‘ಕಠಿಣತೆ’ ಎಂಬುದು ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಭಿನ್ನ. ಕೆಲ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಕಷ್ಟವಾದರೆ, ಇನ್ನೂ ಕೆಲವರಿಗೆ , ಸಮಾಜವಿಜ್ಞಾನ ಕಠಿಣವೆನಿಸಬಹುದು.ಇವುಗಳನ್ನು ಗಮನದಲ್ಲಿಟ್ಟುಕೊಂಡು ಪುನರವಲೋಕನದ ಸಿದ್ಧತೆ ನಡೆಸಿ

ಪಿ ಯುಸಿ, ಎಸ್ಸೆಸ್ಸೆಲ್ಸಿ ಹಾಗೂ ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ವಾರ್ಷಿಕ ಪರೀಕ್ಷೆಯ ದಿನಾಂಕಗಳು ಈಗಾಗಲೇ ನಿಗದಿಯಾಗಿವೆ. ಇದರಿಂದ ಪರೀಕ್ಷೆ ಬರೆಯುವ ಮಕ್ಕಳಲ್ಲಿ ಒತ್ತಡ ಒಂದೆಡೆಯಾದರೆ, ಪಾಲಕರಲ್ಲಿ ತಮ್ಮ ಮಕ್ಕಳ ಫಲಿತಾಂಶ ಬಗ್ಗೆ ತಳಮಳ ಇನ್ನೊಂದೆಡೆ ಸಾಮಾನ್ಯ ಎನ್ನುವಂತಾಗಿವೆ. ಈ ನಿಟ್ಟಿನಲ್ಲಿ ಪರೀಕ್ಷಾ ಸಿದ್ಧತೆಯ ಅಂತಿಮ ತಯಾರಿಯ ಈ ದಿನಗಳಲ್ಲಿ ವಿದ್ಯಾರ್ಥಿಗಳು ಸೂಕ್ತ ಪುನರವಲೋಕನ ಮಾರ್ಗವನ್ನು ತಮ್ಮದಾಗಿಸಿಕೊಂಡರೆ ಖಂಡಿತ ತಾವಂದುಕೊಂಡಂತೆ ಹಾಗೂ ತಮ್ಮ ಪೋಷಕರ ನಿರೀಕ್ಷೆಯಂತೆ ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಲು ಸಾಧ್ಯವಿದೆ.

‘ಉತ್ತಮ ಪುನರವಲೋಕನ’ ಪ್ರಕ್ರಿಯೆಯು ವೇಳಾಪಟ್ಟಿಗೆ ಅನುಗುಣವಾದ ಓದು, ವೇಗವಾದ ಕೈಬರಹದ ರೂಢಿ, ಎಲ್ಲ ಅಧ್ಯಾಯಗಳ ಸಮಗ್ರ ಓದು, ಕಿರು ಟಿಪ್ಪಣೆ, ಹಳೆಯ ಪ್ರಶ್ನೆಪತ್ರಿಕೆಗಳನ್ನು ಆಧರಿಸಿದ ಓದು ಇವುಗಳನ್ನು ಒಳಗೊಂಡಿರಬೇಕು. ಬೆಳಗಿನ ಅವಧಿಯಲ್ಲಿ ಓದಿದ್ದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಈ ವೇಳೆಯಲ್ಲಿ ಮಹತ್ವದ ಅಥವಾ ಕಠಿಣವೆನ್ನಿಸುವ ವಿಷಯಾಂಶಗಳನ್ನು ಮನನ ಮಾಡಿಕೊಂಡು ಅವುಗಳಲ್ಲಿನ ಮಹತ್ವದ ಅಂಶಗಳನ್ನು ‘ಅಂಡರ್ಲೈನ್’ ಮಾಡಿ, ಅವುಗಳನ್ನು ಕಿರುಟಿಪ್ಪಣಿ ರೂಪದಲ್ಲಿ ಬರೆದಿಟ್ಟುಕೊಳ್ಳಬೇಕು. ಆ ಕಿರು ಟಿಪ್ಪಣೆಗಳನ್ನು ಕಣ್ಣಿಗೆ ಕಾಣುವಂತೆ ನಿಮ್ಮ ಅಧ್ಯಯನ ಕೊಠಡಿ ಅಥವಾ ಮನೆಯಲ್ಲಿನ ಗೋಡೆಗಳ ಮೇಲೆ ಅಂಟಿಸಿ. ಈ ಮುಖ್ಯಾಂಶಗಳನ್ನು ಪದೇ ಪದೇ ಅವಲೋಕಿಸುತ್ತಿರಿ. ಹೀಗಾದರೆ, ವಿಷಯವಸ್ತುಗಳು ಸುಲಭವಾಗಿ ನೆನಪಿನಲ್ಲಿ ಉಳಿಯುತ್ತವೆ.

ಇನ್ನು ಹಳೆಗನ್ನಡ ಪದ್ಯಗಳು, ವಿಜ್ಞಾನದ ರಾಸಾಯನಿಕ ಸೂತ್ರಗಳು, ಗಣಿತದ ಸೂತ್ರ ಹಾಗೂ ಪ್ರಮೇಯಗಳಂಥ ಕೆಲ ವಿಷಯಗಳನ್ನು ಕಂಠಪಾಠ ಮಾಡುವುದು ಅನಿವಾರ್ಯ ಎಂಬುದನ್ನು ಮರೆಯದಿರಿ. ನಕ್ಷೆ ಬಿಡಿಸುವುದು, ಜೀವವಿಜ್ಞಾನದ ಚಿತ್ರಗಳನ್ನು ಬಿಡಿಸುವ ಕೌಶಲವನ್ನು ತಪ್ಪದೇ ರೂಢಿಸಿಕೊಳ್ಳಿ.

ಪರೀಕ್ಷೆ ಎಂಬುದು ‘ಫುಲ್ಮೀಲ್’ ಊಟದ ಬಟ್ಟಲಿನಂತೆ. ಅದರಲ್ಲಿ ಉಪ್ಪಿನಕಾಯಿ ಮಾತ್ರ ಇಷ್ಟ; ಅದಷ್ಟೇ ಸಾಕು, ಅದನ್ನಷ್ಟೇ ತಿನ್ನುವೆ ಎನ್ನುವಂತಿಲ್ಲ. ಬಟ್ಟಲಿನಲ್ಲಿ ಇರುವ ಎಲ್ಲ ಪದಾರ್ಥಗಳನ್ನೂ ತಿಂದಾಗ ಮಾತ್ರ ಊಟ ಮುಗಿಸಿದಂತೆ. ಅದೇ ರೀತಿ ಪಠ್ಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಸಮಗ್ರವಾಗಿ, ಪರಿಪಕ್ವವಾಗಿ ಪುನರಾವಲೋಕಿಸಿದರೆ ಮಾತ್ರ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಹಾಗೂ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.

ಈ ನಿರ್ಣಾಯಕ ಸಮಯದಲ್ಲಿ ಟಿ.ವಿ, ಮೊಬೈಲ್ನಿಂದ ದೂರವಿರಿ. ಜಾತ್ರೆ, ಮದುವೆ, ಹಬ್ಬ–ಹರಿದಿನಗಳನ್ನು ಬಿಟ್ಟುಬಿಡಿ. ಈ ಅಮೂಲ್ಯ ಸಮಯವನ್ನು ವಿಷಯಗಳ ಪುನರವಲೋಕನಕ್ಕೆ ಮೀಸಲಿಡಿ. ಶಾಲೆಯಲ್ಲಿ ಆಯೋಜಿಸುವ ಹೆಚ್ಚುವರಿ ತರಗತಿಗಳಿಗೆ ತಪ್ಪದೇ ಹಾಜರಾಗಿ. ಶಿಕ್ಷಕರು, ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಅಗತ್ಯ ಮಾರ್ಗದರ್ಶನ ಪಡೆಯಿರಿ. ಪಾಲಕರು ಮಕ್ಕಳ ಓದಿನ ಜತೆ– ನಿದ್ರೆ, ನೀರಡಿಕೆ, ಊಟ, ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಿ.

‘ಕಠಿಣತೆ’ ಎಂಬುದು ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಭಿನ್ನವಾಗಿರುತ್ತದೆ. ಕೆಲ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಕಬ್ಬಿಣದ ಕಡಲೆಯಾಗಿದ್ದರೆ, ಇನ್ನೂ ಕೆಲ ಮಕ್ಕಳಿಗೆ ಭಾಷೆ, ಸಮಾಜವಿಜ್ಞಾನ ವಿಷಯಗಳು ಕಠಿಣವೆನಿಸಬಹುದು. ಈ ಅಂಶವನ್ನೂ ಪರಿಗಣಿಸಿ ಯಾವ ವಿಷಯದ ಅಧ್ಯಯನಕ್ಕೆ ಎಷ್ಟು ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಬೇಕು. ಏಕೆಂದರೆ ಪರೀಕ್ಷಾ ಫಲಿತಾಂಶ ಎಲ್ಲ ವಿಷಯಗಳಲ್ಲೂ ಗಳಿಸಿದ ಒಟ್ಟಾರೆ ಅಂಕಗಳನ್ನು ಆಧರಿಸಿ ನಿರ್ಧರಿತವಾಗುತ್ತದೆ.

ಪರೀಕ್ಷೆಗೆ ಬಾಕಿ ಉಳಿದಿರುವ ‘ದಿನಗಣನೆಯ ಚಾರ್ಟ್ ಅನ್ನು ಇಳಿಕೆ ಕ್ರಮಾಂಕದಲ್ಲಿ (30, 29, 28, 27…) ಸಿದ್ಧಪಡಿಸಿಕೊಳ್ಳಬೇಕು. ದಿನ ಕಳೆದಂತೆ ಆಯಾ ದಿನವನ್ನು ಕೆಂಪು ಬಣ್ಣದಿಂದ ಹೊಡೆದುಹಾಕಬೇಕು. ಇದು ಪರೀಕ್ಷಾ ದಿನ ಸಮೀಪಿಸುತ್ತಿರುವ ಕುರಿತು ಎಚ್ಚರಿಸುತ್ತದೆ ಹಾಗೂ ಪರೀಕ್ಷೆಯತ್ತ ನಿಮ್ಮ ಮಾನಸಿಕ ಸಿದ್ಧತೆಯನ್ನು ಹೆಚ್ಚಿಸುತ್ತದೆ.

