ಗುರುವಾರ , ಆಗಸ್ಟ್ 18, 2022
23 °C
ಯಕ್ತಾಪುರ: ನಾಲ್ಕು ವರ್ಷಗಳಿಂದ ನೀರು ಒದಗಿಸುತ್ತಿರುವ ಕುಟುಂಬ

ಬೆಕಿನಾಳ ಕುಟುಂಬದಿಂದ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಸಮೀಪದ ಯಕ್ತಾಪುರ ಗ್ರಾಮದ ಸಿದ್ಧಲಿಂಗಮ್ಮ ಬಸವಂತ್ರಾಯ ಬೆಕಿನಾಳ ಕುಟುಂಬವು ಬೇಸಿಗೆಯಲ್ಲಿ ಗ್ರಾಮದ ಜನರ ಅನುಕೂಲಕ್ಕಾಗಿ ನೀರು ಪೂರೈಕೆ ಮಾಡುತ್ತಿದೆ.

ಗ್ರಾಮದಲ್ಲಿ 1,400 ಜನಸಂಖ್ಯೆ ಇದೆ. ಬೆಕಿನಾಳ ಕುಟುಂಬದ ಮಾನವೀಯ ಕಾರ್ಯದಿಂದಾಗಿ ಗ್ರಾಮದಲ್ಲಿ ನೀರಿನ ಬವಣೆ ನೀಗಿದೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುತ್ತಿತ್ತು. ಊರೊಳಗಿನ ಜಲಮೂಲ ಬಳಸಿದರೂ ಸಮಸ್ಯೆ ನಿವಾರಣೆ ಆಗದಿದ್ದಾಗ ಗ್ರಾಮ ಪಂಚಾಯಿತಿಯವರು ಚಿಂತೆಗೀಡಾಗಿದ್ದರು. ಈ ಸಂದರ್ಭದಲ್ಲಿ ಊರಿಗೆ ಹೊಂದಿಕೊಂಡೇ ಇರುವ ಬೆಕಿನಾಳ ಕುಟುಂಬದವರ ಹೊಲದಲ್ಲಿ ಕೊಳವೆಬಾವಿ ಕೊರೆಸಿದಾಗ   ನೀರು ಲಭಿಸಿತು.

ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಪಿಡಿಒ ಸಿದ್ದವೀರಪ್ಪ ತಹಶೀಲ್ದಾರ್‌ ಕಚೇರಿಯಿಂದ ಅನುಮತಿ ಪಡೆದು ಬೆಕಿನಾಳ ಕುಟುಂಬದವರನ್ನು ಸಂಪರ್ಕಿಸಿದಾಗ ಬೆಕಿನಾಳ ರೈತ ಕುಟುಂಬ ತಿಂಗಳಿಗೆ ₹18 ಸಾವಿರ ಪಡೆದು ನೀರು ನೀಡಲು ಒಪ್ಪಿತು.

ಕೂಡಲೇ ಗ್ರಾಮ ಪಂಚಾಯಿಯವರು ಹೊಲದಲ್ಲಿನ ಕೊಳವೆಬಾವಿಯಿಂದ ನಳಗಳಿಗೆ ನೀರು ಸರಬರಾಜು ಮಾಡುವ ಬಾವಿಗೆ ಪೈಪ್‍ಲೈನ್ ಮಾಡಿ ಅಲ್ಲಿ ಸಂಗ್ರಹಿಸಿ ನಂತರ ಯಕ್ತಾಪುರ ಗ್ರಾಮದ ಜನರಿಗೆ ಸರಬರಾಜು
ಮಾಡಲಾಗುತ್ತಿದೆ.

ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಯಕ್ತಾಪುರ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಗ್ರಾಮದಲ್ಲಿನ ಜಲ ಮೂಲಗಳನ್ನು ಬಳಸಿಕೊಂಡರು ಸಹ ನೀರಿನ ಸಮಸ್ಯೆ ಹೋಗುವುದಿಲ್ಲ. ಆದ್ದರಿಂದ ಈ ವರ್ಷವೂ ಅದೇ ರೀತಿ ಸಮಸ್ಯೆಯಾಗದಿರಲೆಂದು ಗ್ರಾಮ ಪಂಚಾಯಿತಿ ನೀರು ಪಡೆಯಲು ತಹಶೀಲ್ದಾರ್‌ ಕಚೇರಿಯಿಂದ ಅನುಮತಿ ಪಡೆದಿದೆ.

ಗ್ರಾಮ ಪಂಚಾಯಿತಿ ಬಾವಿಯನ್ನು ಸ್ವಚ್ಛಗೊಳಿಸಿ ನಂತರ ಕೊಳವೆಬಾವಿಯಿಂದ ನೀರು ತುಂಬಿಸಿ ಅದನ್ನು ಗ್ರಾಮದಲ್ಲಿನ ಮನೆಗಳ ನಳಗಳಿಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪ್ರತಿನಿತ್ಯ ಸರಬರಾಜು ಮಾಡಲಾಗುತ್ತಿದೆ.

ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂದು ಬೆಕಿನಾಳ ಕುಟುಂಬದ ಕೊಳವೆಬಾವಿಯಿಂದ ನೀರು ಪಡೆದಯ ಸರಬರಾಜು ಮಾಡಲಾಗುತ್ತಿದೆ.
ಸಿದ್ಧವೀರಪ್ಪ, ಪಿಡಿಒ ಯಕ್ತಾಪುರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು