2024ರ ನವೆಂಬರ್ನಲ್ಲಿ ಶಿಲಾಖಂಡದ ಒಂದು ತುಣುಕು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS)ಡಿಕ್ಕಿಯಾಗಿ ಘರ್ಷಣೆಯೊಂದಿಗೆ ಬೆಂಕಿಕಿಡಿಗಳನ್ನು ಉಂಟು ಮಾಡಿದೆ. ಇದರಿಂದ ISS ಪಥವನ್ನು ಬದಲಿಸುವ ನಿಟ್ಟಿನಲ್ಲಿ ತಂತ್ರಜ್ಞರು ಯೋಚಿಸುವಂತೆ ಮಾಡಿದೆ. ಈ ಘಟನೆ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಸೇರಿದಂತೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ಇತರ ಗಗನಯಾತ್ರಿಗಳ ಕಳವಳ ಹೆಚ್ಚಿಸಿದೆ. ಬಾಹ್ಯಾಕಾಶ ಅವಶೇಷಗಳ ಘರ್ಷಣೆಗೆ ಸಂಬಂಧಿಸಿದ ಈ ಘಟನೆಗೆ ‘ಕೆಸ್ಲರ್ ಸಿಂಡ್ರೋಮ್’ ಎನ್ನುತ್ತಾರೆ.

‘ಕೆಸ್ಲರ್ ಸಿಂಡ್ರೋಮ್’ ಪರಿಕಲ್ಪನೆಯನ್ನು 1978ರಲ್ಲಿ ನಾಸಾ (NASA) ವಿಜ್ಞಾನಿಗಳಾದ ಡೊನಾಲ್ಡ್ ಜೆ. ಕೆಸ್ಲರ್ ಮತ್ತು ಬರ್ಟನ್ ಜಿ. ಕೋರ್–ಪಲೈಸ್ ಮೊದಲ ಬಾರಿ ಪ್ರಸ್ತಾಪಿಸಿದರು. ಬಾಹ್ಯಾಕಾಶದಲ್ಲಿರುವ ಶಿಲಾಖಂಡರಾಶಿಗಳು ನಿಷ್ಕ್ರಿಯ ಉಪಗ್ರಹಗಳು, ರಾಕೆಟ್ ಬಿಡಿಭಾಗಗಳೊಂದಿಗೆ ಘರ್ಷಣೆಗೆ ಈಡಾಗುವುದನ್ನು ‘ಕೆಸ್ಲರ್ ಸಿಂಡ್ರೋಮ್’ ಎನ್ನುತ್ತಾರೆ. ಇದನ್ನು ‘ಕ್ಯಾಸ್ಕೇಡಿಂಗ್’ ಅಥವಾ ‘ಅಬ್ಲೇಶನ್ ಕ್ಯಾಸ್ಕೇಡ್’ ಎನ್ನಲಾಗುತ್ತದೆ. ಈ ಮಾದರಿಯ ಘಟನೆಗಳಲ್ಲಿ ಬಾಹ್ಯಾಕಾಶ ತ್ಯಾಜ್ಯ ISSಗೆ ಮಾತ್ರವಲ್ಲದೇ, GPS, ಇಂಟರ್ನೆಟ್, ದೂರದರ್ಶನ ಸೇವೆಗಳಿಗೆ ಸಂಬಂಧಿಸಿದ ವಸ್ತುಗಳಿಗೂ ಹಾನಿ ಉಂಟುಮಾಡಬಲ್ಲದು.

ಈಗಾಗಲೇ ಬಾಹ್ಯಾಕಾಶ ತ್ಯಾಜ್ಯದ ಲಕ್ಷಾಂತರ ಶಿಲಾಖಂಡರಾಶಿಗಳು ಭೂಕಕ್ಷೆಯಲ್ಲಿ ಅನಿಯಂತ್ರಿತ ವೇಗದಲ್ಲಿ ಸುತ್ತುತ್ತಿದ್ದು, ಈ ಶಿಲಾಖಂಡರಾಶಿಗಳು ಮಾನವ ಬಾಹ್ಯಾಕಾಶ ಹಾರಾಟ ಮತ್ತು ಉಪಗ್ರಹ ಕಾರ್ಯಾಚರಣೆಗಳಿಗೆ ಬೆದರಿಕೆ ಒಡ್ಡಿವೆ. 1957ರಲ್ಲಿ ಬಾಹ್ಯಾಕಾಶ ಪರಿಶೋಧನೆ ಪ್ರಾರಂಭವಾದಾಗಿನಿಂದ, ವಿವಿಧ ದೇಶಗಳು ಪೈಪೋಟಿಗೆ ಬಿದ್ದಂತೆ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ನಡೆಸಿದ್ದು, ಬಾಹ್ಯಾಕಾಶ ಅವಶೇಷಗಳ (ತ್ಯಾಜ್ಯ) ಪ್ರಮಾಣ ನಿರಂತರವಾಗಿ ಹೆಚ್ಚಿದೆ. ಭೂ ಹೊರಕಕ್ಷೆಗಿಂತ ಭೂ ಕೆಳಕಕ್ಷೆಯಲ್ಲಿಯೇ (LEO: Low Earth Orbit) ಮಾನವ ನಿರ್ಮಿತ ಉಪಗ್ರಹಗಳು, ಗಗನನೌಕೆಗಳ ಸಂಖ್ಯೆ ಹಾಗೂ ಅವಶೇಷಗಳ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಾಗಿ, ಇಲ್ಲಿ ಘರ್ಷಣೆಯ ಸಾಧ್ಯತೆ ಹೆಚ್ಚಿದೆ.

1957ರಲ್ಲಿ ಅಮೆರಿಕ ‘ಸ್ಪುಟ್ನಿಕ್ 1’ ಉಪಗ್ರಹ ಉಡಾವಣೆ ಮಾಡಿದ ನಂತರ, ‘NORAD’ (North American Aerospace Defense Command) ರಾಕೆಟ್ ಉಡಾವಣೆ ಮತ್ತು ಭೂಕಕ್ಷೆ ತಲುಪುವ ವಸ್ತುಗಳ ಮಾಹಿತಿ ಕಲೆಹಾಕುತ್ತಿದ್ದು, ‘NORAD’ ಉದ್ಯೋಗಿ ಜಾನ್ ಗಬ್ಬಾರ್ಡ್ ಈ ಉತ್ಪನ್ನಗಳ ಕಕ್ಷೀಯ ಮಾರ್ಗ ಗುರುತಿಸುವ ತಂತ್ರವನ್ನು ಅಭಿವೃದ್ಧಿಪಡಿಸಿದರು. ಈಗಲೂ ಬಾಹ್ಯಾಕಾಶ ಕಾರ್ಯಾಚರಣೆಯ ಸಾಧನಗಳು ಸಾಗುವ ಮಾರ್ಗವನ್ನು ಗುರುತಿಸಲು ‘ಗಬ್ಬಾರ್ಡ್ ರೇಖಾಚಿತ್ರ’ಗಳನ್ನೇ ವ್ಯಾಪಕವಾಗಿ ಬಳಸಲಾಗುತ್ತಿದೆ. ಬಾಹ್ಯಾಕಾಶ ಅವಶೇಷಗಳನ್ನು ಅಭ್ಯಸಿಸಲು ‘ಬೇಕರ್–ನನ್’ ಕ್ಯಾಮೆರಾಗಳು, ಆಪ್ಟಿಕಲ್ ದೂರದರ್ಶಕಗಳು, ಕಡಿಮೆ ತರಂಗಾಂತರದ ರೇಡಾರ್ ಉಪಕರಣಗಳನ್ನು ಬಳಸಲಾಗುತ್ತದೆ. ಇದರಿಂದ 20 ಸೆಂ.ಮೀ.ಗಿಂತ ಕಡಿಮೆ ಗಾತ್ರದ ವಸ್ತುಗಳನ್ನೂ ಗುರುತಿಸಬಹುದಾಗಿದೆ.

