ಲೆಗ್ರ್ಯಾಂಡ್ ಸಂಸ್ಥೆಯು ಭಾರತದಾದ್ಯಂತ ಎಂಜಿನಿಯರಿಂಗ್, ವಾಸ್ತುಶಿಲ್ಪ, ಹಣಕಾಸು ಮತ್ತು ವಿಜ್ಞಾನದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತದೆ.

ಅರ್ಹತೆ:

ಪ್ರತಿಭಾನ್ವಿತ ವಿದ್ಯಾರ್ಥಿನಿಯರು, ಅಂಗವಿಕಲ ಹೆಣ್ಣುಮಕ್ಕಳು, ಎಲ್ಜಿಬಿಟಿಕ್ಯು ವಿದ್ಯಾರ್ಥಿಗಳು, ಕೋವಿಡ್ಪೀಡಿತ ವಿದ್ಯಾರ್ಥಿಗಳು ಮತ್ತು ಒಂಟಿ ಪೋಷಕರನ್ನು ಹೊಂದಿರುವ ವಿದ್ಯಾರ್ಥಿಗಳು ಅಥವಾ ಪೋಷಕರಿಲ್ಲದವರಿಗೆ ಮುಕ್ತವಾಗಿದೆ. ಅರ್ಜಿದಾರರು ಬಿ.ಟೆಕ್., ಬಿ.ಇ., ಬಿ.ಆರ್ಕ್., ಬಿ.ಬಿ.ಎ., ಬಿ.ಕಾಂ., ಅಥವಾ ಬಿ.ಎಸ್ಸಿ. ಪದವಿಗೆ ಪ್ರವೇಶ ಪಡೆದಿರಬೇಕು. 2024–25ನೇ ಸಾಲಿನಲ್ಲಿ 12ನೇ ತರಗತಿ ಉತ್ತೀರ್ಣರಾಗಿರಬೇಕು. 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಬಾಲಕಿಯರು ಕನಿಷ್ಠ ಶೇ 70ರಷ್ಟು ಅಂಕ, ವಿಶೇಷ ವರ್ಗದ ವಿದ್ಯಾರ್ಥಿಗಳು ಕನಿಷ್ಠ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ನಿರ್ದಿಷ್ಟ ಪ್ರಕರಣಗಳಿಗೆ ವಿನಾಯಿತಿ ಇರುತ್ತದೆ. ಕುಟುಂಬದ ವಾರ್ಷಿಕ ಆದಾಯ ಮಿತಿ ಗರಿಷ್ಠ ₹ 5 ಲಕ್ಷ. ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಆದ್ಯತೆ.

ಆರ್ಥಿಕ ಸಹಾಯ:

ವಿದ್ಯಾರ್ಥಿನಿಯರಿಗೆ ಶೇ 60ರಷ್ಟು ಶುಲ್ಕದಂತೆ ಕೋರ್ಸ್ ಪೂರ್ಣಗೊಳ್ಳುವವರೆಗೆ ವರ್ಷಕ್ಕೆ ₹ 60 ಸಾವಿರ ಹಾಗೂ ವಿಶೇಷ ವರ್ಗದವರಿಗೆ ₹ 1 ಲಕ್ಷದವರೆಗೆ ಶೇ 80ರಷ್ಟು ಶುಲ್ಕವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 08-09-2025

ವಿಧಾನ: ಆನ್ಲೈನ್.

ಹೆಚ್ಚಿನ ಮಾಹಿತಿಗೆ: ಲೆಗ್ರ್ಯಾಂಡ್ ಎಂಪವರಿಂಗ್ ಸ್ಕಾಲರ್ಷಿಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.