ಶನಿವಾರ, ಸೆಪ್ಟೆಂಬರ್ 25, 2021
29 °C

ಪದಕ ಗೆದ್ದಾಗ ಮಾತ್ರ ಈಶಾನ್ಯ ಭಾರತೀಯರಿಗೆ ಗೌರವ: ಫಿಟ್ನೆಸ್‌ ತಾರೆ ಅಂಕಿತಾ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟ ಮಿಲಿಂದ್ ಸೋಮನ್ ಪತ್ನಿ ಹಾಗೂ ಫಿಟ್ನೆಸ್‌ ತಾರೆ ಖ್ಯಾತಿಯ ಅಂಕಿತಾ ಕೊನ್ವಾರ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಇತ್ತೀಚೆಗೆ ಪ್ರಾದೇಶಿಕ ತಾರತಮ್ಯ ಅಥವಾ ವರ್ಣಭೇದದ ಬಗ್ಗೆ ಅಂಕಿತಾ ಮಾಡಿರುವ ಟ್ವೀಟ್‌ ವಿವಾದಕ್ಕೆ ಕಾರಣವಾಗಿದೆ. ಭಾರತಕ್ಕೆ ಪದಕಗಳು ಬಂದಾಗ ಮಾತ್ರ ಈಶಾನ್ಯ ಭಾರತೀಯರನ್ನು ಗೌರವಿಸಲಾಗುತ್ತದೆ. ಆದರೆ ಬೇರೆ ಸಮಯದಲ್ಲಿ ಕಿರುಕುಳ ನೀಡಿ, ತಾರತಮ್ಯ ಮಾಡಲಾಗುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಇದೇ ಸಮಯದಲ್ಲಿ ಅಂಕಿತಾ ಅವರು ವರ್ಣಭೇದ ಕುರಿತಂತೆ ಮಾಡಿರುವ ಟ್ವೀಟ್‌ ಚರ್ಚೆಗೆ ಗ್ರಾಸವಾಗಿದೆ.  

’ದೇಶಕ್ಕಾಗಿ ಪದಕ ತಂದುಕೊಟ್ಟಾಗ ಮಾತ್ರ ಈಶಾನ್ಯ ಭಾರತದವರು ನಿಜವಾದ ಭಾರತೀಯರಾಗುತ್ತಾರೆ. ಬೇರೆ ಸಮಯದಲ್ಲಿ ಅವರು ಚಿಂಕಿಗಳು, ಚೀನಿಗಳು, ನೇಪಾಳಿಗಳು ಹಾಗೂ ಕೊರೊನಾಗಳು (ಇತ್ತೀಚೆಗೆ ಕರೆಯಲಾಗುತ್ತಿರುವ) ಎಂದು ಕರೆಯಲಾಗುತ್ತದೆ. ದೇಶದಲ್ಲಿ ಜಾತಿ ಭೇದ ಮಾತ್ರವಲ್ಲದೇ ವರ್ಣಭೇದ ನೀತಿ ಸಹ ಜೀವಂತವಾಗಿದ್ದು, ಇದು ನನ್ನ ಅನುಭವದ ಮಾತಾಗಿದೆ ಎಂದು ಅಂಕಿತಾ ಟ್ವೀಟ್‌ ಮಾಡಿದ್ದಾರೆ. 

ಅಂಕಿತಾ ಟ್ವೀಟ್‌ಗೆ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಮೆಂಟ್‌ಗಳನ್ನು ಹಾಕಿದ್ದಾರೆ. ‘ನಾನು ಕೂಡ ಅಂಕಿತಾ ಕೊನ್ವಾರ್‌’  ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ‘ನೀವು  ಮಿಲಿಂದ್‌ ಪತ್ನಿ ಅಂಕಿತಾ’ ಎಂಬುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.

ಭಾರತದಲ್ಲಿ ಜಾತಿಭೇದ ಇರಬಹುದು, ಆದರೆ ವರ್ಣಭೇದ ಇಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಒಲಿಂಪಿಕ್ಸ್‌ ಸಂದರ್ಭದಲ್ಲಿ ಅಂಕಿತಾ ಈ ರೀತಿಯ ಟ್ವೀಟ್‌ ಮಾಡಬಾರದಿತ್ತು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು