ಕಟ್ಟಡಗಳ ಅವಶೇಷಗಳನ್ನು ಸಂಸ್ಕರಿಸಲು ಬೆಂಗಳೂರಿನ ಈಶಾನ್ಯಕ್ಕಿರುವ ಬಿದರಹಳ್ಳಿ ಹೋಬಳಿಯ ಕಣ್ಣೂರು ಬಳಿಯ ಜಾಗವನ್ನು ಬಿಬಿಎಂಪಿ ಗುರುತಿಸಿದೆ. ಹತ್ತು ಎಕರೆ ವಿಶಾಲ ಜಾಗದಲ್ಲಿ ಹರಡಿರುವ ಹಳೆಯ ಕಲ್ಲಿನ ಗಣಿಯೊಂದನ್ನು (ಅಲ್ಲಿ ಗಣಿಗಾರಿಕೆ ಸದ್ಯ ನಡೆಯುತ್ತಿಲ್ಲ) ಆಯ್ಕೆ ಮಾಡಿದೆ.

ಇಂಥದೊಂದು ಸಂಸ್ಕರಣ ಘಟಕ ಸ್ಥಾಪಿಸುವ ಯೋಜನೆ ಹೊಸದೇನಲ್ಲ. ಬಿಬಿಎಂಪಿ ಹಲವು ವರ್ಷಗಳ ಹಿಂದೆಯೇ ಕಟ್ಟಡ ನಿರ್ಮಾಣ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವ ಯೋಜನೆ ರೂಪಿಸಿತ್ತು. ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಿತ್ತು. ಬಿದರಹಳ್ಳಿ ಜಾಗವನ್ನು ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದೆ.

ದಿನವೊಂದಕ್ಕೆ 750 ಮೆಟ್ರಿಕ್ ಟನ್ ಕಟ್ಟಡ ಘನ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯದ ಘಟಕ ಇಲ್ಲಿ ತಲೆ ಎತ್ತಲಿದೆ. ಆರಂಭದಲ್ಲಿ ದಿನಕ್ಕೆ 500 ಮೆಟ್ರಿಕ್ ಟನ್ ಹಾಗೂ ನಂತರದ ದಿನಗಳಲ್ಲಿ 750 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಿಸಲಿದೆ.

ಮುಂದಿನ 20 ವರ್ಷಗಳ ಕಾಲ ಈ ಘಟಕ ಬೆಂಗಳೂರಿನ ಕಟ್ಟಡ ಅವಶೇಷಗಳನ್ನು ನುರಿಸಲಿದೆ. ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಈ ಮೂಲಕ ನಗರದ ರಸ್ತೆ ಬದಿಯ ಖಾಲಿ ಜಾಗ, ಮೈದಾನ ಮತ್ತು ಕೆರೆಗಳ ದಡದಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯಗಳ ರಾಶಿಗಳಿಗೆ ಮುಕ್ತಿ ಕಾಣಿಸಲು ಬಿಬಿಎಂಪಿ ಕೊನೆಗೂ ಕ್ರಮ ಕೈಗೊಂಡಿದ್ದು ಒಳ್ಳೆಯ ಬೆಳವಣಿಗೆ.

ರಾತ್ರೋರಾತ್ರಿ ಎಲ್ಲಿಂದಲೋ ತಂದು ಸಾರ್ವಜನಿಕ ಸ್ಥಳಗಳಲ್ಲಿ ಸುರಿಯುತ್ತಿದ್ದ ಕಟ್ಟಡ ತ್ಯಾಜ್ಯಗಳ ರಾಶಿಯಿಂದ ನಗರದ ಹಲವು ಕೆರೆಗಳ ಒಡಲು ತುಂಬಿ ಹೋಗಿತ್ತು. ರಸ್ತೆ ಬದಿಯ ಜಾಗ ಮತ್ತು ಆಟದ ಮೈದಾನಗಳು ಒಡೆದ ಇಟ್ಟಿಗೆ ತುಂಡು, ತುಕ್ಕು ಹಿಡಿದ ಕಬ್ಬಿಣ ಮತ್ತು ಮಾಸಿದ ಕಟ್ಟಿಗೆ ಚೂರು, ಸಿಮೆಂಟ್ ಮತ್ತು ಮಣ್ಣಿನ ಧೂಳಿನಿಂದ ತುಂಬಿ ಹೋಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು.

ನಗರದ ಸೌಂದರ್ಯ ಮತ್ತು ಜನರ ಆರೋಗ್ಯಕ್ಕೆ ಮಾರಕವಾಗಿದ್ದ ಈ ಕಟ್ಟಡಗಳ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಅನೇಕ ವರ್ಷಗಳಿಂದ ಬಿಬಿಎಂಪಿಗೆ ಸವಾಲಾಗಿ ಪರಿಣಮಿಸಿತ್ತು. ದಂಡ ಹಾಕುವ ಬೆದರಿಕೆಗಳೂ ಕೂಡ ಫಲ ನೀಡಿರಲಿಲ್ಲ.

ಎರಡು ಎಕರೆಯಲ್ಲಿ ಸಂಸ್ಕರಣಾ ಘಟಕ

ಹತ್ತು ಎಕರೆ ವಿಶಾಲ ಪ್ರದೇಶದ ಪೈಕಿ ಎರಡು ಎಕರೆ ಪ್ರದೇಶದಲ್ಲಿ ಸಂಸ್ಕರಣಾ ಘಟಕ ತಲೆ ಎತ್ತಲಿದೆ. ಮೂರು ಎಕರೆಯಲ್ಲಿ ತ್ಯಾಜ್ಯ ಸಂಗ್ರಹಿಸಲಾಗುವುದು. ಇನ್ನುಳಿದ ಐದು ಎಕರೆ ಗಣಿಗಾರಿಕೆ ತಗ್ಗಿನಲ್ಲಿ ಸಂಸ್ಕರಿಸಿದ ತ್ಯಾಜ್ಯವನ್ನು ತುಂಬಲಾಗುವುದು ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ‘ಮೆಟ್ರೊ’ಗೆ ತಿಳಿಸಿದರು.

ತ್ಯಾಜ್ಯ ಸಾಗಿಸಲು ಗುತ್ತಿಗೆ

ನಗರದ ನಾನ ಕಡೆಗಳಲ್ಲಿರುವ ಘನ ತ್ಯಾಜವನ್ನು ಸಂಗ್ರಹಿಸಿ ಘಟಕಕ್ಕೆ ಸಾಗಿಸಲು ಖಾಸಗಿಯವರಿಗೆ ಗುತ್ತಿಗೆ ನೀಡಲಾಗುವುದು. ಈಗಾಗಲೇ ಕೆಲವು ಸಂಸ್ಥೆಗಳನ್ನು ಬಿಬಿಎಂಪಿ ಈ ಕೆಲಸಕ್ಕಾಗಿ ಗುರುತಿಸಿದೆ. ಕಟ್ಟಡ ಅವಶೇಷಗಳ ಮಾಲೀಕರು ಈ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಕರೆ ಮಾಡಿದರೆ ಸ್ಥಳಕ್ಕೆ ಬಂದು ಕಸವನ್ನು ಸಂಗ್ರಹಿಸಿ ಸಂಸ್ಕರಣಾ ಘಟಕಕ್ಕೆ ಸಾಗಿಸುತ್ತಾರೆ. ಇದಕ್ಕೆ ಶುಲ್ಕ ನಿಗದಿಗೊಳಿಸಲಾಗಿದೆ.

ಎಲ್ಲಿ ಈ ಸಮಸ್ಯೆ?

ನಗರದ ಕಟ್ಟಡ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವ ನಿರ್ದಿಷ್ಟ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ನಗರದಲ್ಲಿ ದಿನವೊಂದಕ್ಕೆ 2,500–3,000 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.

ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ವಾಣಿಜ್ಯ ಮಳಿಗೆ, ಮಾಲ್ ಮತ್ತು ವಸತಿ ಸಮುಚ್ಚಯ ನಿರ್ಮಿಸುವ ಸ್ಥಳದಲ್ಲಿ ಅವಶೇಷಗಳನ್ನು ಸಾರ್ವಜನಿಕ ಸ್ಥಳದಲ್ಲಿ ತಂದು ಸುರಿಯಲಾಗುತ್ತದೆ. ಮೇಕ್ರಿ ವೃತ್ತವನ್ನು ಸಂಪರ್ಕಿಸುವ ದೂರದರ್ಶನ ಎದುರಿನ ರಸ್ತೆ ಬದಿ ಅನೇಕ ತಿಂಗಳಿನಿಂದ ಕಸದ ರಾಶಿ ಬಿದ್ದಿದೆ.

ಕೆ.ಆರ್. ಪುರ, ಮಹಾದೇವಪುರ, ಬೊಮ್ಮನಹಳ್ಳಿ, ಧಣಿಸಂದ್ರ, ನಾಗವಾರ, ದೊಮ್ಮಲೂರು, ಬಿಇಎಲ್ ಬಡಾವಣೆ, ಇಂದಿರಾನಗರ ಸುತ್ತಮುತ್ತ ಕೆರೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ರಾಶಿ, ರಾಶಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯಲಾಗಿದೆ.

ತ್ಯಾಜ್ಯ ಸಾಗಿಸಲು ಶುಲ್ಕ

ನಗರದ ವಿಭಿನ್ನ ಪ್ರದೇಶಗಳ ತ್ಯಾಜ್ಯ ಸಂಗ್ರಹಿಸಲು ಬೇರೆ, ಬೇರೆ ಸರಕು ಸಾಗಣೆ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುವುದು. ಕಟ್ಟಡ ತ್ಯಾಜ್ಯಗಳ ಸಾಗಾಣಿಕೆಗೆ ಅದರ ಮಾಲೀಕರಿಗೆ ಶುಲ್ಕ ವಿಧಿಸಲಾಗುವುದು. ಸಂಸ್ಕರಣಾ ಘಟಕಕ್ಕೆ ಸಾಗಿಸಬೇಕಾಗದ ದೂರ, ತ್ಯಾಜ್ಯದ ವರ್ಗೀಕರಣದ ಮೇಲೆ ಶುಲ್ಕ ನಿಗದಿ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಭಾರಿ ದಂಡ

ಸಾರ್ವಜನಿಕ ಸ್ಥಳ, ಕೆರೆ, ರಸ್ತೆ, ಖಾಲಿ ಜಾಗಗಳಲ್ಲಿ ಕಟ್ಟಡ ಅವಶೇಷಗಳನ್ನು ತಂದು ಸುರಿಯುವುದನ್ನು ತಡೆಯಲು ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುವುದು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಭಾರಿ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.