ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾಸ್ತ್ರ: ರಣಬೀರ್–ಆಲಿಯಾ ಭಟ್ ಚಿತ್ರದ ಒಟ್ಟು ಗಳಿಕೆ ₹66.50 ಕೋಟಿ

Last Updated 11 ಸೆಪ್ಟೆಂಬರ್ 2022, 13:01 IST
ಅಕ್ಷರ ಗಾತ್ರ

ಬೆಂಗಳೂರು: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿರುವ, ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರ ‘ಬ್ರಹ್ಮಾಸ್ತ್ರ‘ ಎರಡನೇ ದಿನ ಹಿಂದಿ ಆವೃತ್ತಿ ₹35.50 ಕೋಟಿ ಗಳಿಕೆ ದಾಖಲಿಸಿದೆ. ಇದರ ಮೂಲಕ ಚಿತ್ರದ ಎರಡು ದಿನಗಳ ಒಟ್ಟು ಗಳಿಕೆ ಹಿಂದಿ ಆವೃತ್ತಿಯಲ್ಲಿ ₹66.50 ಕೋಟಿಗೆ ತಲುಪಿದೆ.

ಮೊದಲ ದಿನ ಹಿಂದಿ ಆವೃತ್ತಿ ₹31 ಕೋಟಿ ಮತ್ತು ಇತರ ಭಾಷೆಗಳಲ್ಲಿ ₹4.5 ಕೋಟಿ ಗಳಿಕೆ ಕಂಡಿದೆ ಎಂದು ಬಾಕ್ಸ್ ಆಫೀಸ್ ಇಂಡಿಯಾ ವರದಿ ಹೇಳಿದೆ.

ರಣಬೀರ್–ಆಲಿಯಾ ಜತೆಗೆ ಅಮಿತಾಭ್ ಬಚ್ಚನ್, ನಾಗಾರ್ಜುನ, ಶಾರುಖ್ ಖಾನ್ ಮತ್ತು ಮೌನಿ ರಾಯ್ ಕೂಡ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರ ಎರಡು ದಿನಗಳಲ್ಲಿ ಒಟ್ಟಾರೆ, ಜಾಗತಿಕ ಮಾರುಕಟ್ಟೆಯನ್ನು ಕೂಡ ಪರಿಗಣಿಸಿದರೆ, ₹160 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ನಿರ್ದೇಶಕ ಅಯಾನ್ ಮುಖರ್ಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT