ಶಿವಮೊಗ್ಗ ನಗರದ ಸೆರಗಿನಂಚಿನ ಪಿಳ್ಳಂಗೆರೆಯ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿ, ಶಾಲೆಯು ಬಾಗಿಲು ಮುಚ್ಚುವ ಹಂತಕ್ಕೆ ಬಂದಿತ್ತು. ಬಹುತೇಕ ಮಕ್ಕಳು ಶಾಲೆ ತೊರೆದು ನಗರದ ಖಾಸಗಿ ಶಾಲೆಗಳಿಗೆ ಸೇರಿದ್ದರು. ಅತ್ಯಂತ ಹಳೆಯ ಸರ್ಕಾರಿ ಶಾಲೆ ಇನ್ನೇನು ಬಾಗಿಲು ಮುಚ್ಚುತ್ತಿದೆ ಎನ್ನುವಾಗ ಸರ್ಕಾರ ಆ ಊರಿಗೆ ಕರ್ನಾಟಕ ಪಬ್ಲಿಕ್ ಶಾಲೆಯನ್ನು (ಕೆಪಿಎಸ್) ಮಂಜೂರು ಮಾಡಿತು. ಈಗ ಪರಿಸ್ಥಿತಿ ತಿರುವುಮುರುವಾಗಿದೆ. ಹಿಂದೆ ಶಾಲೆ ತೊರೆದ ಮಕ್ಕಳು ಮರಳಿ ಬಂದಿದ್ದಾರೆ. ಪ್ರತಿವರ್ಷ ಖಾಸಗಿ ಶಾಲೆ ತೊರೆದು ಈ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 2025–26ನೇ ಸಾಲಿನಲ್ಲಿ 600ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

ಇದು ಪಿಳ್ಳಂಗೆರೆ ಶಾಲೆಯೊಂದರ ಕಥೆಯಲ್ಲ. ರಾಜ್ಯದಲ್ಲಿ ಈಗಾಗಲೇ ಆರಂಭವಾಗಿರುವ 308 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಬಹುತೇಕ ಶಾಲೆಗಳು ಇಂತಹ ಯಶಸ್ಸಿನ ಪಯಣ ಆರಂಭಿಸಿವೆ. ಬೆಂಗಳೂರು ಉತ್ತರದ ಕೃಷ್ಣಾನಂದ ನಗರ, ಬೆಂಗಳೂರು ದಕ್ಷಿಣದ ಆಡುಗೋಡಿ, ಕೋಲಾರ ಜಿಲ್ಲೆ ಮಾಲೂರಿನ ಮಾಸ್ತಿ, ರಾಮನಗರ ಜಿಲ್ಲೆ ಚನ್ನಪಟ್ಟಣದ ಹೊಂಗನೂರು, ಮೈಸೂರು ಜಿಲ್ಲೆ ಟಿ.ನರಸೀಪುರದ ಮೂಗೂರು, ಬೆಳಗಾವಿಯ ರಾಮತೀರ್ಥ ನಗರ, ಯಾದಗಿರಿಯ ಗಜರ್ಕೋಟ್ ಸೇರಿದಂತೆ ನೂರಾರು ಶಾಲೆಗಳಲ್ಲಿ ಮಕ್ಕಳ ಕಲರವ ಹೆಚ್ಚುತ್ತಾ ಸಾಗಿದೆ.

ಶಾಲಾ ಶಿಕ್ಷಣ ಇಲಾಖೆ 2026–27ನೇ ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಒಂದು ಸಾವಿರ ಕೆಪಿಎಸ್ ಆರಂಭಿಸುವ ಗುರಿ ಇಟ್ಟುಕೊಂಡಿದ್ದು, ಸುಮಾರು 15 ಲಕ್ಷ ಮಕ್ಕಳು ಈ ಶಾಲೆಗಳ ತೆಕ್ಕೆಗೆ ಬರಲಿದ್ದಾರೆ. ರಾಜ್ಯದ ಆರು ಸಾವಿರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಲಾ ಒಂದು ಶಾಲೆ ತೆರೆಯುವ ಯೋಜನೆ ರೂಪುಗೊಂಡಿದೆ. ಯೋಜನೆಯ ಅನುಷ್ಠಾನ ಪೂರ್ಣಗೊಂಡರೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಸುಮಾರು 70 ಲಕ್ಷಕ್ಕೆ ಏರಿಕೆಯಾಗಲಿದೆ.

ಕೆಪಿಎಸ್ನತ್ತ ಆಕರ್ಷಣೆ ಏಕೆ?: ಮಕ್ಕಳನ್ನು ಪೋಷಕರು ಎಲ್ಕೆಜಿ, ಯುಕೆಜಿಗೆ ಖಾಸಗಿ ಶಾಲೆಗೆ ಸೇರಿಸುತ್ತಿದ್ದು, ಸಹಜವಾಗಿಯೇ ಒಂದನೇ ತರಗತಿಗೆ ಆ ಶಾಲೆಯಲ್ಲೇ ಮುಂದುವರಿಸುತ್ತಿದ್ದರು. ಇದನ್ನು ಮನಗಂಡ ಸರ್ಕಾರವು ಸರ್ಕಾರಿ ಶಾಲೆಗಳಲ್ಲೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಷ್ಟೇ ಅಲ್ಲದೆ, ದ್ವಿಭಾಷಾ ಮಾಧ್ಯಮ (ಕನ್ನಡ, ಇಂಗ್ಲಿಷ್) ಬೋಧನೆಗೆ ಅವಕಾಶ ಮಾಡಿಕೊಟ್ಟಿತು.

ಕಳೆದ ವರ್ಷ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 1,008 ಶಾಲೆಗಳಿಗೆ ದ್ವಿಭಾಷಾ ಮಾಧ್ಯಮಕ್ಕೆ ಅನುಮತಿ ನೀಡಿದ ಕೆಲ ದಿನಗಳಲ್ಲೇ 42,000 ಮಕ್ಕಳು ಪೂರ್ವ ಪ್ರಾಥಮಿಕಕ್ಕೆ ಪ್ರವೇಶ ಪಡೆದಿದ್ದರು. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 4,137 ಶಾಲೆಗಳಲ್ಲಿ ಒಂದನೇ ತರಗತಿಯಿಂದ ದ್ವಿಭಾಷಾ ಮಾಧ್ಯಮ ತರಗತಿ ಆರಂಭಿಸಲು ಅನುಮತಿ ನೀಡಿದ್ದು, ಪೂರ್ವ ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆದ ಮಕ್ಕಳ ಸಂಖ್ಯೆ ಒಂದು ಲಕ್ಷ ದಾಟಿದೆ.

‘2025–26ನೇ ಸಾಲಿನಿಂದ ಎಲ್ಕೆಜಿ, ಯುಕೆಜಿ ಆರಂಭವಾಗಿದ್ದು, ಮೊದಲ ವರ್ಷವೇ ನಿಗದಿಗಿಂತ ಹೆಚ್ಚು ಮಕ್ಕಳು ಬಂದಿದ್ದಾರೆ. ಸಹಜವಾಗಿ ಅವರೆಲ್ಲರೂ ಒಂದನೇ ತರಗತಿಗೆ ಮುಂದುವರಿಯುತ್ತಾರೆ. ಇದರಿಂದ ಸರ್ಕಾರಿ ಶಾಲೆಗಳು ಬಲಗೊಳ್ಳುತ್ತವೆ’ ಎನ್ನುತ್ತಾರೆ ಪಿಳ್ಳಂಗೆರೆ ಕರ್ನಾಟಕ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕ ವೈ.ಎಂ.ಧರ್ಮಪ್ಪ. ‘ಸರ್ಕಾರದ ಅನುದಾನದ ಜತೆಗೆ ದಾನಿಗಳೂ ಕೈಜೋಡಿಸಿದ್ದಾರೆ. ಕೊಠಡಿಗಳನ್ನು ಕಟ್ಟಿಕೊಡುತ್ತಿದ್ದಾರೆ. ಭವಿಷ್ಯದ ಶಿಕ್ಷಣದ ದಾರಿದೀಪವಾಗಿ ಕೆಪಿಎಸ್ ಕಾಣುತ್ತಿದೆ ಎನ್ನುತ್ತಾರೆ’ ಎಸ್ಡಿಎಂಸಿ ಅಧ್ಯಕ್ಷ ಎ.ನಾಗರಾಜ್.

ಕೆಪಿಎಸ್ನ ಒಂದೇ ಕ್ಯಾಂಪಸ್ನಲ್ಲಿ ಎಲ್ಕೆಜಿಯಿಂದ ಪಿಯುವರೆಗೂ ವಿದ್ಯಾಭ್ಯಾಸ ಮಾಡಬಹುದು. ಅಂದರೆ, ನಾಲ್ಕು ವರ್ಷದ ಒಂದು ಮಗು ಕೆಪಿಎಸ್ಗೆ ಪ್ರವೇಶ ಪಡೆದರೆ, ಅದು 18 ವರ್ಷ ತುಂಬುವವರೆಗೂ ಒಂದೇ ಕ್ಯಾಂಪಸ್ನಲ್ಲಿ ಶಿಕ್ಷಣ ಪಡೆಯಲಿದೆ. ಇಂತಹ ಅವಕಾಶ ಪೋಷಕರನ್ನು ಆಕರ್ಷಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, ಕೆಪಿಎಸ್ ಶಾಲೆಗಳಿಗೆ ಸೇರುವ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮ ಲಭ್ಯವಾಗುತ್ತದೆ. ಅದೇ ವರ್ಷದಿಂದ ಕಂಪ್ಯೂಟರ್ ಶಿಕ್ಷಣ, ಇಂಗ್ಲಿಷ್ ಭಾಷಾ ಸಂವಹನ ಕಲಿಸಲಾಗುತ್ತದೆ. 7ನೇ ತರಗತಿಯಿಂದ ಪ್ರತಿ ಮಗುವಿಗೂ ಪಠ್ಯದ ಜತೆಗೆ ಕೌಶಲ ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಭವಿಷ್ಯದಲ್ಲಿ ಕೌಶಲಾಧಾರಿತ ಉದ್ಯೋಗಗಳನ್ನು ಪಡೆಯಲು ಈ ಕ್ರಮ ನೆರವಾಗಲಿದೆ.

ಕೆಪಿಎಸ್ ಶಾಲೆಗಳಿಗೆ ರಾಜ್ಯದಲ್ಲಿ ಬಹಳಷ್ಟು ಬೇಡಿಕೆ ಇದ್ದು ಹಂತಹಂತವಾಗಿ 6 ಸಾವಿರ ಶಾಲೆಗಳನ್ನು ಸ್ಥಾಪಿಸಲಾಗುತ್ತದೆ.
ಮಧು ಬಂಗಾರಪ್ಪ ಶಾಲಾ ಶಿಕ್ಷಣ ಸಚಿವ

308 ಪ್ರಸ್ತುತ ಇರುವ ಕೆಪಿಎಸ್ 700 2026– 27ನೇ ಸಾಲಿನಿಂದ ಆರಂಭವಾಗಲಿರುವ ಕೆಪಿಎಸ್ ₹4 ಕೋಟಿ ಒಂದು ಕೆಪಿಎಸ್ ಶಾಲೆಯ ಸ್ಥಾಪನೆಗೆ ನಿಗದಿ ಮಾಡಿರುವ ಮೊತ್ತ

ಶಿಕ್ಷಕರ ನೇಮಕಕ್ಕೆ ಒತ್ತು

ಶಾಲಾ ಶಿಕ್ಷಣ ಇಲಾಖೆಯಲ್ಲಿ ಸುಮಾರು 63 ಸಾವಿರ ಶಿಕ್ಷಕರ ಕೊರತೆ ಇತ್ತು. ಕೋರ್ಟ್ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿಕೊಂಡು 2024–25ನೇ ಸಾಲಿನ ಆರಂಭದ ವೇಳೆಗೆ 13 ಸಾವಿರ ಶಿಕ್ಷಕರನ್ನು ಭರ್ತಿ ಮಾಡಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಶಿಕ್ಷಕರೂ ಸೇರಿದಂತೆ ಇನ್ನೂ 18000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೆಪಿಎಸ್ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬೋಧನೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಒಂದೇ ಕಂತಿನಲ್ಲಿ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಉಚಿತ ಶಿಕ್ಷಣ ಪಿಯುಗೂ ಬಿಸಿಯೂಟ

ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಇತರ ಸರ್ಕಾರಿ ಶಾಲೆಗಳಲ್ಲಿ ಇರುವಂತೆ ಮಧ್ಯಾಹ್ನ ಬಿಸಿಯೂಟ ಮೊಟ್ಟೆ ಹಾಲು ರಾಗಿ ಮಾಲ್ಟ್ ಪಠ್ಯಪುಸ್ತಕ ಶೂ ಸಮವಸ್ತ್ರ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತಿದೆ. 2026–27ನೇ ಸಾಲಿನಿಂದ ಕೆಪಿಎಸ್ ಶಾಲೆಗಳ ಪಿಯು ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ಸರ್ಕಾರ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.