‘ತೀರ್ಥರೂಪ ತಂದೆಯವರಿಗೆ’ ಸಿನಿಮಾವು ನಿನ್ನೆ(ಗುರುವಾರ) ತೆರೆಕಂಡಿದೆ. ಇದೀಗ ಚಿತ್ರತಂಡ ಪ್ರೇಕ್ಷಕರ ಅಭಿಪ್ರಾಯ ತಿಳಿಯಲು ಸಜ್ಜಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಹಂಚಿಕೊಂಡಿದೆ.

ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ತೀರ್ಥರೂಪ ತಂದೆಯವರಿಗೆ’ ಚಿತ್ರವನ್ನು ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ.
.ಧರ್ಮೆಂದ್ರ ಕೇವಲ ವ್ಯಕ್ತಿಯಲ್ಲ, ಭಾವನೆ: ಗೆಳೆಯನನ್ನು ನೆನೆದ ಅಮಿತಾಭ್.
ಯಾವುದೋ ಕಾರಣದಿಂದ ತಂದೆಯಿಂದ ದೂರವಾದ ಮಗನೊಬ್ಬ ಮತ್ತೆ ತಂದೆಯನ್ನು ಹುಡುಕಿಕೊಂಡು ಹೋಗುವುದೇ ಚಿತ್ರದ ಕಥೆ. ಈ ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಸಿತಾರ, ವಿಶ್ವನಾಥನಾಗಿ ರಾಜೇಶ್ ನಟರಂಗ, ಪೃಥ್ವಿಯಾಗಿ ನಿಹಾರ್ ಮುಖೇಶ್, ಅಕ್ಷರಳಾಗಿ ರಚನಾ ಇಂದರ್ ನಟಿಸಿದ್ದಾರೆ.

ದಶಕಗಳ ಕಾಲ ಹೀರೊಯಿನ್ ಆಗಿ ಮಿಂಚಿದ್ದ ಸಿತಾರ ಅವರು ಇತ್ತಿಚೀನ ದಿನಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.
.ನನ್ನ ನಟನೆ ನೋಡಿ ಬೆನ್ನುತಟ್ಟಿದ್ದರು: ಚಿಕ್ಕಣ್ಣ ನೆನಪಿನ ಬುತ್ತಿಯಲ್ಲಿ ಪುನೀತ್.
'ಹಾಲುಂಡ ತವರು' ಚಿತ್ರದ ಮೂಲಕ ಕನ್ನಡದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಇವರು, ಬಳಿಕ ಚಿರಂಜೀವಿ ಸರ್ಜಾ ಅವರ 'ಅಮ್ಮ ಐ ಲವ್ ಯು' ಹಾಗೂ ಪುನೀತ್ ರಾಜಕುಮಾರ್ ನಟನೆ ‘ಚಕ್ರವ್ಯೂಹ’ ಚಿತ್ರದಲ್ಲಿ ನಟಿಸಿದ್ದರು.

ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿರುವ ನಟಿ ಸಿತಾರಾ ಅವರು ಈ ಚಿತ್ರದಲ್ಲಿ ನಟಿಸಿರುವುದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.