ಭಾನುವಾರ, ಆಗಸ್ಟ್ 14, 2022
28 °C

ಕರೀನಾಗೆ ಬಂತು ‘ಸೀತೆ‘ ಆಫರ್‌: ಬೆನ್ನಲೇ ಟ್ರೆಂಡ್‌ ಆಯ್ತು ಬಾಯ್ಕಾಟ್‌ ಕರೀನಾ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದಾರೆ. ಅದೂ #Boycott Kareena Kapoor ಎಂದೂ! ಕರೀನಾ ‘ಸೀತೆ‘ ಆಗುತ್ತಿರುವುದೇ ನೆಟ್ಟಿಗರ ಈ ಆಕ್ರೋಶಕ್ಕೆ ಕಾರಣವಾಗಿದೆ.

ದಕ್ಷಿಣ ಭಾರತದ ಖ್ಯಾತ ಸಿನಿಮಾ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಬರೆದಿರುವ ರಾಮಾಯಣ ಆಧಾರಿತ ‘ಸೀತಾ' ಸಿನಿಮಾ ನಿರ್ಮಾಣವಾಗುತ್ತಿದೆ. ಸೀತೆಯ ಪಾತ್ರದಲ್ಲಿ ನಟಿಸಲು ಕರೀನಾಗೆ ಆಫರ್‌ ಬಂದಿರುವುದೇ #Boycott Kareena Kapoor ಎಂದು ಟ್ರೆಂಡ್‌ ಆಗಲು ಕಾರಣವಾಗಿದೆ.

ಕಳೆದ ಎರಡು ಮೂರು ದಿನಗಳ ಹಿಂದೆ ‌‘ಸೀತಾ‘ ಸಿನಿಮಾದ ನಿರ್ಮಾಪಕರು ಹಾಗೂ ಕರೀನಾ ನಡುವೆ ಮಾತುಕತೆ ನಡೆಯುತ್ತಿದ್ದು ‘ಸೀತೆ‘ಯಾಗಿ ನಟಿಸಲು ಕರೀನಾ ₹12 ಕೋಟಿ ಕೇಳಿದ್ದಾರೆ ಎಂಬುದು ಕೂಡ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದೂಗಳ ಮಹಾಕಾವ್ಯ ರಾಮಾಯಣ ಆಧಾರಿತ ಸೀತಾ ಸಿನಿಮಾದಲ್ಲಿ ನಟಿಸಲು ಕರೀನಾ ಇಷ್ಟು ದೊಡ್ಡ ಮಟ್ಟದ ಸಂಭಾವನೆ ಕೇಳಬಾರದಿತ್ತು. ಆ ಮೂಲಕ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಅಗೌರವ ತೊರಿದ್ದಾರೆ. ಆದ್ದರಿಂದ ಅವರನ್ನು ಬಾಯ್ಕಾಟ್‌ ಮಾಡಬೇಕು ಎಂದು ಟ್ವೀಟ್‌ ಮಾಡುತ್ತಿದ್ದಾರೆ.

ಹಿಂದೂ ದೇವರುಗಳನ್ನು ಅಗೌರವದಿಂದ ಕಾಣವ ಕರೀನಾ ಕಪೂರ್ ಸೀತೆ ಪಾತ್ರ ಮಾಡಲು ಅರ್ಹರಲ್ಲ, ಅವರು ಹಿಂದೂಗಳ ಭಾವನಗಳ ಜೊತೆ ಆಟವಾಡಬಾರದು ಎಂದು ಇನ್ನು ಕೆಲವರು ಟ್ವೀಟ್‌ ಮಾಡುತ್ತಿದ್ದಾರೆ.

ಮತ್ತೆ ಕೆಲವರು ಕರೀನಾ ತೈಮೂರ್‌ಗೆ ಮಾತ್ರ ತಾಯಿ, ನಮಗೆ ಸೀತಾ ಮಾತೆಯಾಗಲು ಸಾಧ್ಯವಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಸೀತಾ ಸಿನಿಮಾ ಅಲೌಕಿಕ್‌ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು