ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls: ಗೋವಾ ಸೇರಿ ವಿವಿಧ ರಾಜ್ಯಗಳ 6 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

Published 6 ಏಪ್ರಿಲ್ 2024, 9:02 IST
Last Updated 6 ಏಪ್ರಿಲ್ 2024, 9:02 IST
ಅಕ್ಷರ ಗಾತ್ರ

ನವದೆಹಲಿ: ಗೋವಾ, ಮಧ್ಯಪ್ರದೇಶ ಸೇರಿದಂತೆ ದಾದ್ರಾ ಮತ್ತು ನಗರ್‌ ಹವೇಲಿ ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿರುವ ಆರು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಇಂದು (ಶನಿವಾರ) ಪ್ರಕಟಿಸಿದೆ.

ರಮಾಕಾಂತ್ ಖಲಾಪ್ ಅವರು ಉತ್ತರ ಗೋವಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಕ್ಯಾಪ್ಟನ್ ವಿರಿಯಾಟೊ ಫೆರ್ನಾಂಡಿಸ್ ದಕ್ಷಿಣ ಗೋವಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಮಧ್ಯಪ್ರದೇಶದ ಮೊರೆನಾ ಕ್ಷೇತ್ರದಿಂದ ಸತ್ಯಪಾಲ್ ಸಿಂಗ್ ಸಿಕರ್ವಾರ್ ಮತ್ತು ಗ್ವಾಲಿಯರ್‌ನಿಂದ ಪ್ರವೀಣ್ ಪಾಠಕ್ ಕಣಕ್ಕಿಳಿಯಲಿದ್ದಾರೆ. ನರೇಂದ್ರ ಪಟೇಲ್ ಖಾಂಡ್ವಾದಿಂದ ಸ್ಪರ್ಧಿಸಲಿದ್ದಾರೆ.

ದಾದ್ರಾ ಮತ್ತು ನಗರ್‌ ಹವೇಲಿ ಲೋಕಸಭಾ ಕ್ಷೇತ್ರದಿಂದ ಅಜಿತ್ ರಾಮ್‌ಜಿಭಾಯಿಗೆ ಟಿಕೆಟ್ ನೀಡಲಾಗಿದೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಏಪ್ರಿಲ್‌ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಜೂನ್‌ 4ರಂದು ಮತ ಎಣಿಕೆ ಆಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಏಳು ಹಂತಗಳಲ್ಲಿ ಮತದಾನ ಜರುಗಲಿದೆ. ಈ ಚುನಾವಣೆಯಲ್ಲಿ 97 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT