿತು ಎಂದು ಮಾದರಿ ಜೀವನ ನಡೆಸುತ್ತಿದ್ದಾರೆ’ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಕುಂಬಾರ ಸಮಾಜದವರು ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ನಮ್ಮ ತಂದೆ ದಿ. ರಾಜಾ ವೆಂಕಟಪ್ಪನಾಯಕ ಶಾಸಕರಾಗಿದ್ದಾಗ ಕುಂಬಾರ ಭವನಕ್ಕೆ ಅಡಿಗಲ್ಲು ನೆರವೇರಿಸಿ ಅನುದಾನ ಬಿಡುಗಡೆ ಮಾಡಿದ್ದರು. ಎಂಟು ವರ್ಷಗಳಿಂದ ಭವನದ ಉದ್ಘಾಟನೆ ಕಾರಣಾಂತರದಿಂದ ನನೆಗುದಿಗೆ ಬಿದ್ದಿದೆ. ಶೀಘ್ರದಲ್ಲಿ ಭವನ ಉದ್ಘಾಟನೆ ಮಾಡಲಾಗುವುದು’ ಎಂದರು.

ಕುಂಬಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಕುಂಬಾರ, ಉಪಾಧ್ಯಕ್ಷ ಸಾಹೇಬಗೌಡ ಕುಂಬಾರ, ಮುಖಂಡರಾದ ದೊಡ್ಡ ವೀರಭದ್ರಪ್ಪ ಕುಂಬಾರ, ದೊಡ್ಡ ಈರಣ್ಣ ಕುಂಬಾರ, ಭೀಮರಾಯ ಕುಂಬಾರ ಕುಂಬಾರಪೇಟ, ಅಮರೇಶ ಜಾಲಹಳ್ಳಿ, ಸೂಗಪ್ಪ ಕುಂಬಾರ, ಅಂಬ್ರೇಶ ಪಾನಶಾಪ್, ನಿಂಗಣ್ಣ ವಡಿಗೇರಿ, ವೀರಭದ್ರ ಜಾಲಹಳ್ಳಿ, ಶರಣು ಟೇಲರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT