ಯಾದಗಿರಿ: ಇಲ್ಲಿನ ಯಾದಗಿರಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಅಧ್ಯಕ್ಷರಾಗಿ ಹಣಮಂತ ಅಕ್ಕಿ ಬಂದಳ್ಳಿ ಹಾಗೂ ಉಪಾಧ್ಯಕ್ಷರಾಗಿ ಬಸಣ್ಣಗೌಡ ಮೊಗದಂಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘವು ಜೆಡಿಎಸ್ ತೆಕ್ಕಗೆ ಸೇರ್ಪಡೆಯಾಗಿದೆ.

ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಚುನಾವಣಾಧಿಕಾರಿ ಪವನ ಕುಮಾರ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಿದರು. ಗೆಲುವಿನ ಬಳಿಕ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿ ಮತ್ತು ಸಹಕಾರ ಸಂಘದ ಕಾರ್ಯಾಲಯದ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಶಾಸಕ ಶರಣಗೌಡ ಕಂದಕೂರ ಅವರ ಸಹೋದರರಾದ ಮಲ್ಲಿಕಾರ್ಜುನರೆಡ್ಡಿ ಕಂದಕೂರ ಅವರು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ‘ಪ್ರತಿಭಾರಿ ಅವಕಾಶ ಸಿಕ್ಕಾಗ ಶಾಸಕ ಶರಣಗೌಡ ಕಂದಕೂರ ಅವರು ಕಟ್ಟಕಡೆಯ ಕಾರ್ಯಕರ್ತರಿಗೆ ಅಧಿಕಾರಿ ಸಿಗುವಂತೆ ಮಾಡಿದ್ದಾರೆ. ತಾಳ್ಮೆಯಿಂದ ಇದ್ದಲ್ಲಿ ಯಾವುದೇ ಹುದ್ದೆ ಲಭಿಸಿದರೂ ಅದು ಕಾರ್ಯಕರ್ತನಿಗೆ ಮಾತ್ರ ಎನ್ನುವುದು ಜೆಡಿಎಸ್ನಲ್ಲಿದೆ. ಇದು ನೈಜ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಬೋಜಣ್ಣಗೌಡ, ಶರಣಗೌಡ ಮಾಲಿ ಪಾಟೀಲ ಯಲ್ಹೇರಿ, ಈಶ್ವರಮ್ಮ ಗುರುಮಿಠಕಲ್, ಮಹಾದೇವಪ್ಪ ಚಿಂತನಹಳ್ಳಿ, ರವಿಂದ್ರರೆಡ್ಡಿ ಗೂಂಜನೂರ, ಚಂದ್ರಕಲಾ ಅಯ್ಯಣ್ಣಗೌಡ ಕ್ಯಾಸಪನಳ್ಳಿ, ಮುಖಂಡರಾದ ಲಕ್ಷಮಾರೆಡ್ಡಿ ಅನಪುರ, ಚನ್ನಪ್ಪಗೌಡ ಅನಪುರ, ನಾಗರತ್ನ ಅನಪುರ, ರಾಮಣ್ಣ ಕೋಟಗೇರಾ, ವಿಶ್ವನಾಥ ಶಿರವಾರ, ನರಸಪ್ಪ ಕವಡೆ, ಈಶ್ವರ ನಾಯಕ, ಈಶಪ್ಪ ರ್ಯಾಕಾ, ಅಂಬರೀಶಗೌಡ ಬಂದಳ್ಳಿ, ಮಲ್ಲಿಕಾರ್ಜುನ ಅರುಣಿ, ಶರಣು ಆವಂಟಿ, ಶರಣಗೌಡ ಚಾಮನಳ್ಳಿ, ಸಿದ್ದಪ್ಪ ಹೋರುಂಚಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.