ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ರಚನೆಗೆ ಇತರ ‍ಪಕ್ಷಗಳ ಬೆಂಬಲ; ಸಭೆಯ ಬಳಿಕ ನಿರ್ಧಾರ: ರಾಹುಲ್‌ ಗಾಂಧಿ

Published 4 ಜೂನ್ 2024, 13:27 IST
Last Updated 4 ಜೂನ್ 2024, 13:27 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚನೆಗೆ ಪ್ರಯತ್ನಿಸಲು ಜೆಡಿಯು ಮತ್ತು ಟಿಡಿಪಿ ಪಕ್ಷಗಳನ್ನು ಸಂಪರ್ಕಿಸಬೇಕೆ? ಎನ್ನುವ ಬಗ್ಗೆ ಇಂಡಿಯಾ ಒಕ್ಕೂಟ ನಾಳೆ (ಜೂ.3) ಸಭೆ ಸೇರಿ ನಿರ್ಧರಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ‘ನಾಳೆ ನಮ್ಮ ಪಕ್ಷದ ಪಾಲುದಾರರೊಂದಿಗೆ ಸಭೆ ನಡೆಸಲಿದ್ದೇವೆ. ಸಭೆಯಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಈ  ಪಡೆದುಕೊಳ್ಳುತ್ತೇವೆ. ನಂತರ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

‘ನಮ್ಮ ಮಿತ್ರಪಕ್ಷಗಳ ಅಭಿಪ್ರಾಯ ಕೇಳದೆ ನಾವು ಏನನ್ನೂ ಹೇಳುವುದಿಲ್ಲ. ನಮ್ಮ ಮೈತ್ರಿ ಒಕ್ಕೂಟ ಆ ಬಗ್ಗೆ ನಾಳೆ ನಿರ್ಧರಿಸಲಿದೆ. ಅವರು ಏನು ನಿರ್ಧರಿಸಿದರೂ ನಾವು ಅದರಂತೆ ಕಾರ್ಯನಿರ್ವಹಿಸುತ್ತೇವೆ. ಸಾರ್ವತ್ರಿಕ ಚುನಾವಣೆಗಳು ಸಂವಿಧಾನ ಉಳಿಸುವ ಹೋರಾಟ. ಭಾರತದ ಬಡವರು ಮತ್ತು ಹಿಂದುಳಿದವರು ಸಂವಿಧಾನವನ್ನು ಉಳಿಸಲು ನಿಂತಿದ್ದಾರೆ’ ಎಂದರು.

ಲೋಕಸಭೆ ಚುನಾವಣೆಯ ಫಲಿತಾಂಶಗಳು ಮತ್ತು ಟ್ರೆಂಡ್‌ಗಳ ಪ್ರಕಾರ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಆದರೆ ಮ್ಯಾಜಿಕ್ ನಂಬರ್‌ 272 ಕ್ಕಿಂತ ಕಡಿಮೆಯಾಗಲಿದೆ ಎಂದು ಅವರು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT