ರಾಂಚಿ: ರಾಂಚಿಯಲ್ಲಿ ಇಂಡಿಯಾ ಒಕ್ಕೂಟ ಆಯೋಜಿಸಿದ್ದ ಚುನಾವಣಾ ರ್ಯಾಲಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಎರಡು ಖಾಲಿ ಕುರ್ಚಿಗಳನ್ನು ಇರಿಸಲಾಗಿತ್ತು. ಬಂಧಿತರಾದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ಗಾಗಿ ಎರಡು ಕುರ್ಚಿಗಳನ್ನು ವೇದಿಕೆಯಲ್ಲಿ ಇರಿಸಲಾಗಿತ್ತು.

ಸೊರೇನ್ ಮತ್ತು ಕೇಜ್ರಿವಾಲ್ ಅವರಿಗಾಗಿ ಖಾಲಿ ಕುರ್ಚಿಗಳನ್ನು ಇರಿಸಿದ್ದರೂ ಇಬ್ಬರ ಪತ್ನಿಯರಾದ ಕಲ್ಪನಾ ಸೊರೇನ್ ಮತ್ತು ಸುನಿತಾ ಕೇಜ್ರಿವಾಲ್ ವೇದಿಕೆಯ ಮೇಲೆಯೇ ಕುಳಿತಿದ್ದರು. ಕೇಜ್ರಿವಾಲ್ ಬಂಧನದ ಬಳಿಕ ಪತ್ನಿ ಸುನಿತಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತ, ಸೊರೇನ್ ಅವರ ಪತ್ನಿ ಕಲ್ಪನಾ ಕೂಡ ಜಾರ್ಖಂಡ್ನಲ್ಲಿ ತಮ್ಮ ಪತಿಯ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ.

ಜಾರ್ಖಂಡ್ನಲ್ಲಿ ಮುಕ್ತಿ ಮೊರ್ಚಾ ಸಂಘಟನೆ ‘ಉಲ್ಗುಲನ್ ನ್ಯಾಯ್ ಮಹಾರ್ಯಾಲಿ’ಯನ್ನು ಆಯೋಜಿಸಿತ್ತು. ಈ ವೇಳೆ ಕಾರ್ಯಕರ್ತರು ಸೊರೇನ್ ಅವರ ಭಾವಚಿತ್ರವಿರುವ ಮಾಸ್ಕ್ ಧರಿಸಿ, ಬೆಂಬಲ ಸೂಚಿಸಿದ್ದಾರೆ.

ರ್ಯಾಲಿ ವೇಳೆ ನೆರೆದಿದ್ದ ಕಾರ್ಯಕರ್ತರು ‘ಜೈಲಿನ ಬಾಗಿಲು ಮುರಿಯಲಿದೆ, ಸೊರೇನ್ ಅವರು ಬಿಡುಗಡೆಯಾಗುತ್ತಾರೆ’ ಹಾಗೂ ‘ಜಾರ್ಖಂಡ್ ಎಂದಿಗೂ ತಲೆಬಾಗುವುದಿಲ್ಲ’ ಎನ್ನುವ ಘೋಷಣೆಗಳನ್ನು ಕೂಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.