ಮುಂಬೈ: ಅನ್ಶುಲ್ ಶರ್ಮಾ ನಿರ್ದೇಶನದ ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದೇ ದೇ ಪ್ಯಾರ್ ದೇ–2' ನವೆಂಬರ್ 14ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ನಟ ಅಜಯ್ ದೇವಗನ್ ಪೋಸ್ಟರ್ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
.ತೆಲಂಗಾಣದಲ್ಲಿ ವಿಶ್ವದರ್ಜೆಯ Film Studio: ಸಿಎಂ ರೇವಂತ್ ಭೇಟಿಯಾದ ಅಜಯ್ ದೇವಗನ್.ದರ್ಶನ್ ನಟನೆಯ ಡೆವಿಲ್ ಸಿನಿಮಾದ ‘ಒಂದೆ ಒಂದು ಸಲ’ ಹಾಡು ಬಿಡುಗಡೆ .
ಮೇ 2019ರಲ್ಲಿ ಬಿಡುಗಡೆಯಾದ 'ದೇ ದೇ ಪ್ಯಾರ್ ದೇ' ಮುಂದುವರಿದ ಭಾಗ ಇದಾಗಿದೆ.

ಈ ಚಿತ್ರದಲ್ಲಿ ಸುಮಾರು 50 ವರ್ಷದ ಶ್ರೀಮಂತ ವ್ಯಕ್ತಿ ಪಾತ್ರದಲ್ಲಿ ಅಜಯ್ ದೇವಗನ್ ಕಾಣಿಸಿಕೊಳ್ಳಲಿದ್ದಾರೆ. ಆತ ಯುವತಿಯೊಬ್ಬಳನ್ನು ಪ್ರೀತಿಸುತ್ತಾನೆ. ಇದಕ್ಕೆ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ಎದುರಾಗುವ ಸವಾಲುಗಳೇನು ಎಂಬುವುದು ಈ ಚಿತ್ರದಲ್ಲಿದೆ.

ಈ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ದೇವಗನ್ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಆರ್ ಮಾಧವನ್, ಜಾವೇದ್ ಜಾಫೇರಿ ಮತ್ತು ಮೀಜಾನ್ ಜಾಫ್ರಿ, ಗೌತಮಿ ಕಪೂರ್ ಮತ್ತು ಇಶಿತಾ ದತ್ತಾ ಸಹ ನಟಿಸಿದ್ದಾರೆ.

ಈ ಚಿತ್ರವನ್ನು ಟಿ-ಸೀರೀಸ್ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಮತ್ತು ಲವ್ ಫಿಲ್ಮ್ಸ್ನ ಲವ್ ರಂಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿದ್ದಾರೆ.
.BBK12: ಕಾಕ್ರೋಚ್ ಬಳಿಕ ಬಿಗ್ಬಾಸ್ ಫಿನಾಲೆಗೆ ಆಯ್ಕೆಯಾದ 2ನೇ ಕಂಟೆಂಡರ್ ಇವರೇ.ಅಸಭ್ಯ ಚಿತ್ರಗಳಿಗೆ ಸರಳ ಸೆನ್ಸಾರ್; ವಾಸ್ತವ ಕಥೆಯ ಸಿನಿಮಾಗೆ ತಡೆ: ಜಾವೇದ್ ಅಖ್ತರ್.ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ: ತೋಟಗಳು ಜಲಾವೃತ, ಈರುಳ್ಳಿ ನೀರು ಪಾಲು.ಮಡಿಕೇರಿ | 11 ದಿನ ನಡೆದ ಸಾಂಸ್ಕೃತಿಕ ಉತ್ಸವ; ಪೌರಕಾರ್ಮಿಕರ ಅವಿರತ ದುಡಿಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.