ಇನ್ನೂ ಪರೀಕ್ಷೆ ಆರಂಭವಾದ ದಿನಗಳಲ್ಲಿ ಸಾಮಾನ್ಯವಾಗಿ ಎರಡು ಪರೀಕ್ಷೆಗಳ ನಡುವೆ ಒಂದೆರಡು ದಿನಗಳ ‘ಗ್ಯಾಪ್’ ನೀಡಲಾಗಿರುತ್ತದೆ. ಈ ‘ಗ್ಯಾಪ್’ನಲ್ಲಿ ಮುಂಬರುವ ಪರೀಕ್ಷಾ ವಿಷಯಕ್ಕೆ ಸಂಬಂಧಿಸಿದಂತೆ ನೀವು ಮಾಡಿಕೊಂಡಿರುವ ಆಯಾ ವಿಷಯದ ಕಿರು ಟಿಪ್ಪಣೆಗಳನ್ನು ಪುನರಾವಲೋಕಿಸಿಕೊಳ್ಳಿ. ವಿಷಯಾಂಶಗಳನ್ನು ಕ್ರಮಬದ್ಧವಾಗಿ ಜೋಡಿಸಿ ತಾರ್ಕಿಕ ‘ಮೈಂಡ್ ಮ್ಯಾಪಿಂಗ್’ ಮಾಡಿಕೊಳ್ಳಿ. ಇದರಿಂದ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.

ಪುನರವಲೋಕನ ಹೀಗಿರಲಿ..

*ಯಾವುದೇ ವಿಷಯದ ಪಠ್ಯಕ್ರಮವನ್ನು ಪುನರಾವಲೋಕಿಸುವ ಮುನ್ನ ಆಯಾ ವಿಷಯದ ಹಳೆಯ ಪ್ರಶ್ನೆಪತ್ರಿಕೆಗಳನ್ನು ತಪ್ಪದೇ ಪುನರಾವಲೋಕಿಸಿ.

*ಆಯಾ ವಿಷಯದಲ್ಲಿ ಮಹತ್ವದ ಅಧ್ಯಾಯಗಳು ಯಾವುವು ಎಂಬುದನ್ನು ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳಿಂದ ಕೇಳಿ ತಿಳಿದುಕೊಂಡು ಆವುಗಳಿಗೆ ಹೆಚ್ಚಿನ ಆದ್ಯತೆ ನೀಡಿ.

*ಆಯಾ ಅಧ್ಯಾಯಕ್ಕೆ ಸಂಬಂಧಿಸಿದಂತೆ ಕಿರು ಟಿಪ್ಪಣಿಯನ್ನು ರಚಿಸಿಕೊಳ್ಳಿ. ಇದು ಕ್ಷಿಪ್ರ ಪುನರವಲೋಕನಕ್ಕೆ ಅಗತ್ಯ.

*ಶಾಲೆ–ಕಾಲೇಜುಗಳಲ್ಲಿ ಆಯೋಜಿಸಿದ ಪುನರವಲೋಕನ (ರಿವಿಜನ್) ತರಗತಿಗಳಿಗೆ ತಪ್ಪದೇ ಹಾಜರಾಗಿ. ಪಠ್ಯಪುಸ್ತಕ ಅಥವಾ ನೋಟ್ಸ್ನಲ್ಲಿ ಮಹತ್ವದ ಅಂಶಗಳ ಕೆಳಗೆ ‘ಅಂಡರ್ ಲೈನ್’ ಮಾಡಿ. ಅಥವಾ ಹೈಲೈಟಿಂಗ್ ಪೆನ್ ಬಳಸಿ ಗುರುತಿಸಿಟ್ಟುಕೊಳ್ಳಿ.

*ನಿಮ್ಮದೇ ಆದ ತಂತ್ರ, ತಾರ್ಕಿಕತೆ ಬಳಸಿಕೊಂಡು ಅಬ್ರಿವೇಷನ್ಸ್, ಶಾರ್ಟ್ ರೀಡಿಂಗ್, ಮೈಂಡ್ಮ್ಯಾಪ್ ರಚಿಸಿಕೊಳ್ಳಿ.

*ಕೆಲ ಕಠಿಣವೆನಿಸುವ ಸೂತ್ರ, ಪ್ರಮೇಯ, ಪದ್ಯಭಾಗಗಳನ್ನು ಕಂಠಪಾಠ ಮಾಡಿಕೊಂಡು ಅವಕಾಶ ಸಿಕ್ಕಾಗ ಅವುಗಳನ್ನು ಮನನ ಮಾಡಿಕೊಳ್ಳುತ್ತಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.