2024ರ ದತ್ತಾಂಶಗಳನ್ವಯ ಇಲ್ಲಿಯವರೆಗೆ ಉಡಾವಣೆ ಮಾಡಿರುವ ಸುಮಾರು 59,000 ಕೃತಕ ಉಪಗ್ರಹಗಳ ಪೈಕಿ 28,300 ಕೃತಕ ಉಪಗ್ರಹಗಳು ಭೂಕಕ್ಷೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಬಾಕಿ ಉಳಿದ 30,700 ಕೃತಕ ಉಪಗ್ರಹಗಳು ನಿಷ್ಕ್ರಿಯವಾಗಿವೆ. ಭೂಕಕ್ಷೆಯಲ್ಲಿ 1 ರಿಂದ 10 ಸೆಂ.ಮೀ. ಗಾತ್ರದ 6 ಲಕ್ಷಕ್ಕೂ ಹೆಚ್ಚು ಬಾಹ್ಯಾಕಾಶ ತ್ಯಾಜ್ಯದ ತುಣುಕುಗಳು ಹಾಗೂ 10 ಸೆಂ.ಮೀ.ಗಿಂತ ಹೆಚ್ಚಿನ ಗಾತ್ರದ 23,000 ಬಾಹ್ಯಾಕಾಶ ತ್ಯಾಜ್ಯದ ಘಟಕಗಳು ಉತ್ಪತ್ತಿಯಾಗಿವೆ. 2026ರ ಹೊತ್ತಿಗೆ 8,211 ಕೆ.ಜಿ. ತೂಕದ ‘ಎನ್ವಿಸ್ಯಾಟ್’ ಉಪಗ್ರಹ ಹಾಗೂ ಸ್ಪೇಸ್ಎಕ್ಸ್ನ ಬಹುತೇಕ ‘ಸ್ಟಾರ್ಲಿಂಕ್’ ಉಪಗ್ರಹಗಳು ನಿಷ್ಕ್ರಿಯಗೊಳ್ಳಲಿವೆ.

1,000 ಕೆ.ಜಿ. ತೂಕದ ಬಾಹ್ಯಾಕಾಶ ನೌಕೆ ಸ್ಫೋಟಿಸಬಲ್ಲ 1 ಕೆ.ಜಿ. ತ್ಯಾಜ್ಯ!

1980ರ ದಶಕದಲ್ಲಿ, ಅಮೆರಿಕದ ವಾಯುಪಡೆ (USAF) ಮಾನವನಿರ್ಮಿತ ಉಪಗ್ರಹಗಳು ಅಥವಾ ಇತರ ಬಾಹ್ಯಾಕಾಶ ಘಟಕಗಳೊಂದಿಗೆ ಶಿಲಾಖಂಡರಾಶಿಗಳು ಡಿಕ್ಕಿ ಹೊಡೆದರೆ ಏನಾಗುತ್ತದೆ ಎಂಬ ಪ್ರಾತ್ಯಕ್ಷಿಕೆ ನಡೆಸಿತು. ಈ ಪ್ರಯೋಗದಲ್ಲಿ ಬಹುತೇಕ ಶಿಲಾಖಂಡರಾಶಿಗಳು ಹಗುರವಾಗಿದ್ದರೂ, ಹೆಚ್ಚಿನ ದ್ರವ್ಯರಾಶಿ ಮತ್ತು ವೇಗದ ಕಾರಣ ಅವು ಮಾನವನಿರ್ಮಿತ ಬಾಹ್ಯಾಕಾಶ ನೌಕೆ ಹಾಗೂ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ ಎಂಬುದು ಸಾಬೀತಾಯಿತು. ಉದಾಹರಣೆಗೆ: ಪ್ರತಿ ಸೆಕೆಂಡಿಗೆ 10 ಕಿ.ಮೀ. ವೇಗದಲ್ಲಿ ಸಂಚರಿಸುವ, ಹೆಚ್ಚಿನ ಸಾಂದ್ರತೆ ಹೊಂದಿದ 1 ಕೆ.ಜಿ. ತೂಕದ ಬಾಹ್ಯಾಕಾಶ ಅವಶೇಷವೊಂದು 1000 ಕೆ.ಜಿ. ತೂಕದ ಬಾಹ್ಯಾಕಾಶ ನೌಕೆಗೆ ಡಿಕ್ಕಿ ಹೊಡೆದರೆ ಆ ಬಾಹ್ಯಾಕಾಶ ನೌಕೆ ಛಿದ್ರಗೊಳ್ಳುತ್ತದೆ ಎಂದು ಕಂಡುಕೊಳ್ಳಲಾಯಿತು. ಈ ಮಾದರಿಯಲ್ಲಿ ಪ್ರತಿ ವರ್ಷ ಒಂದು ಸಕ್ರಿಯ ಉಪಗ್ರಹ ಬಾಹ್ಯಾಕಾಶ ತ್ಯಾಜ್ಯ ಡಿಕ್ಕಿಯಿಂದ ನಾಶವಾಗುತ್ತಿದೆ!

ಸಂಭವನೀಯ ಪರಿಹಾರಗಳು

*ಭೂ ವಾತಾವರಣಕ್ಕೆ ಮರುಪ್ರವೇಶಿಸಬಲ್ಲ ಉಪಗ್ರಹ ಹಾಗೂ ರಾಕೆಟ್ಗಳ ಅಭಿವೃದ್ಧಿ.

*ಶೇಖರಣಾ ಕಕ್ಷೆಗೆ ಚಲಿಸಲು ಸಮರ್ಥವಾಗಿರುವ, ಅಥವಾ ಮರುಬಳಕೆಯ ಉಪಗ್ರಹ ಹಾಗೂ ರಾಕೆಟ್ಗಳ ಅಭಿವೃದ್ಧಿ.

*ಭೂ ಕಕ್ಷೆಯಲ್ಲಿರುವ ಬಾಹ್ಯಾಕಾಶ ತ್ಯಾಜ್ಯವನ್ನು ಸೂರ್ಯ ಅಥವಾ ಚಂದ್ರನ ಕಕ್ಷೆಗೆ ವರ್ಗಾಯಿಸುವುದು.

*‘ಲೇಸರ್ ಬೂಮ್’ ಮೂಲಕ ಬಾಹ್ಯಾಕಾಶ ತ್ಯಾಜ್ಯವನ್ನು ಸಂಪೂರ್ಣ ನಾಶಗೊಳಿಸುವುದು. (ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಸ್ವಿಸ್ ಸಹಯೋಗದ ಸ್ಟಾರ್ಟ್ಅಪ್ ‘ಕ್ಲಿಯರ್ಸ್ಪೇಸ್’ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ)

ಮಾನವನಿರ್ಮಿತ ಬಾಹ್ಯಾಕಾಶ ತ್ಯಾಜ್ಯ!

*1978ರಲ್ಲಿ ಅಮೆರಿಕ ಉಡಾವಣೆ ಮಾಡಿದ ‘ಡೆಲ್ಟಾ’ ರಾಕೆಟ್ಗಳು ಅನಿರೀಕ್ಷಿತವಾಗಿ ಬಾಹ್ಯಾಕಾಶದಲ್ಲಿ ಸ್ಫೋಟಿಸಿದ್ದರಿಂದ 420ಕ್ಕೂ ಹೆಚ್ಚು ಶಿಲಾಖಂಡರಾಶಿಗಳು ಉತ್ಪನ್ನಗೊಂಡಿವೆ.

*1985ರಲ್ಲಿ, ಅಮೆರಿಕ ಮೊದಲ ಬಾರಿ ‘ಉಪಗ್ರಹ ವಿರೋಧಿ ಕ್ಷಿಪಣಿ’ (ASM) ಉತ್ಪಾದಿಸಿತು. ಇದರ ಪರೀಕ್ಷೆಗಾಗಿ, 1985ರಲ್ಲಿ ‘ASM–135’ ಉಪಗ್ರಹ ವಿರೋಧಿ ಕ್ಷಿಪಣಿಯನ್ನು ಗಂಟೆಗೆ 24,000 ಕಿ.ಮೀ. ವೇಗದಲ್ಲಿ 14 ಕೆ.ಜಿ. ಸ್ಫೋಟಕವನ್ನು ಬಳಸಿಕೊಂಡು ಭೂಮೇಲ್ಮೈಯಿಂದ 555 ಕಿ.ಮೀ. ಎತ್ತರದಲ್ಲಿ ಸಂಚರಿಸುತ್ತಿದ್ದ ‘Solwind P78–1’ ಉಪಗ್ರಹಕ್ಕೆ ಡಿಕ್ಕಿ ಹೊಡೆಸಲಾಯಿತು. ಇದು 1000ಕ್ಕೂ ಹೆಚ್ಚು ಶಿಲಾಖಂಡಗಳ ರಾಶಿಯನ್ನು ಸೃಷ್ಟಿಸಿತು.

*11 ಮಾರ್ಚ್ 2000ರಂದು ಚೈನೀಸ್ ‘ಲಾಂಗ್ ಮಾರ್ಚ್ 4’ ಬೂಸ್ಟರ್ನ ಮೂರನೇ ಹಂತದ ವಿಘಟನೆಯಿಂದ ಸುಮಾರು 300 ಶಿಲಾಖಂಡರಾಶಿಗಳು ಉತ್ಪನ್ನಗೊಂಡಿವೆ.

*ಜನವರಿ 11, 2007ರಂದು, ಚೀನಾ ಕೂಡ ಉಪಗ್ರಹ ವಿರೋಧಿ ಕ್ಷಿಪಣಿ ಪರೀಕ್ಷೆ ನಡೆಸಿತು. ಇದರಲ್ಲಿ ಭೂಮೇಲ್ಮೈಯಿಂದ 865 ಕಿ.ಮೀ. ಎತ್ತರದಲ್ಲಿದ್ದ 750 ಕೆ.ಜಿ. ತೂಕದ ‘FY–1C’ ಉಪಗ್ರಹವನ್ನು ಛಿದ್ರಗೊಳಿಸಲಾಯಿತು. ಇದರಿಂದ 1000ಕ್ಕೂ ಹೆಚ್ಚು ಪ್ರಮಾಣದ ಶಿಲಾಖಂಡರಾಶಿಗಳು ಉತ್ಪತ್ತಿಯಾಗಿವೆ.

*2009ರಲ್ಲಿ ನಿಷ್ಕ್ರಿಯಗೊಂಡ ರಷ್ಯಾದ ಉಪಗ್ರಹ ಮತ್ತು ಸಕ್ರಿಯ ಸಂವಹನ ಉಪಗ್ರಹದ ನಡುವೆ ನಡೆದ ಘರ್ಷಣೆ, 2,000ಕ್ಕೂ ಹೆಚ್ಚು ಬಾಹ್ಯಾಕಾಶ ತ್ಯಾಜ್ಯದ ತುಣುಕುಗಳನ್ನು ಉತ್ಪಾದಿಸಿದೆ.

*ನವೆಂಬರ್ 15, 2021 ರಷ್ಯಾ ಕೂಡ ಉಪಗ್ರಹ ವಿರೋಧಿ ಕ್ಷಿಪಣಿ ಪರೀಕ್ಷೆ ನಡೆಸಿತು. ಈ ಪ್ರಯೋಗದಲ್ಲಿ ‘Kosmos 1408’ ಹೆಸರಿನ ಉಪಗ್ರಹ ಛಿದ್ರಗೊಂಡು 1500ಕ್ಕೂ ಹೆಚ್ಚು ಶಿಲಾಖಂಡರಾಶಿಗಳನ್ನು ಸೃಷ್ಟಿಸಿದೆ.

*ಆಗಸ್ಟ್ 9, 2024ರಂದು ಚೀನಾದ ‘ಲಾಂಗ್ ಮಾರ್ಚ್ 6A’ ರಾಕೆಟ್ ಕೆಳ ಭೂಕಕ್ಷೆಯಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡು 700ಕ್ಕೂ ಹೆಚ್ಚು ಶಿಲಾಖಂಡರಾಶಿಗಳನ್ನು ಸೃಷ್ಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.