ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ ಲೋಕಸಭಾ ಚುನಾವಣೆ | ‘ಲೋಕ’ ಗೆಲ್ಲಲು ಶಾಸಕರಿಗೆ ‘ಲೀಡ್’ ಸವಾಲು

ಕಳೆದ ಬಾರಿ 6 ವಿಧಾನಸಭಾ ಕ್ಷೇತ್ರಗಳಲ್ಲಿ ‘ಮುನ್ನಡೆ’ ಗಳಿಸಿದ್ದ ಜಾಧವ
Published : 6 ಏಪ್ರಿಲ್ 2024, 6:38 IST
Last Updated : 6 ಏಪ್ರಿಲ್ 2024, 6:38 IST
ಫಾಲೋ ಮಾಡಿ
Comments
ರಾಧಾಕೃಷ್ಣ ದೊಡ್ಡಮನಿ
ರಾಧಾಕೃಷ್ಣ ದೊಡ್ಡಮನಿ
ಡಾ.ಉಮೇಶ ಜಾಧವ
ಡಾ.ಉಮೇಶ ಜಾಧವ
ರಣತಂತ್ರಗಳು ಹೂಡಿ ‘ಮುನ್ನಡೆ’
2019ರ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರವು ಜಿದ್ದಾಜಿದ್ದಿನ ಕಣವಾಗಿತ್ತು. ಚುನಾವಣೆಯ ಪೂರ್ವ ಆರು ತಿಂಗಳು ಮೊದಲೇ ತಾಲೀಮು ನಡೆಸಿದ್ದ ‘ಕಮಲ’ ನಾಯಕರು ‘ಜಾತಿ ಸಮೀಕರಣ’ ‘ಪುತ್ರ ವ್ಯಾಮೋಹ’ದ ಪ್ರಚಾರ ‘ಖರ್ಗೆ ವಿರೋಧಿ’ ನಾಯಕರನ್ನು ಸೆಳೆದು ರಣತಂತ್ರಗಳನ್ನು ಹೂಡಿದ್ದರು. ‘ಈ ಬಾರಿ ಖರ್ಗೆ ಸೋಲುತ್ತಾರೆ’ ಎಂಬುದನ್ನು ಬಲವಾಗಿ ನಂಬಿಸಿ ಜಾತಿ ಲೆಕ್ಕಾಚಾರ ಹಾಕಿ ಅಂದಿನ ಚಿಂಚೋಳಿಯ ಶಾಸಕರಾಗಿದ್ದ ಒಂದು ಕಾಲದಲ್ಲಿ ಖರ್ಗೆ ಅವರ ಶಿಷ್ಯರಾಗಿದ್ದ ಡಾ.ಉಮೇಶ ಜಾಧವ ಅವರನ್ನೇ ಕರೆತಂದು ಚುನಾವಣೆಯ ಅಖಾಡಕ್ಕೆ ಇಳಿಸಿದರು. ಚುನಾವಣೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಜಾಧವ ಹಾಗೂ ಎರಡರಲ್ಲಿ ಖರ್ಗೆ ಅವರು ‘ಮುನ್ನಡೆ’ ಗಳಿಸಿದ್ದರು. ಖರ್ಗೆ ಅವರಿಗೆ ತಮ್ಮದೇ ಪಕ್ಷದ ಶಾಸಕರಾಗಿದ್ದ ಅಫಜಲಪುರ ಜೇವರ್ಗಿ ಚಿತ್ತಾಪುರ ಹಾಗೂ ಗುರುಮಠಕಲ್‌ನಲ್ಲಿ (ಮೈತ್ರಿ ಶಾಸಕ) ಮತಗಳ ‘ಮುನ್ನಡೆ’ ಪಡೆಯಲು ಆಗಲಿಲ್ಲ. ಬಿಜೆಪಿ ಹಿಡಿತದಲ್ಲಿದ್ದ ಸೇಡಂನಲ್ಲಿ 5077 ಹಾಗೂ ‘ಕೈ’ ಭದ್ರಕೋಟೆಯಾದ ಕಲಬುರಗಿ ಉತ್ತರದಿಂದ 26392 ಮತಗಳ ‘ಲೀಡ್’ ಪಡೆದಿದ್ದರು. ಜಾಧವ ಅವರು 6 ಕ್ಷೇತ್ರಗಳಲ್ಲಿ ‘ಮುನ್ನಡೆ’ ಗಳಿಸಿ 95452 ಮತಗಳ ಅಂತರದಿಂದ ಸೋಲರಿಯದ ನಾಯಕನಿಗೆ ಮೊದಲ ಬಾರಿ ಸೋಲಿನ ಕಹಿ ಉಣಿಸುವಲ್ಲಿ ಯಶಸ್ವಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT