ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಬುದ್ಧಿವಂತರು, ಪರಿಶ್ರಮಿಗಳಾಗಿದ್ದರೂ ಎಲ್ಲೋ ಒಂದು ಕಡೆ ಅವರನ್ನು ಪರೀಕ್ಷೆಯ ಭಯ ಕಾಡುತ್ತಿರುತ್ತದೆ. ಎಲ್ಲಿ ಫೇಲಾಗುವೆನೊ, ಕಡಿಮೆ ಅಂಕ ಗಳಿಸುವೆನೊ ಎಂಬ ಆತಂಕ ಸುಳಿಯುತ್ತಿರುತ್ತದೆ. ಅದರಲ್ಲೂ ಇಂದಿನ ವಿದ್ಯಾರ್ಥಿಗಳಿಗೆ ಶಾಲೆಯ, ಪೋಷಕರ ಒತ್ತಡದಿಂದ ಆತಂಕ ಮತ್ತಷ್ಟು ಹೆಚ್ಚಾಗಿ ಅವರ ಮನೋಬಲ ಕುಸಿಯಲೂಬಹುದು. ಆದರೆ ವಿದ್ಯಾರ್ಥಿಗಳೇ, ಆತಂಕ ಬಿಡಿ. ಸರಿಯಾಗಿ ಓದುವುದು ಹಾಗೂ ಪರೀಕ್ಷೆಗೆ ತಯಾರಾಗುವುದು ಒಂದು ಕಲೆ.

ಪರೀಕ್ಷೆಯಲ್ಲಿ ಜಯಶೀಲರಾಗಬೇಕೆಂದು ಬಯಸಿರುವವರೆಲ್ಲರೂ ಅತಿ ಬುದ್ಧಿವಂತರಾಗಲಿ, ಸೃಜನಶೀಲರಾಗಲಿ ಆಗಿರಲೇಬೇಕೆಂದೇನೂ ಇಲ್ಲ. ಆದರೆ, ಜ್ಞಾನಾರ್ಜನೆಗಾಗಿ ಅಧ್ಯಯನ ಮಾಡುವುದು ಎಷ್ಟು ಮುಖ್ಯವೋ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಕ್ಕಾಗಿ ಅಧ್ಯಯನ ಮಾಡುವುದೂ ಅಷ್ಟೇ ಮುಖ್ಯ ಎಂಬುದು ನೆನಪಿರಲಿ. ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ. ಓದಿನಲ್ಲಿ ತನ್ಮಯತೆ ಮತ್ತು ಸತತ ಅಭ್ಯಾಸದಿಂದ ಏಕಾಗ್ರತೆಯನ್ನು ಪಡೆದುಕೊಳ್ಳಬಹುದು. ಇದರಿಂದ ಆತ್ಮವಿಶ್ವಾಸ ಹೆಚ್ಚಿ ಪರೀಕ್ಷೆಯ ಭಯ ನಿವಾರಣೆಯಾಗುತ್ತದೆ.

ಪರೀಕ್ಷೆಯ ದಿನದ ವಿದ್ಯಾರ್ಥಿಗಳ ಮನಃಸ್ಥಿತಿ ಅವರ ಬರವಣಿಗೆ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ, ಕೆಲವು ಸೂಚನೆಗಳನ್ನು ಪಾಲಿಸುವುದು ಸೂಕ್ತ. ಅವುಗಳೆಂದರೆ: ನಿಮ್ಮ ಪಾಠಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಪಾಠದಲ್ಲಿನ ಪ್ರತಿ ವಾಕ್ಯವೂ ಬಹುಮುಖ್ಯ. ವಾಕ್ಯಗಳೇ ಪ್ರಶ್ನೆಗಳಾಗಿ ಬರಬಹುದು. ತುಂಬಾ ಕಷ್ಟವಾದುದನ್ನು ಪರೀಕ್ಷೆಯ ಸಮಯದಲ್ಲಿ ಓದಲು ಪ್ರಯತ್ನಿಸಬೇಡಿ. ಮನನ ಮಾಡಬೇಕಾದ ಪದ್ಯಗಳನ್ನು ಆದಷ್ಟು ಮುಂಚಿತವಾಗಿ ಮಾಡಿಕೊಳ್ಳಿ. ನಕ್ಷೆಗಳು ಅಥವಾ ಚಿತ್ರದ ಭಾಗಗಳನ್ನು ಪ್ರಶ್ನೆಗಳಾಗಿ ಪರಿವರ್ತಿಸಿ ಕೇಳಬಹುದು. ಆದ್ದರಿಂದ ಎಲ್ಲ ವಿವರಗಳನ್ನೂ ಮನನ ಮಾಡಿಕೊಳ್ಳಿ. ಈಗಾಗಲೇ ಅಧಿಕೃತ ವೆಬ್ಸೈಟ್ಗಳಲ್ಲಿ ಬ್ಲೂಪ್ರಿಂಟ್ಗಳು ಮತ್ತು ಮಾದರಿ ಪ್ರಶ್ನೆಗಳನ್ನು ಪ್ರಕಟ ಮಾಡಿದ್ದು, ಅವುಗಳನ್ನು ಸತತವಾಗಿ ಅಭ್ಯಾಸಕ್ಕೆ ಬಳಸಿಕೊಳ್ಳಿ.

ಗಣಿತ

*ಹೇಳಿಕೆ ರೂಪದ ಪ್ರಶ್ನೆಗಳಿರುತ್ತವೆ. ಪ್ರಶ್ನೆಯನ್ನು ಎಚ್ಚರದಿಂದ ಓದಿ, ಯಾವ ಉತ್ತರ ಕಂಡುಹಿಡಿಯಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳಿ.

*ಸರಿಯಾದ ಸೂತ್ರ ಯಾವುದು ಎಂದು ನಿರ್ಧರಿಸಿ.

*ಗುಣಾಕಾರ ಮತ್ತಿತರ ಮೂಲ ಕ್ರಿಯೆಗಳನ್ನು ಮಾಡುವಾಗ ಎಚ್ಚರ ವಹಿಸಿ (ಸಾಮಾನ್ಯವಾಗಿ ನೀವು ತಪ್ಪುವುದು ಇಲ್ಲೆ. ಅದನ್ನು ಸಿಲ್ಲಿ ಮಿಸ್ಟೇಕ್ ಎಂದು ನೀವು ಅಂದುಕೊಂಡರೂ ಲೆಕ್ಕದ ಉತ್ತರ ತಪ್ಪಾಗುತ್ತದೆ ಎನ್ನುವುದು ಗಮನದಲ್ಲಿ ಇರಲಿ.

*ಲೆಕ್ಕಗಳನ್ನು ಮಾಡುವಾಗ ವರ್ಕಿಂಗ್ ಕಾಲಂ ಅನ್ನು ಸರಿಯಾಗಿ ಬಳಸಿಕೊಳ್ಳಿ.

*ನೀವು ಎಷ್ಟು ಉತ್ತರಿಸುತ್ತೀರೋ ಅದಕ್ಕೆ ತಕ್ಕಂತೆ ಅಂಕಗಳು ದೊರೆಯುತ್ತವೆ. ಹಾಗಾಗಿ, ಯಾವುದೋ ಲೆಕ್ಕ ಬರಲಿಲ್ಲ ಎಂದು ಬಿಟ್ಟುಬಿಡಬೇಡಿ. ಏನು ತಿಳಿದಿರುತ್ತದೋ ಅದನ್ನು ಬರೆಯಿರಿ.

ವಿಜ್ಞಾನ

*ಇಲ್ಲಿ ನಿರ್ದಿಷ್ಟ ಪ್ರಶ್ನೆಗಳಿರುತ್ತವೆ. ಸರಿಯಾದ ನೇರ ಉತ್ತರವನ್ನು ಬರೆಯುವಲ್ಲಿ ನೀವು ಸಮರ್ಥರಾಗಬೇಕು.

*ಎರಡು ಉಪಯೋಗಗಳು, ದೋಷಗಳು, ಪ್ರಯೋಜನಗಳು ಅಥವಾ ಕಾರಣಗಳನ್ನು ಬರೆಯಿರಿ ಎಂದು ಪ್ರಶ್ನೆಯಿರುವಾಗ, ಮುಖ್ಯವಾದ ಎರಡನ್ನು ಮಾತ್ರ ಬರೆಯಿರಿ. ಹೆಚ್ಚು ಬರೆಯುವ ಅವಶ್ಯಕತೆಯಿಲ್ಲ.

ಸಮಾಜವಿಜ್ಞಾನ

*ಪ್ರಮುಖ ಅಂಶಗಳನ್ನು ಎದ್ದು ಕಾಣುವಂತೆ ಬರೆಯಿರಿ. ಒಂದೇ ವಿಷಯವನ್ನು ಅನವಶ್ಯಕವಾಗಿ ಪುನಃ ಪುನಃ ವಿವರಿಸುವ ಗೋಜಿಗೆ ಹೋಗಬೇಡಿ.

