ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಕ್ಕೇರಾ: ನೀರಿಗಾರಿ ನಿವಾಸಿಗಳ ಪರದಾಟ

Published 16 ಮೇ 2024, 14:27 IST
Last Updated 16 ಮೇ 2024, 14:27 IST
ಅಕ್ಷರ ಗಾತ್ರ

ಕಕ್ಕೇರಾ: ಪಟ್ಟಣದ 6ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಸಂಬಂಧ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವಾರ್ಡ್‌ನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರ್ಡ್‌ನಲ್ಲಿ ಸುಮಾರು ವರ್ಷಗಳಿಂದ ನೀರಿನ ಸಮಸ್ಯೆಯಿದೆ. ಇದಕ್ಕೆ ಅಧಿಕಾರಿಗಳಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ. ಜತೆಗೆ ವಾರ್ಡ್‌ನಲ್ಲಿರುವ ಚಿಕೇದ ಭಾವಿ ಹೊಂಡದ ಹೂಳು ತೆಗೆಸಿದರೆ, ನೀರು ಸಿಗುತ್ತದೆ. ಹೀಗಾಗಿ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಮಾನಪ್ಪ ನಾಗರ, ಪರಮಣ್ಣ ಹಡಪದ, ಮಲ್ಲಣ್ಣ ಪಿಳಬಂಟಿ ಸಲಹೆ ನೀಡಿದ್ದಾರೆ.

ಕುಡಿಯುವ ನೀರು, ಶೌಚಾಲಯದಲ್ಲಿಯೂ ಸಹ ನೀರಿನ ಕೊರತೆಯಿದೆ. ಹಲವು ಬಾರಿ ಸಮಸ್ಯೆ ಹೇಳಿದರೂ ಮುಖ್ಯಾಧಿಕಾರಿ ಗಮನ ಹರಿಸುತ್ತಿಲ್ಲ. ಶೀಘ್ರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ನಂದಮ್ಮ ಹಡಪದ, ಶಾಂತಪ್ಪ ಹಡಪದ, ಲಕ್ಷ್ಮೀ ನಾಗರ, ಸಂಗಮ್ಮ ಹಡಪದ, ದೇವಮ್ಮ ಹಡಪದ, ಗುರುಬಸಮ್ಮ ಹಡಪದ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT