ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Oscars2024:ಅತ್ಯುತ್ತಮ ಚಿತ್ರ ಯಾವುದು? ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಮಾಹಿತಿ

Published 11 ಮಾರ್ಚ್ 2024, 2:47 IST
Last Updated 11 ಮಾರ್ಚ್ 2024, 2:47 IST
ಅಕ್ಷರ ಗಾತ್ರ

ಲಾಸ್‌ ಏಂಜಲಿಸ್‌: ‘ಓಪನ್‌ ಹೈಮರ್’ ಸಿನಿಮಾವು 96ನೇ ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್‌ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಸಿನಿಮಾ ತಾರೆಯರು, ತಂತ್ರಜ್ಞರು ಸೇರಿದಂತೆ ಸಿನಿಮಾ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.

ಆಸ್ಕರ್‌ ಪ್ರಶಸ್ತಿ ಗಳಿಸಿದ ಚಿತ್ರ ಹಾಗೂ ಕಲಾವಿದರ ವಿವರ ಇಲ್ಲಿದೆ...

ಅತ್ಯುತ್ತಮ ಚಿತ್ರ: ಓಪನ್‌ ಹೈಮರ್

ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್

ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್

ಅತ್ಯುತ್ತಮ ನಟ: ಸಿಲಿಯನ್ ಮರ್ಫಿ

ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ‘ದಿ ಝೋನ್ ಆಫ್ ಇಂಟರೆಸ್ಟ್’

ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯರ್ (ಓಪೆನ್‌ ಹೈಮರ್)

ಅತ್ಯುತ್ತಮ ಪೋಷಕ ನಟಿ: ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡವರ್ಸ್)

ಅತ್ಯುತ್ತಮ ಹಾಡು: ಬಾರ್ಬಿ (ವಾಟ್ ವಾಸ್ ಐ ಮೇಡ್ ಫಾರ್)

ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ‘ಗಾಡ್ಜಿಲ್ಲಾ ಮೈನಸ್ ಒನ್’

ಅತ್ಯುತ್ತಮ ಧ್ವನಿ ವಿನ್ಯಾಸ: ‘ದಿ ಝೋನ್ ಆಫ್ ಇಂಟರೆಸ್ಟ್’

ಅತ್ಯುತ್ತಮ ಸಂಕಲನ: ‘ಓಪನ್‌ ಹೈಮರ್’

ಅತ್ಯುತ್ತಮ ಛಾಯಾಗ್ರಹಣ: ‘ಓಪನ್‌ ಹೈಮರ್’

ಅತ್ಯುತ್ತಮ ಮೂಲ ಚಿತ್ರಕಥೆ: ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ ಅವರ ‘ಅನ್ಯಾಟಮಿ ಆಫ್ ಎ ಫಾಲ್’

ಅತ್ಯುತ್ತಮ ಸಾಕ್ಷ್ಯಚಿತ್ರ: ಜಾನ್ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್’

ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ ಅಂಡ್ ದಿ ಹೆರಾನ್’

ಅತ್ಯುತ್ತಮ ಮೇಕಪ್‌ ಮತ್ತು ಕೇಶ ವಿನ್ಯಾಸ: ‘ಪೂರ್‌ ಥಿಂಗ್ಸ್‌’ (Poor Things)

ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ‘ದಿ ಲಾಸ್ಟ್ ರಿಪೇರಿ ಶಾಪ್’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT