ಕೆಲಸಕ್ಕೆ ಮರಳಿದ ಸಮಂತಾ ರುತ್ ಪ್ರಭು: ಸಿನಿಮಾ ಪ್ರಚಾರದಲ್ಲಿ ಬ್ಯುಸಿ
ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಈ ವರ್ಷ ಸಿನಿಮಾ ಬದಲು ವೈಯಕ್ತಿಕ ಜೀವನ ಕುರಿತೇ ಹೆಚ್ಚು ಸುದ್ದಿಯಲ್ಲಿದ್ದರು. ಇತ್ತೀಚೆಗೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆಯೂ ಹೇಳಿಕೊಂಡಿದ್ದರು.
ಈ ಬಾರಿ ಸಮಂತಾ ಅವರು, ಚಿಕಿತ್ಸೆ ಮುಂದುವರಿದಿದ್ದರೂ, ಯಶೋಧಾ ಚಿತ್ರದ ಪ್ರಚಾರಕ್ಕೆ ಸಮಯ ನೀಡಿದ್ದಾರೆ.
ಕೆಲಸಕ್ಕೆ ಮರಳಿದ್ದೇನೆ ಎಂದು ಸೂಚಿಸುವ ಫೋಟೊ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಸಮಂತಾ ಅವರು ಚಿತ್ರರಂಗದಿಂದ ದೂರ ಉಳಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಾಗಲೆಲ್ಲ ಅವರು ಸಾಮಾಜಿಕ ತಾಣಗಳ ಮೂಲಕ ಉತ್ತರ ನೀಡಿದ್ದಾರೆ.
ಇಸ್ಲಾಂ ಧರ್ಮ ಪಾಲನೆಗಾಗಿ ಮಾಡೆಲಿಂಗ್ ಕ್ಷೇತ್ರ ತೊರೆದ ಭೋಜ್ಪುರಿ ನಟಿ
ಅದರಂತೆಯೇ, ಚಿತ್ರದ ಪ್ರಚಾರಕ್ಕೆ ರೆಡಿ ಎನ್ನುವ ಮೂಲಕ ಅಭಿಮಾನಿಗಳ ಇಚ್ಚೆಯಂತೆ ಮತ್ತೆ ಸಿನಿಮಾರಂಗಕ್ಕೆ ಮರಳಿದ್ದಾರೆ.
ನಟನೆ ಅಲ್ಲದಿದ್ದರೆ ಸಾಫ್ಟ್ವೇರ್ ಇಂಜಿನಿಯರ್ ಆಗುತ್ತಿದ್ದೆ: ತಾಪ್ಸಿ ಪನ್ನು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.