ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇತ್ರ ಮಹಾತ್ಮೆ– ಬಳ್ಳಾರಿ ಲೋಕಸಭಾ ಕ್ಷೇತ್ರ

Published 31 ಮಾರ್ಚ್ 2024, 23:51 IST
Last Updated 31 ಮಾರ್ಚ್ 2024, 23:51 IST
ಅಕ್ಷರ ಗಾತ್ರ

ಗಣಿ ಲೂಟಿಯಿಂದ ಭಾಗಶಃ ಬೆಂಗಾಡಾದ ಬಳ್ಳಾರಿ ಜಿಲ್ಲೆಯ ರಾಜಕಾರಣವೇ ವಿಚಿತ್ರ. ಒಂದು ಕಾಲದಲ್ಲಿ ಎಂ.ವೈ .ಘೋರ್ಪಡೆ, ಎಂ.ಪಿ. ಪ್ರಕಾಶ್, ಲಾಡ್ ಕುಟುಂಬಗಳ ಹಿಡಿತದಲ್ಲಿದ್ದ ಬಳ್ಳಾರಿ, ಗಣಿಗಾರಿಕೆ ಬೆಳೆಯುತ್ತಿದ್ದಂತೆ ‘ಗಾಲಿ ರೆಡ್ಡಿ’ಗಳ ಪಾಲಾಯಿತು. ಗಣಿಯ ಜತೆಗೆ ರಾಜಕೀಯವಾಗಿಯೂ ಬೆಳೆದ ರೆಡ್ಡಿ ಕುಟುಂಬದವರು ಎಲ್ಲ ಪಕ್ಷಗಳಿಗೂ ಪರ್ಯಾಯವಾದ ರಾಜಕಾರಣವನ್ನು ಬೆಳೆಸಿದರು. ಯಾರು ಸಂಸದರಾಗಬೇಕು, ಯಾರು ಶಾಸಕರಾಗಬೇಕು ಎಂಬುದನ್ನೂ ನಿರ್ಣಯಿಸುವ ಮಟ್ಟಕ್ಕೆ ಬೆಳೆದರು. ಹಿಂದೆ ರಾಜಕಾರಣ ಮಾಡುತ್ತಿದ್ದ ಸೂರ್ಯನಾರಾಯಣ ರೆಡ್ಡಿ, ದಿವಾಕರ ಬಾಬು ಕುಟುಂಬವೂ ಮರೆಗೆ ಸರಿದಿತ್ತು. ಜನಾರ್ದನ ರೆಡ್ಡಿ ಜೈಲಿಗೆ ಹೋದ ಬಳಿಕ ಪ್ರಭಾವ ಕಡಿಮೆಯಾಯಿತು. ಇಂತಿಪ್ಪ ಗಣಿ ನಾಡಿನಲ್ಲಿ, 2023ರಲ್ಲಿ ಮತ್ತೆ ತಮ್ಮ ಶಕ್ತಿ ತೋರಿಸಲು ರೆಡ್ಡಿ ಶುರುಮಾಡಿದರು. ಆದರೆ, ನೆಲೆ ಸಿಗಲಿಲ್ಲ. ಕೆಆರ್‌ಪಿಪಿ ಕಟ್ಟಿದ ರೆಡ್ಡಿ, ಶಾಸಕರಾಗಿ ಗೆದ್ದು, ಪಕ್ಷವನ್ನು ಬಿಜೆಪಿಯೊಳಗೆ ವಿಲೀನಗೊಳಿಸಿದ್ದಾರೆ. ರೆಡ್ಡಿ ಶಿಷ್ಯರಾದ ಶ್ರೀರಾಮುಲು ಮತ್ತು ಸಚಿವ ಸಂತೋಷ್ ಲಾಡ್ ಆಪ್ತರಾದ ತುಕಾರಾಂ ಈಗ ಮುಖಾಮಖಿಯಾಗಿದ್ದಾರೆ. ಸಚಿವ ನಾಗೇಂದ್ರ ಕೂಡ ಒಂದು ಕಾಲದಲ್ಲಿ ರೆಡ್ಡಿ ಆಪ್ತ. ನಾರಾ ಭರತ್ ರೆಡ್ಡಿ ಈಗ ಕಾಂಗ್ರೆಸ್ ಶಾಸಕ.  ರೆಡ್ಡಿ ಮೇಲುಗೈಯೋ ಸಚಿವ ಲಾಡ್‌ಗೆ ಲಾಡು ಸಿಗಲಿದೆಯೋ ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT