‘ಕಾಸ್ಟಿಂಗ್ ಕೌಚ್’ ಭಾರತೀಯ ಚಿತ್ರರಂಗದ ಬಹುದೊಡ್ಡ ಪಿಡುಗು. ಈಗಾಗಲೇ, ಎಲ್ಲಾ ಭಾಷೆಗಳ ಚಿತ್ರರಂಗಗಳಲ್ಲೂ ಹಲವು ನಟಿಯರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮಗಾದ ಕಿರುಕುಳ, ಲೈಂಗಿಕ ಹಿಂಸೆಯ ಬಗ್ಗೆ ಹಂಚಿಕೊಂಡು ಚಿತ್ರರಂಗದ ಹಿಂದಿರುವ ಕರಾಳಮುಖವನ್ನು ತೆರೆದಿಟ್ಟಿದ್ದಾರೆ.

ತೆಲುಗು ನಟಿ ಶ್ರೀರೆಡ್ಡಿ ಟಾಲಿವುಡ್‌ನಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದರು. ಕೆಲವು ನಿರ್ಮಾಪಕರು ಮತ್ತು ನಟರ ಹೆಸರನ್ನು ಹೇಳಿ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು.

ಈಗ ಮೊದಲ ಬಾರಿಗೆ ‘ಬಾಹುಬಲಿ’ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ಬಣ್ಣದಲೋಕದ ಹಿಂದಿರುವ ಕತ್ತಲಕೂಪದ ಬಗ್ಗೆ ಮಾತನಾಡಿದ್ದಾರೆ. ಟಾಲಿವುಡ್‌ನಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅನುಷ್ಕಾ, ‘ಚಿತ್ರರಂಗದಲ್ಲಿ ನಾನು ಕಾಪಾಡಿಕೊಂಡು ಬಂದ ನೇರ ನಡೆ–ನುಡಿಯ ವ್ಯಕ್ತಿತ್ವದಿಂದ ನಾನು ಎಂದಿಗೂ ಅಂತಹ ಪರಿಸ್ಥಿತಿ ಎದುರಿಸಿಲ್ಲ’ ಎಂದು ಉತ್ತರಿಸಿದ್ದಾರೆ.

ಇಷ್ಟನ್ನು ಹೇಳಿ ಅವರು ಸುಮ್ಮನಾಗಿಲ್ಲ. ನನ್ನ ವಿರುದ್ಧ ದಬ್ಬಾಳಿಕೆ ನಡೆಸಲು ಚಿತ್ರರಂಗದಲ್ಲಿ ನಾನು ಯಾರೊಬ್ಬರಿಗೂ ಅವಕಾಶ ನೀಡಿಲ್ಲ. ಚಿತ್ರರಂಗದ ಕೆಲವರು ನಟಿಯರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕಲ್ಪಿಸಿ ದೈಹಿಕವಾಗಿ ಅವರನ್ನು ಬಳಸಿಕೊಳ್ಳಲು ಮುಂದಾಗುವುದು ದೊಡ್ಡ ತಪ್ಪು ಎಂದಿದ್ದಾರೆ.

‘ನಾನು ಯಾವಾಗಲೂನೇರವಂತಿಕೆಯಿಂದ ಇರಲು ಇಚ್ಛಿಸುತ್ತೇನೆ. ಚಿತ್ರರಂಗದಲ್ಲಿಒಳ್ಳೆಯ ಹೆಸರು ಗಳಿಸಲು ಸುಲಭದ ದಾರಿ ಒಳ್ಳೆಯದೇ ಅಥವಾ ಕಠಿಣ ಶ್ರಮದಿಂದ ಬಹುಕಾಲ ಉಳಿಯಬಹುದೇ ಎಂಬುದನ್ನು ನಟಿಯರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದಿದ್ದಾರೆ ಅನುಷ್ಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.