ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ– ರಾಹುಲ್‌ ಗಾಂಧಿ ಭರವಸೆ

Published 29 ಮಾರ್ಚ್ 2024, 12:35 IST
Last Updated 29 ಮಾರ್ಚ್ 2024, 12:35 IST
ಅಕ್ಷರ ಗಾತ್ರ

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌ ಬಹಳಷ್ಟು ಭರವಸೆಗಳನ್ನು ನೀಡುತ್ತುದೆ.

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೊಸ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ ನೀಡುವುದಾಗಿ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ. 

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಯಾವಾಗ ಸರ್ಕಾರ ಬದಲಾಗುವುದೋ ಆಗ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಅಂತಹ ಕೆಲಸ ಮಾಡಲು ಮತ್ತೆಂದೂ ಯಾರೂ ಧೈರ್ಯ ತೋರದಂತೆ ನೋಡಿಕೊಳ್ಳಲಾಗುವುದು, ಇದು ನನ್ನ ಗ್ಯಾರಂಟಿ’ ಎಂದು ಹೇಳಿದ್ದಾರೆ.

‘ಮೂರು ಮಹಿಳೆಯರಲ್ಲಿ ಒಬ್ಬರಷ್ಟೇ ಮಾತ್ರ ಏಕೆ ಉದ್ಯೋಗದಲ್ಲಿದ್ದಾಳೆ? 10ರಲ್ಲಿ ಒಬ್ಬ ಮಹಿಳೆಗಷ್ಟೇ ಏಕೆ ಸರ್ಕಾರಿ ಉದ್ಯೋಗವಿದೆ?, ದೇಶದಲ್ಲಿ ಮಹಿಳಯರ ಜನಸಂಖ್ಯೆ ಶೇ 50ರಷ್ಟು ಇಲ್ಲವೇ?, ಶೇ 50 ರಷ್ಟು ಮಹಿಳೆಯರು ಉನ್ನತ ಶಿಕ್ಷಣ ಪಡೆದಿಲ್ಲವೇ? ಹೌದು ಎಂದಾದರೆ, ಮಹಿಳೆಯರ ಭಾಗವಹಿಸುವಿಕೆ ಇನ್ನೂ ಏಕೆ ಕಡಿಮೆಯಿದೆ’ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. 

‘ಮಹಿಳೆಯರ ಸಂಖ್ಯೆ ಅರ್ಧದಷ್ಟಿದ್ದರೂ ಅವರಿಗೆ ಪೂರ್ತಿ ಹಕ್ಕು ಇರಬೇಕು ಎಂದು ಕಾಂಗ್ರೆಸ್‌ ಬಯಸುತ್ತದೆ. ಸರ್ಕಾರ ಇರುವ ದೇಶದಲ್ಲಿ ಮಹಿಳೆಯರ ಶ್ರಮವನ್ನು ಸರಿಸಮನಾಗಿ ಬಳಸಿದಲ್ಲಿ ಆ ದೇಶದ ಬೆಳವಣಿಗೆ ಉತ್ತಮವಾಗಲಿದೆ. ಹೀಗಾಗಿ, ಎಲ್ಲಾ ಹೊಸ ಸರ್ಕಾರಿ ಉದ್ಯೋಗದಲ್ಲಿ ಅರ್ಧದಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ’ ಎಂದಿದ್ದಾರೆ.

‘ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿಯನ್ನು ತಕ್ಷಣದ ಅನುಷ್ಠಾನಕ್ಕೆ ನಾವು ಬೆಂಬಲಿಸುತ್ತೇವೆ. ಸುರಕ್ಷಿತ ಆದಾಯ, ಸುರಕ್ಷಿತ ಭವಿಷ್ಯ, ಸ್ಥಿರತೆ ಮತ್ತು ಸ್ವಾಭಿಮಾನ ಹೊಂದಿರುವ ಮಹಿಳೆಯರು ನಿಜವಾಗಿಯೂ ಸಮಾಜದ ಶಕ್ತಿಯಾಗುತ್ತಾರೆ. 50 ಪ್ರತಿಶತದಷ್ಟು ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರು ಇರುವುದು ದೇಶದ ಪ್ರತಿಯೊಬ್ಬ ಮಹಿಳೆಗೆ ಶಕ್ತಿ ನೀಡುತ್ತದೆ ಮತ್ತು ಶಕ್ತಿಯುತ ಮಹಿಳೆಯರು ಭಾರತದ ಭವಿಷ್ಯವನ್ನು ಬದಲಾಯಿಸುತ್ತಾರೆ’ ಎಂದು ರಾಹುಲ್‌ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT