ಶನಿವಾರ, ಮೇ 21, 2022
23 °C

ಪ್ರಜ್ವಲ್‌ ಅಭಿನಯದ ಅರ್ಜುನ್‌ ಗೌಡ ಚಿತ್ರದಲ್ಲಿ ಬಹುಭಾಷಾ ನಟ ರಾಹುಲ್ ದೇವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅರ್ಜುನ್‌ ಗೌಡ’ ರೊಮ್ಯಾಂಟಿಕ್‌ ಸಿನಿಮಾ. ಇದರಲ್ಲಿ ನಟ ಪ್ರಜ್ವಲ್‌ ದೇವರಾಜ್‌ ಮೂರು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಕೀರ್ಣ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಿದ್ದಾರಂತೆ. ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದ್ದು, ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದೆ. ಟ್ರೇಲರ್‌ ಮತ್ತು ಆಡಿಯೊ ಬಿಡುಗಡೆಗೆ ಸಿದ್ಧತೆಯನ್ನೂ ನಡೆಸಿದೆ. ಜನವರಿಗೆ ಜನರ ಮುಂದೆ ಬರುವ ಆಲೋಚನೆ ಚಿತ್ರತಂಡದ್ದು.

ಈ ಚಿತ್ರದ ಪಾತ್ರಕ್ಕಾಗಿ ಪ್ರಜ್ವಲ್‌ ಕಿಕ್‌ ಬಾಕ್ಸಿಂಗ್ ತರಬೇತಿ ಪಡೆದು ನಟಿಸಿದ್ದಾರೆ. ಅವರದು ಬಾಕ್ಸರ್‌ ಪಾತ್ರ. ಒಂದರ್ಥದಲ್ಲಿ ಜಗಮೊಂಡನಾಗಿ ನಟಿಸಿದ್ದಾರೆ.

ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಶಂಕರ್‌. ಅಂದಹಾಗೆ ಚಿತ್ರದಲ್ಲಿ ಬಹುಭಾಷಾ ನಟ ರಾಹುಲ್ ದೇವ್ ಪ್ರಮುಖ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿದ ಸಾಹಸ ಸನ್ನಿವೇಶವೊಂದರ ಶೂಟಿಂಗ್‌ ಬೆಂಗಳೂರಿನಲ್ಲಿ ನಡೆದಿದೆ. ದುಬಾರಿ ವೆಚ್ಚದಲ್ಲಿ ಅಳವಡಿಸಿದ್ದ ಸೆಟ್‍ನಲ್ಲಿ ಈ ಸಾಹಸ ದೃಶ್ಯದ ಚಿತ್ರೀಕರಣ ನಡೆಯಿತು. ಮಾಸ್ ಮಾದ ಸಾಹಸ ನಿರ್ದೇಶನ ಮಾಡಿದ್ದಾರೆ. 

ನಾಯಕಿ ಪ್ರಿಯಾಂಕಾ ತಿಮ್ಮೇಶ್‌ ಬೋಲ್ಡ್‌ ಆಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ಅಮ್ಮನಾಗಿ ‘ಸ್ವರ್ಶ’ ಖ್ಯಾತಿಯ ರೇಖಾ ನಟಿಸಿದ್ದಾರೆ. ರಾಘವೇಂದ್ರ ಕಾಮತ್, ಶಂಕರ್ ಬರೆದಿರುವ ನಾಲ್ಕು ಗೀತೆಗಳಿಗೆ ಧರ್ಮ ವಿಶ್ ಸಂಗೀತ ಸಂಯೋಜಿಸಿದ್ದಾರೆ. ಜೈಆನಂದ್ ಅವರ ಛಾಯಾಗ್ರಹಣವಿದೆ. ಅರ್ಜುನ್ ಕಿಟ್ಟು ಅವರ ಸಂಕಲನವಿದೆ. ರಾಮು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸಾಧುಕೋಕಿಲ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನಾ ಶ್ರೀನಿಧಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಶ್ ಮಂಗಳೂರು, ಹನುಮಂತೇಗೌಡ ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು