ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ವೇಗವಾಗಿ ಓದಿ ನೆನಪಿನಲ್ಲಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳುವುದು ಸೂಕ್ತ. ಇದು ‘ರೋಬೊ ರೀಡಿಂಗ್’ ಎಂದೇ ಜನಪ್ರಿಯವಾಗಿದೆ.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ, ಅದರಲ್ಲಿ ಯಶಸ್ಸು ಗಳಿಸಲು ಸ್ಪರ್ಧಾರ್ಥಿಗಳು ಎಲ್ಲಾ ರೀತಿಯಿಂದಲೂ ಸಿದ್ಧತೆ ನಡೆಸಬೇಕಾಗುತ್ತದೆ. ಮೊದಲು ಸಾಕಷ್ಟು ಅಧ್ಯಯನ ಸಾಮಗ್ರಿ ಹೊಂದಿರುವುದು ಅವಶ್ಯಕ. ಅಗತ್ಯವಿರುವ ಪುಸ್ತಕಗಳು, ಟಿಪ್ಪಣಿ, ಆನ್‌ಲೈನ್‌ನಲ್ಲಿ ವಿಷಯ ಸಂಗ್ರಹ.. ಹೀಗೆ ಏನೇನು ಬೇಕೋ ಅವುಗಳೆಲ್ಲವನ್ನೂ ಕ್ರೋಢೀಕರಿಸಿಕೊಂಡು ಅಧ್ಯಯನ ಆರಂಭಿಸಬೇಕು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಅಂಶಗಳನ್ನು ಓದಬೇಕಾಗುತ್ತದೆ. ಕಡಿಮೆ ಸಮಯದಲ್ಲಿ ಎಲ್ಲಾ ವಿಷಯಗಳನ್ನು ಮನನ ಮಾಡಲು ವೇಗವಾಗಿ ಓದುವುದೊಂದೇ ಪರಿಹಾರ. ಪರೀಕ್ಷೆ ಸಮೀಪಿಸುತ್ತಿದೆ, ಸಮಯದ ಅಭಾವವಿದೆ, ಓದಬೇಕಾದ ವಿಷಯ ಸಾಕಷ್ಟಿದೆ ಎಂದು ಗಾಬರಿ ಪಡುವ ಬದಲು, ಹಗಲುರಾತ್ರಿ ನಿದ್ರೆಗೆಟ್ಟು ಕಷ್ಟಪಟ್ಟು ಓದುವ ಬದಲು ಚಾಣಾಕ್ಷತನದಿಂದ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ರೋಬೊಟ್ ಹೇಗೆ ಎಲ್ಲವನ್ನೂ ವೇಗವಾಗಿ ಗ್ರಹಿಸಿ ಕಾರ್ಯರೂಪಕ್ಕೆ ಇಳಿಸುತ್ತದೆಯೋ ಅದೇ ತರಹ ನೀವೂ ಕೂಡ ಪ್ರಯತ್ನಿಸಿದರೆ ಈ ‘ರೋಬೊ ರೀಡಿಂಗ್’ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ವೇಗವಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

*ಪ್ರತಿದಿನ ಓದಬೇಕಾದ ಅಂಶಗಳನ್ನು ದಿನಚರಿಯಲ್ಲಿ ಗುರುತಿಸಿಕೊಳ್ಳಿ. ವೇಳಾಪಟ್ಟಿಯಂತೆ ಅಧ್ಯಯನ ನಡೆಸಿ. ರಾತ್ರಿ ವೇಳೆ ಅಂದು ಓದಿದ ಅಂಶಗಳನ್ನು ಗುರುತಿಸಿಕೊಳ್ಳಿ. ನಿಮ್ಮ ಯೋಜನೆಯಂತೆ ಓದಿನ ವೇಗ ಸಾಗಿದೆಯೋ, ಇಲ್ಲವೋ ಗಮನಿಸಿ. ಗುರಿ ಇಟ್ಟುಕೊಂಡಿದ್ದಕ್ಕಿಂತ ಕಡಿಮೆ ಇದ್ದರೆ ಓದಿನ ವೇಗ ಹೆಚ್ಚಿಸಿಕೊಳ್ಳಿ.

*ಓದಿನ ಸಾಧನೆಗಾಗಿ ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ನಿಮಗೆ ದೊರೆತ ಸಮಯವನ್ನು ಓದಿನ ಗುರಿಯನ್ನು ಕಾರ್ಯ ರೂಪಕ್ಕೆ ತರಲು ಯಶಸ್ವಿಯಾಗಿ ಬಳಸಿ.

*ಪ್ರತಿ ವಿಷಯಕ್ಕೂ ಒಂದೊಂದು ನೋಟ್‌ಬುಕ್ ಇಟ್ಟುಕೊಂಡು, ಓದಿದ ಪ್ರಮುಖ ಅಂಶಗಳನ್ನು ಅದರಲ್ಲಿ ಬರೆದಿಟ್ಟುಕೊಳ್ಳಿ. ಎಲ್ಲಾ ಪುಸ್ತಕಗಳನ್ನು ಅಧ್ಯಯನ ಮಾಡಿ ನೋಟ್ಸ್ ತಯಾರಿಸಿಕೊಳ್ಳಿ.

*ಓದುವ ವೇಳೆ ನಿರಾಳವಾಗಿರಿ. ಯಾವುದೇ ಒತ್ತಡಗಳಿಲ್ಲದೇ ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು ಓದಲು ಪ್ರಯತ್ನಿಸಿ. ಒತ್ತಡದ ಮನಸ್ಸಿಗಿಂತ ನಿರಾಳ ಮನಸ್ಸು ಹೆಚ್ಚು ಅಂಶಗಳನ್ನು ಮನನ ಮಾಡಿಕೊಳ್ಳುತ್ತದೆ. ಅಗತ್ಯವಿದ್ದಲ್ಲಿ ಧ್ಯಾನ, ಪ್ರಾಣಾಯಾಮಗಳನ್ನು ಕೈಗೊಳ್ಳಿ.

*ಸಂಗೀತ ಆಲಿಸುತ್ತಾ ಓದುವುದು ಬೇಡ. ಇದು ಓದಿನ ಗಮನವನ್ನು ವಿಕೇಂದ್ರೀಕರಿಸುತ್ತದೆ.

*ನಿಮ್ಮಷ್ಟಕ್ಕೆ ನೀವೇ ಓದಿನ ಗುರಿ ಹಾಕಿಕೊಳ್ಳಿ. ಅದರಂತೆ ಓದಲು ಪ್ರಯತ್ನಿಸಿ. ನಾನೇನು ಓದುತ್ತಿದ್ದೇನೆ, ನಾನೇಕೆ ಓದುತ್ತಿದ್ದೇನೆ ಎಂಬುದರ ಬಗ್ಗೆ ಗಮನವಿರಲಿ.

*ಶೀರ್ಷಿಕೆ ಹಾಗೂ ಉಪಶೀರ್ಷಿಕೆಗಳ ಮೇಲೆ ಹೆಚ್ಚು ನಿಗಾ ಇರಲಿ.

*ಪದಗಳ ಅಂತಃಶಕ್ತಿಯನ್ನು ಅರ್ಥೈಸಿಕೊಳ್ಳುತ್ತಾ ಓದಿ. ಉದಾಹರಣೆಗೆ ‘ಪರಿಣಾಮವಾಗಿ’, ‘ಆದ್ದರಿಂದ’, ‘ಒಟ್ಟಾರೆಯಾಗಿ’, ಇತ್ಯಾದಿಯಂತಹ ಪದಗಳು ಒಂದು ಉಪಸಂಹಾರವನ್ನು ನೀಡುತ್ತಿರುತ್ತವೆ. ‘ಮೇಲಾಗಿ’, ‘ಜೊತೆಗೆ’ ಎಂಬಂತಹ ಪದಗಳು ಹೊಸ ಪರಿಕಲ್ಪನೆಗಳ ಭಾಗವನ್ನು ವಿಸ್ತರಿಸುತ್ತವೆ. ಆದ್ದರಿಂದ ಓದುವಾಗ ಇಂತಹ ಪದಗಳ ಮೇಲೆ ಗಮನವಿರಿಸಿ ಅರ್ಥೈಸಿಕೊಂಡು ಓದಿ.

*ಗಟ್ಟಿಯಾಗಿ ಓದುವುದನ್ನು ತಪ್ಪಿಸಿ. ತುಟಿಗಳು ಓದಿನ ವೇಗವನ್ನು ಕಡಿಮೆ ಮಾಡುತ್ತವೆ.

*ಓದುವ ಪಠ್ಯದ ಮೇಲೆ ಬೆರಳಿಟ್ಟು ಓದಿ. ಇದು ಓದಿನ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಹೀಗೆ ಓದುವಾಗ ಪ್ರತೀ ಪದದ ಮೇಲೆ ಬೆರಳಿಟ್ಟು ಓದದೇ ಸಾಲಿನಿಂದ ಸಾಲಿಗೆ ಅಥವಾ ಪ್ಯಾರಾದಿಂದ ಪ್ಯಾರಾಕ್ಕೆ ಬೆರಳಿಟ್ಟು ಓದಿ. ಓದಿನ ವೇಗ ಮತ್ತು ಬೆರಳಿನ ವೇಗದ ಮಧ್ಯೆ ಪರಸ್ಪರ ಹೊಂದಾಣಿಕೆ ಇರಲಿ.

*ಸತತ ಅಭ್ಯಾಸವು ಮಾತ್ರ ನಿಮ್ಮನ್ನು ಪರಿಪೂರ್ಣರನ್ನಾಗಿಸುತ್ತದೆ. ಏಕರೂಪತೆಯಿಂದ ಓದಿನ ವೇಗ ಹೆಚ್ಚಿಸಿಕೊಳ್ಳಿ.

ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದ್ದೇ ಆದಲ್ಲಿ ಖಂಡಿತ ನೀವೊಬ್ಬ ‘ರೋಬೊ ರೀಡರ್’ ಆಗುತ್ತೀರಿ. ಆ ಮೂಲಕ ಯಶಸ್ಸು ನಿಮ್ಮದಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.