*ನಕ್ಷೆಗಳನ್ನು ಬರೆದು, ಅಲ್ಲಿ ಸ್ಥಳಗಳನ್ನು ಗುರುತಿಸುವ ಅಭ್ಯಾಸ ಮಾಡಿಕೊಳ್ಳಿ.

ಭಾಷಾ ವಿಷಯ

*ಸುಂದರ ಕೈಬರಹದ ಕಡೆ ಗಮನಕೊಡಿ. ವ್ಯಾಕರಣ, ಕಾಗುಣಿತ, ವಾಕ್ಯ ರಚನೆ ಮತ್ತು ವಾಕ್ಯಾರ್ಥಕ ಚಿಹ್ನೆಗಳ ಕುರಿತು ಎಚ್ಚರ ವಹಿಸಿ.

*ನಿಮ್ಮ ಉತ್ತರಗಳು ಚಿಕ್ಕದಾಗಿರಲಿ, ಸ್ಪಷ್ಟವಾಗಿರಲಿ.

ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎದುರಿಸುವುದು, ಜಯಶೀಲರಾಗುವುದು ಒಂದು ದೊಡ್ಡ ಸಾಹಸವೇನಲ್ಲ. ತಾಳ್ಮೆಯಿಂದ, ಸರಿಯಾಗಿ ವ್ಯವಸ್ಥೆ ಮಾಡಿಕೊಂಡು ತಯಾರಾದಲ್ಲಿ ಖಂಡಿತ ಜಯಶೀಲರಾಗುವಿರಿ.

ಇದರ ಬಗ್ಗೆ ಗಮನವಿರಲಿ

*ಬಳಸುವ ಪೆನ್ನು, ಪೆನ್ಸಿಲ್ಲು, ರಬ್ಬರ್, ಉತ್ತಮ ಮಟ್ಟದ್ದಾಗಿರಲಿ. ಒಂದೇ ರೀತಿಯ ಪೆನ್ನು, ಪೆನ್ಸಿಲ್ಗಳನ್ನು ಒಂದಕ್ಕಿಂತ ಹೆಚ್ಚು ಇಟ್ಟುಕೊಳ್ಳಿ. ಈ ಎಲ್ಲವನ್ನು ಸರಿಯಾದ ಒಂದು ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಿ.

*ನಿಮಗಿಂತ ಧೈರ್ಯ ಕಳೆದುಕೊಂಡ ವಿದ್ಯಾರ್ಥಿಗಳಿಂದ ದೂರವಿರಿ.

*ನಿಮ್ಮಲ್ಲಿ ನೀವೇ ಧೈರ್ಯ ತುಂಬಿಕೊಳ್ಳಿ. ನನ್ನಿಂದ ‘ಇದು ಸಾಧ್ಯ’ ಎಂದು ಮನಗಾಣಿ.

*ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಹಾಗೂ ತೆರಳಿದ ನಂತರ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಿರಿ.

*ನಿಮ್ಮ ಕ್ರಮಸಂಖ್ಯೆಯನ್ನು (ರಿಜಿಸ್ಟರ್ ನಂಬರ್) ಸರಿಯಾಗಿ, ಸರಿಯಾದ ಸ್ಥಳದಲ್ಲಿ ಬರೆಯಿರಿ.

*ಪ್ರಶ್ನೆಪತ್ರಿಕೆ ಕೈಗೆ ಸಿಕ್ಕೊಡನೇ ಉತ್ತರಿಸಬೇಡಿ. ಎಲ್ಲ ಪ್ರಶ್ನೆಗಳನ್ನೂ ಒಮ್ಮೆ ಸಂಪೂರ್ಣವಾಗಿ ಓದಿ ನಂತರ ಉತ್ತರಿಸಿ.

*ಅಕ್ಷರಗಳು, ಚಿತ್ರಗಳನ್ನು ಸುಂದರವಾಗಿರುವಂತೆ, ಚಿತ್ತು ಮಾಡದೇ ಅಚ್ಚುಕಟ್ಟಾಗಿ ಬರೆಯಿರಿ.

*ಸಾಲುಗಳು ನೇರವಾಗಿ, ಸಮಾನಾಂತರವಾಗಿ ಇರುವಂತೆ ಬರೆಯಿರಿ.

*ಯಾವ ಪ್ರಶ್ನೆಗೆ ನಿಖರವಾದ ಉತ್ತರ ಗೊತ್ತಿರುತ್ತದೆಯೋ ಅದೇ ಪ್ರಶ್ನೆಗೆ ಮೊದಲು ಉತ್ತರಿಸಿ. ನಿಖರವಾದ ಉತ್ತರ ಗೊತ್ತಿಲ್ಲದ ಪ್ರಶ್ನೆಗೆ ಕೊನೆಯಲ್ಲಿ ಅಥವಾ ಯಾವಾಗ ನಿಮಗೆ ಉತ್ತರ ನೆನಪಾಗುವುದೋ ಆಗ ಉತ್ತರಿಸಿ.

*ಅಕ್ಕಪಕ್ಕದವರ ಉತ್ತರಗಳನ್ನು ನೋಡಬೇಡಿ.

*ಯಾವ ಪ್ರಶ್ನೆಯನ್ನೂ ಉತ್ತರಿಸದೇ ಬಿಟ್ಟು ಬರಬೇಡಿ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ.

*ನೀವು ಬರೆದಿರುವ ಉತ್ತರಗಳನ್ನು ಪುನಃ ಪರಿಶೀಲಿಸಿ.

*ಉತ್ತರ ಪತ್ರಿಕೆಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ ಬಲವಾಗಿ ಕಟ್ಟಿ.

*ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಅದರ ಚಿಂತೆಯನ್ನು ಬಿಟ್ಟು ಮುಂದಿನ ವಿಷಯವನ್ನು ಅಭ್ಯಾಸ ಮಾಡಿ.

ಪೋಷಕರೇ ನಿಮಗೆ ತಿಳಿದಿರಲಿ

*ಪ್ರತಿ ಮಗುವೂ ವಿಶಿಷ್ಟ. ಇತರ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಸಬೇಡಿ.

*ನಿಮ್ಮ ಮಗುವಿನ ಭೌತಿಕ ಅಗತ್ಯಗಳು, ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯತ್ನಿಸಿ.

*ಮಕ್ಕಳಿಗೆ ಸ್ವಲ್ಪವೂ ಇಷ್ಟವಿಲ್ಲದಾಗ ಅವರನ್ನು ಓದು ಎಂದು ಬಲವಂತ ಮಾಡಬೇಡಿ.

*ದಿನದ ನಿಶ್ಚಿತ ಸಮಯದಲ್ಲಿ ಓದು, ಬರಹ ಮಾಡಲೇಬೇಕಾದುದು ಅತ್ಯಂತ ಅವಶ್ಯ ಎನ್ನುವುದನ್ನು ಮನದಟ್ಟು ಮಾಡಿ.

*ಯಾವಾಗಲೂ ಮಕ್ಕಳೊಂದಿಗೆ ಸಕಾರಾತ್ಮಕವಾಗಿ ಮಾತನಾಡಿ. ನಕಾರಾತ್ಮಕವಾಗಿ ಆಡುವ ಮಾತು ದುಷ್ಪರಿಣಾಮ ಬೀರಬಹುದು.

*ಮಕ್ಕಳ ಓದಿನ ವಿಷಯದಲ್ಲಿ ಸಮಸ್ಯೆಗಳು ಬಂದಾಗ ಮಕ್ಕಳನ್ನೂ ಜೊತೆಗಿರಿಸಿಕೊಂಡು ಶಿಕ್ಷಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ.

*ಮಕ್ಕಳಿಗೆ ‘ನಿಮ್ಮಲ್ಲಿ ಕಲಿಯುವ ಸಾಮರ್ಥ್ಯ ಇದೆ’ ಎಂಬ ಆತ್ಮವಿಶ್ವಾಸ ತುಂಬಿ.

*ಪರೀಕ್ಷೆಯ ಸಮಯದಲ್ಲಿ ಹೆಚ್ಚು ಕಾಲ ಮಕ್ಕಳೊಂದಿಗಿರಿ.

*ತಂದೆ –ತಾಯಿ ಇಬ್ಬರೂ ಒಂದೇ ರೀತಿ ಮಾರ್ಗದರ್ಶನ ಕೊಡಿ.

*ಯಾವುದಾದರೂ ವಿಷಯದಲ್ಲಿ ನಿಮ್ಮ ಮಗ/ ಮಗಳು ಸರಿಯಾಗಿ ಉತ್ತರಿಸದಿದ್ದಲ್ಲಿ, ಮುಂದಿನ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸುವುದಕ್ಕೆ ಉತ್ತೇಜಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.