ಮುಂಬೈ: ‘ಸಮಾಜದ ವಾಸ್ತವಗಳನ್ನು ತೆರೆ ಮೇಲೆ ತರುವ ಚಿತ್ರಗಳು ಸೆನ್ಸಾರ್ ಮಂಡಳಿಯ ಅಡೆತಡೆಗಳನ್ನು ಎದುರಿಸುತ್ತಿವೆ. ಮತ್ತೊಂದೆಡೆ ಅಸಭ್ಯತೆ ಹೊಂದಿರುವ ಚಿತ್ರಗಳು ಯಾರ ಕೈಗೂ ಸಿಗದಂತೆ ‘ಸಂದಿ’ಯಲ್ಲಿ ಜಾರಿಹೋಗುತ್ತಿವೆ’ ಎಂದು ಚಿತ್ರಕಥೆ ರಚನೆಕಾರ ಜಾವೇದ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂತರಗಂಗಾ ಮಾನಸಿಕ ಆರೋಗ್ಯ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕೆಟ್ಟ ವೀಕ್ಷಕರಿಂದಲೇ ಕೆಟ್ಟ ಚಿತ್ರಗಳು ಯಶಸ್ಸು ಕಾಣುತ್ತಿವೆ. ದೇಶದಲ್ಲಿ ಅಸಭ್ಯ ಚಿತ್ರಗಳು ಯಾವುದೇ ಅಡೆತಡೆ ಇಲ್ಲದೆ ಮಾನ್ಯತಾ ಪತ್ರ ಪಡೆಯುತ್ತಿವೆ. ಆ ಚಿತ್ರದಲ್ಲಿರುವ ಅಪಮೌಲ್ಯಗಳು ನಿಯಂತ್ರಣ ಸಂಸ್ಥೆಯಲ್ಲಿ ಕುಳಿತವರಿಗೆ ಅರ್ಥವಾಗುತ್ತಿಲ್ಲ ಎಂದೆನಿಸುತ್ತಿದೆ. ಇದು ಒಂದು ರೀತಿಯಲ್ಲಿ ಮಹಿಳೆಯರನ್ನು ಅವಮಾನಿಸುವ ಹಾಗೂ ಸಂವೇದನೆ ಇಲ್ಲದ ಪುರುಷರ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ಸಮಾಜದ ವಾಸ್ತವಕ್ಕೆ ಕನ್ನಡಿ ಹಿಡಿಯುವ ಚಿತ್ರಗಳು ಇಲ್ಲಿ ಅರ್ಹತೆಯನ್ನೇ ಪಡೆಯುವುದಿಲ್ಲ’ ಎಂದಿದ್ದಾರೆ.

ಮಾನಸಿಕ ಆರೋಗ್ಯದ ಮೇಲೆ ಅತಿಯಾದ ಪುರುಷತ್ವದ ಚಿತ್ರಗಳು ಬೀರುವ ಪರಿಣಾಮಗಳ ಕುರಿತು ಮಾತನಾಡಿದ ಅವರು, ‘ಒಂದು ಸಿನಿಮಾ ಎನ್ನುವುದು ಸಮಾಜದ ಕಿಟಕಿ ಇದ್ದಂತೆ. ಅದರಿಂದ ಜಗತ್ತನ್ನು ನೋಡಬಹುದು. ನೋಡಲು ಸಾಧ್ಯವಾಗದಿದ್ದರೆ ಕಿಟಕಿ ಮುಚ್ಚಬಹುದು. ಹಾಗೆಂದ ಮಾತ್ರಕ್ಕೆ ಸಮಾಜದಲ್ಲಿ ನಡೆಯುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ಪುರುಷರ ಮಾನಸಿಕ ಆರೋಗ್ಯ ಉತ್ತಮವಾದರೆ ಇಂಥ ಚಿತ್ರಗಳ ತಯಾರಿಕೆಯೂ ತಗ್ಗಲಿದೆ. ಒಂದೊಮ್ಮೆ ಅವುಗಳು ತಯಾರಾದರೂ, ಅವುಗಳನ್ನು ನೋಡಲು ಚಿತ್ರಮಂದಿರಗಳಿಗೆ ಯಾರೂ ಬರುವುದಿಲ್ಲ. ತೀರಾ ಧಾರ್ಮಿಕರಾದ ಜನರು, ತಮ್ಮ ಬದುಕಿನಲ್ಲಿ ಎದುರಾಗುವ ಕಷ್ಟಗಳಿಗೆ ಎಂದಿಗೂ ದೇವರನ್ನು ಬೈಯುವುದಿಲ್ಲ. ಅದೇ ರೀತಿಯಲ್ಲಿ, ಸಿನಿಮಾದಲ್ಲಿ ಪ್ರೇಕ್ಷಕರೇ ದೇವರು. ಕೆಟ್ಟ ಪ್ರೇಕ್ಷಕರಿಂದಲೇ ಕೆಟ್ಟ ಸಿನಿಮಾಗಳು ಗೆಲ್ಲುತ್ತಿವೆ’ ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

‘ಚಿತ್ರಗಳು ಸಮಾಜದ ಆಗುಹೋಗುಗಳ ದ್ಯೋತಕಗಳು. ನಿರ್ಮಾಪಕರು ಆ ಕಾಲದ ಟ್ರೆಂಡ್ಗಳನ್ನು ಬೆನ್ನುಹತ್ತುತ್ತಾರೆ. ಅವರಿಂದಾಗಿ ಕೆಟ್ಟ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಚಿತ್ರಗಳಲ್ಲಿ ಅಶ್ಲೀಲ ಹಾಡುಗಳೂ ಇದರ ಭಾಗವೇ ಆಗಿದೆ. ಹೀಗಾಗಿ ಇಂಥ ಹಾಡುಗಳ ರಚನೆಗೆ ಬರುವ ಎಲ್ಲಾ ಅವಕಾಶಗಳನ್ನೂ ತಿರಸ್ಕರಿಸಿದ್ದೇನೆ’ ಎಂದು ಹೇಳಿದ್ದಾರೆ.

‘80ರ ದಶಕದಲ್ಲಿ ದ್ವಂದಾರ್ಥದ ಅಥವಾ ಯಾವುದೇ ಅರ್ಥವಿಲ್ಲದ ಹಾಡುಗಳು ಸಿದ್ಧಗೊಂಡಿವೆ. ಆದರೆ ಅಂಥ ಸಿನಿಮಾದ ಭಾಗ ನಾನಾಗಿರಲಿಲ್ಲ. ವಿಪರ್ಯಾಸವೆಂದರೆ, ಅಂಥ ಹಾಡುಗಳೂ ಸೂಪರ್ ಹಿಟ್ ಆಗಿವೆ. ಅವುಗಳನ್ನು ಜನರೇ ಗೆಲ್ಲಿಸಿದ್ದಾರೆ. ‘ಚೋಲಿಕೆ ಪೀಜೆ ಕ್ಯಾ ಹೇ’ ಹಾಡಿಗೆ ತಮ್ಮ 8 ವರ್ಷ ಪುತ್ರಿ ನರ್ತಿಸಿದ್ದಾಳೆ ಎಂದು ಹಲವು ಪಾಲಕರು ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ಕೇಳಿದ್ದೇನೆ. ಸಮಾಜದ ಮೌಲ್ಯವೇ ಹೀಗಿರುವಾಗ, ಅಂಥ ಸಿನಿಮಾ ಹಾಗೂ ಹಾಡುಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಸಿನಿಮಾ ಏನಿದ್ದರೂ ಅಭಿವ್ಯಕ್ತಿಯ ಮಾಧ್ಯಮವಷ್ಟೇ, ಉಳಿದಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಎಂದಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಸಯಾರಾ ಚಿತ್ರದ ಹಾಡುಗಳ ಕುರಿತು ಜಾವೇದ್ ಅಖ್ತರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.